ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ನವೆಂಬರ್ 2021
ನಟ ರಮೇಶ್ ಅರವಿಂದ್ ಅವರು ಇವತ್ತು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ವಿಚಾರ ತಿಳಿದು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.
ಶೋ ರೂಂ ಒಂದರ ಉದ್ಘಾಟನೆಗಾಗಿ ನಟ ರಮೇಶ್ ಅರವಿಂದ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ರಮೇಶ್ ಅರವಿಂದ್, ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಅತಿದೊಡ್ಡ ನಷ್ಟ ಅನುಭವಿಸುತ್ತಿದ್ದೇವೆ. ಎಲ್ಲರಿಗೂ ಅವರೊಂದಿಗೆ ನನೆಪುಗಳಿವೆ. ಅಪ್ಪುಗೆ ನಮನ ಸಲ್ಲಿಸುವ ಉದ್ದೇಶದಿಂದ ನವೆಂಬರ್ 16ರಂದು ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಹೊಸ ಚಿತ್ರ ನ.19ಕ್ಕೆ ರಿಲೀಸ್
ಇನ್ನು, ತಮ್ಮ ನೂತನ ಚಿತ್ರ ಹಂಡ್ರೆಡ್ (100) ಟ್ರೇಲರ್ ಬಿಡುಗಡೆಯಾಗಿದೆ. ನ.19ರಂದು ಸಿನಿಮಾ ತೆರೆ ಕಾಣಲಿದೆ. ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಬಳಕೆ ಕುರಿತ ಕೌಟುಂಬಿಕ ಥ್ರಿಲ್ಲರ್ ಸಿನಿಮಾ ಇದು. ನಟಿ ರಚಿತಾ ರಾಮ್, ಪೂರ್ಣಾ ಸೇರಿದಂತೆ ತಂತ್ರಜ್ಞರ ದೊಡ್ಡ ತಂಡವೇ ನಮ್ಮೊಂದಿಗಿದೆ ಎಂದು ನಟ ರಮೇಶ್ ಅರವಿಂದ್ ತಿಳಿಸಿದರು.
(ಶಿವಮೊಗ್ಗದಲ್ಲಿ ಇದೇ ಮೊದಲು – ಲೈವ್ ಕಿಚಿನ್, ಏಳು ನಿಮಿಷದಲ್ಲಿ ರೆಡಿಯಾಗುತೆ ಕೇಕ್ – ಈಗಲೆ ಫೋನ್ ಮಾಡಿ, ನಿಮ್ಮ ಆರ್ಡರ್ ಬುಕ್ ಮಾಡಿ)

LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






