ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಹಿರಿಯ ನ್ಯಾಯವಾದಿ (Advocate), ಸಾಮಾಜಿಕ ಹೋರಾಟಗಾರ್ತಿ ಮಂಜುಳಾ ದೇವಿ (67) ಭಾನುವಾರ ನಿಧನರಾದರು. ಇವರು ಶಿವಮೊಗ್ಗ ನ್ಯಾಯಾಲಯದ (Court) ಮೊದಲ ಮಹಿಳಾ ನ್ಯಾಯಾವಾದಿ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ತುಂಗಾ ಮೂಲ ಉಳಿಸಿ ಹೋರಾಟ
ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಮಂಜುಳಾ ದೇವಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವಿವಾಹಿತರಾಗಿದ್ದ ಮಂಜುಳಾದೇವಿ ಶಾಲಾ ಗೇಣಿ ಜಮೀನು ಹೋರಾಟ ಸೇರಿ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಇದನ್ನೂ ಓದಿ – ಮಹಿಳೆಯರಿಗೆ ಉಚಿತ ಪ್ರಯಾಣ, ಶಿವಮೊಗ್ಗದಲ್ಲಿ ಭರ್ಜರಿ ರೆಸ್ಪಾನ್ಸ್, ಈತನಕ ಎಷ್ಟು ಮಂದಿ ಓಡಾಡಿದ್ದಾರೆ?
ಚಳವಳಿಗಳ ಜೊತೆಗೆ ವಕೀಲಿ ವೃತ್ತಿಯನ್ನು ಮುಂದುವರೆಸಿದ್ದರು. ಜಿಲ್ಲೆಯ ಹಲವು ಹೆಸರಾಂತ ವಕೀಲರು ಇವರ ಗರಡಿಯಲ್ಲಿ ಕಲಿತಿದ್ದಾರೆ. ರಾಜಕಾರಣದಲ್ಲು ತೊಡಗಿದ್ದ ಮಂಜುಳಾ ದೇವಿ ಅವರು ಶಿವಮೊಗ್ಗ ವಿಧಾನಸಭೆ ಚುನಾವಣೆಗು (Election) ಸ್ಪರ್ಧೆ ಮಾಡಿದ್ದರು. ಜನತಾ ಪಕ್ಷ, ಜನತಾದಳ, ಸಂಯುಕ್ತ ಜನತಾದಳ ಸಂಘಟನೆ ಮಾಡಿದ್ದರು ಎಂದು ವಕೀಲ ಕೆ.ಪಿ.ಶ್ರೀಪಾಲ್ ಸಾಮಾಜಿಕ ಜಾಲತಾಣದಲ್ಲಿ ಮಂಜುಳಾದೇವಿ ಅವರನ್ನು ಸ್ಮರಿಸಿದ್ದಾರೆ.
ಭಾನುವಾರ ಮಂಜುಳಾದೇವಿ ಅವರು ಕೊನೆಯುಸಿರೆಳೆದಿದ್ದು, ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.