ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಸೆಪ್ಟಂಬರ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿ ವಿರುದ್ಧ ಕರೆ ನೀಡಿದ್ದ ಬಂದ್‍ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮೆರವಣಿಗೆ ಅವಧಿಯಲ್ಲಿ ಮಾತ್ರ, ಕೆಲವು ಕಡೆ ಬಂದ್ ಮಾಡಲಾಗಿತ್ತು.
ಮೆರವಣಿಗೆ ಸಾಗುವ ಹಾದಿಯಲ್ಲಷ್ಟೇ ಬಂದ್
ಅಶೋಕ ಸರ್ಕಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಆಯೋಜಿಸಲಾಗಿತ್ತು. ಬಿ.ಹೆಚ್.ರೋಡ್, ನೆಹರೂ ರಸ್ತೆ, ಗೋಪಿ ಸರ್ಕಲ್, ಬಾಲರಾಜ್ ಅರಸ್ ರಸ್ತೆ, ಮಹಾವೀರ ಸರ್ಕಲ್‍ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆ ನಡೆದ ಹಾದಿಯಲ್ಲಷ್ಟೆ ಅಂಗಡಿಗಳನ್ನು ಬಂದ್ ಮಾಡಲಾಯಿತು.
ಗಾಂಧಿ ಬಜಾರ್‍ನಲ್ಲಿ ವ್ಯಾಪಾರ ಸುಗಮ
ಶಿವಮೊಗ್ಗ ನಗರದ ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್‍ನಲ್ಲಿ ಅಂಗಡಿಗಳ ಬಾಗಿಲುಗಳನ್ನು ಎಂದಿನಂತೆ ತಗೆಯಲಾಗಿತ್ತು. ಬೆಳಗ್ಗೆ ಜೆಡಿಎಸ್ ಕಾರ್ಯಕರ್ತರು ಬೈಕ್ ಜಾಥಾ ಮಾಡುವ ಮೂಲಕ ಬಂದ್‍ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಆ ವೇಳೆ ಕೆಲವು ನಿಮಿಷ ಅಂಗಡಿಗಳನ್ನು ಬಂದ್ ಮಾಡಿ, ಆ ಬಳಿಕ ಪುನಃ ವ್ಯಾಪಾರ, ವಹಿವಾಟು ಆರಂಭಿಸಲಾಯಿತು.
ಬಸ್ಸು, ಆಟೋ, ಟ್ರ್ಯಾಕ್ಸ್, ವಾಹನ ಎಂದಿನಂತೆ
ಶಿವಮೊಗ್ಗ ನಗರದಲ್ಲಿ ಬಸ್ಸು, ಆಟೋ, ಟ್ರ್ಯಾಕ್ಸ್, ವಾಹನಗಳ ಸಂಚಾರ ಎಂದಿನಂತೆ ಇತ್ತು. ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ ಸಂಚಾಕ್ಕೆ ಯಾವುದೇ ಅಡೆತಡೆ ಇರಲಿಲ್ಲ. ಮೆರವಣಿಗೆ ಅವಧಿಯಲ್ಲಿ ಮಾತ್ರ ಬಸ್‍ಗಳ ಸಂಚಾರಕ್ಕೆ ಸ್ವಲ್ಪ ಸಮಸ್ಯೆಯಾಯ್ತು. ಇನ್ನು ಆಟೋ, ಟ್ರ್ಯಾಕ್ಸ್ ಸಂಚಾರಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ವಾಹನಗಳ ಸಂಚಾರವು ಸುಗಮವಾಗಿತ್ತು. ಈಗ ಶಿವಮೊಗ್ಗ ನಗರ ಎಂದಿನಂತೆ ಇದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]