ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 JULY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ನ್ಯಾಯಾಲಯದ ಕಲಾಪದಿಂದ ದೂರ ಉಳಿದ ವಕೀಲರು ಶಿವಮೊಗ್ಗ ಲೈವ್.ಕಾಂ : ಬಾದಾಮಿ ನ್ಯಾಯಾಲಯದ ವಕೀಲರೊಬ್ಬರನ್ನು ಬಂಧಿಸುವ ಆದೇಶ ಖಂಡಿಸಿ ಶಿವಮೊಗ್ಗದಲ್ಲಿ ಇವತ್ತು ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ್ದರು. ಶಿವಮೊಗ್ಗದ ಕೋರ್ಟುಗಳಲ್ಲಿ ವಕೀಲರು ಕಲಾಪಕ್ಕೆ ಹಾಜರಾಗಲಿಲ್ಲ. ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ನ್ಯಾಯವಾದಿಗಳು ಕಲಾಪದಿಂದ ದೂರ ಉಳಿದರು. ಹಾಗಾಗಿ ಇವತ್ತು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದ ಕೇಸುಗಳಿಗೆ ಮುಂದಿನ ದಿನಾಂಕ ನೀಡಲಾಗಿದೆ. ಶಿವಮೊಗ್ಗ ಲೈವ್.ಕಾಂ
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾಧಿಕಾರಿ ಕಚೇರಿ ಬೆಳೆ ಹಾನಿ, ರೈತರಿಗೆ ಪರಿಹಾರಕ್ಕೆ ಒತ್ತಾಯ ಶಿವಮೊಗ್ಗ ಲೈವ್.ಕಾಂ : ಬೆಳೆ ಹಾನಿ ಉಂಟಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೆಡಿಎಸ್ ರೈತ ಘಟಕದ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನೆಡಸಲಾಯಿತು. ಐಪಿ ಪಂಪ್ಸೆಟ್ಗಳಿಗೆ ಆಧಾರ್ ಕಾರ್ಡ್ ಜೋಡಣೆ, ಕೃಷಿ ಉಪಕರಣಗಳ ಸಬ್ಸಿಡಿ ಬಿಡುಗಡೆ, ಪಹಣಿಯಲ್ಲಿ ಬೆಳೆ ನಮೂದು ಮಾಡಲು ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ರೈತ ಘಟಕದ ಜಿಲ್ಲಾಧ್ಯಕ್ಷ ಎಂ.ದಾನೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ದಾದಾಪೀರ್, ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜಾ ಸೇರಿದಂತೆ ಹಲವರು ಇದ್ದರು. ಶಿವಮೊಗ್ಗ ಲೈವ್.ಕಾಂ
ಪತ್ರಿಕಾ ಭವನ ವಿದ್ಯಾದಾನದ ಭೂಮಿಯನ್ನು ರೈತರಿಗೆ ಗುತ್ತಿಗೆ ನೀಡಿ ಶಿವಮೊಗ್ಗ ಲೈವ್.ಕಾಂ : ಕೆಂಗಲ್ ಹನುಮಂತಯ್ಯ ಅವರು ಸಿಎಂ ಆಗಿದ್ದಾಗ ವಿವಿಧ ಶಾಲೆಗಳಿಗೆ ದಾನಿಗಳಿಂದ ಭೂ ದಾನ ಕೊಡಿಸಿದ್ದರು. ಆ ಜಮೀನು ಈಗಲು ಮೈಸೂರು ಮಹಾರಾಜರ ಹೆಸರಿನಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದ್ದು ಅದನ್ನು ಸರ್ಕಾರದ ಹೆಸರಿಗೆ ಮಾಡಬೇಕು ಎಂದು ಭೂ ವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿಯ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ. ಈ ಭೂಮಿಯನ್ನು ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಮನಸೋಯಿಚ್ಛೆ ಗುತ್ತಿಗೆಗೆ ನೀಡಿ, ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಸರ್ಕಾರ ಕೂಡಲೆ ಗಮನ ಹರಿಸಿ ಈಗ ಸಾಗುವಳಿ ಮಾಡುತ್ತಿರುವ ರೈತರಿಗೆ 30 ವರ್ಷ ಗುತ್ತಿಗೆಗೆ ನೀಡಿದರೆ ಅನುಕೂಲ ಎಂದು ತಿಳಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಅಬಕಾರಿ ಇಲಾಖೆ ಸಿಬ್ಬಂದಿಗೆ ಕಾರ್ಯಾಗಾರ ಶಿವಮೊಗ್ಗ ಲೈವ್.ಕಾಂ : ಹೊಸ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಮತ್ತು ಅಬಕಾರಿ ಕಾಯ್ದೆ, ಎನ್ಡಿಪಿಎಸ್ ಕಾಯ್ದೆಗಳ ಕುರಿತು ಅಬಕಾರಿ ಇಲಾಖೆ ಸಿಬ್ಬಂದಿಗೆ ಅರಿವು ಕಾರ್ಯಾಗಾರ ನಡೆಸಲಾಯಿತು. ಈ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸುವ, ತನಿಖಾ ಮತ್ತು ದೋಷಾರೋಪಣೆ ಪಟ್ಟಿ ಸಲ್ಲಿಸುವಾಗ ತನಿಖಾಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ಅರಿವು ಮೂಡಿಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಅಬಕಾರಿ ಇಲಾಖೆ ಇವರ ಸಹಯೋಗದೊಂದಿಗೆ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಶಿವಮೊಗ್ಗ ಲೈವ್.ಕಾಂ : ಚೈತನ್ಯ ಅಂತಾರಾಷ್ಟ್ರೀಯ ಆರ್ಟ್ಸ್ ಅಕಾಡೆಮಿ ವತಿಯಿಂದ ವಿವಿಧ ಸಾಧನೆ ಮಾಡಿದವರಿಗೆ ಕೆಚ್ಚೆದೆಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಮೊಗ್ಗದ ಸಮಾಜ ಸೇವಕರು, ಉದ್ಯಮಿ ಡಿ.ಎಸ್.ಚಂದ್ರು (ಸೊಪ್ಪು ಚಂದ್ರು) ಅವರಿಗೆ ಪ್ರಶಸ್ತಿ ನೀಡಲಾಗಿದೆ. ಗೆಳೆಯರ ಬಳಗದ ಪ್ರಶಾಂತ್, ಭೀಮಣ್ಣ, ನಾಗರಾಜ್, ಸಂದೀಪ್, ಅಣ್ಣಪ್ಪ ಸೇರಿದಂತ ಹಲವರು ಇದ್ದರು.ಸೊಪ್ಪು ಚಂದ್ರುಗೆ ಕೆಚ್ಚೆದೆಯ ಕನ್ನಡಿಗ ಪ್ರಶಸ್ತಿ