SHIMOGA, 4 SEPTEMBER 2024 : ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಿಂದ (AIRPORT) ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನೀಡಿದ್ದ ಅನುಮತಿ ಇನ್ನು 20 ದಿನದಲ್ಲಿ ಮುಕ್ತಾಯಗೊಳ್ಳಲಿದೆ. ಒಂದು ವರ್ಷದ ಅವಧಿಗೆ ಲೈಸೆನ್ಸ್ ಅವಧಿ ವಿಸ್ತರಿಸಬೇಕಿದ್ದ ಡಿಜಿಸಿಎ ಈ ಬಾರಿ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಲೈಸೆನ್ಸ್ ಅವಧಿ ವಿಸ್ತರಿಸಿದೆ.
ಒಂದೇ ತಿಂಗಳು ಲೈಸೆನ್ಸ್ ವಿಸ್ತರಣೆ
ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಕಳೆದ ಬಾರಿ ಒಂದು ವರ್ಷದ ಅವಧಿಗೆ ಲೈಸೆನ್ಸ್ ನೀಡಿತ್ತು. ಈ ಅವಧಿ ಆಗಸ್ಟ್ 23ಕ್ಕೆ ಮುಕ್ತಾಯಗೊಂಡಿದೆ. ಲೈಸೆನ್ಸ್ ನವೀಕರಣದ ವೇಳೆ ಕೆಲವು ಕಾರಣ ನೀಡಿ ಲೈಸೆನ್ಸ್ ಅವಧಿಯನ್ನು ಕೇವಲ ಒಂದು ತಿಂಗಳಿಗೆ ವಿಸ್ತರಣೆ ಮಾಡಿದೆ. ಸೆ.23ಕ್ಕೆ ಈ ಅವಧಿ ಮುಗಿಯಲಿದೆ. ಈ ಲೈಸೆನ್ಸ್ ಅವಧಿ ನವೀಕರಣಗೊಳ್ಳದೆ ಇದ್ದರೆ ಶಿವಮೊಗ್ಗದಿಂದ ವಿಮಾನಗಳ ಹಾರಾಟಕ್ಕೆ ತೊಡಕಾಗಲಿದೆ.
ರಾಜ್ಯ ಸರ್ಕಾರದ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ. ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಪರವಾನಗಿ ನೀಡುವಾಗ ಸುರಕ್ಷತೆ ಮತ್ತು ಭದ್ರತೆ ವಿಚಾರಗಳ ಬಗ್ಗೆ ಕೆಲವು ಷರತ್ತು ವಿಧಿಸಿತ್ತು. ಕೆಎಸ್ಐಐಡಿಸಿ ಸಂಸ್ಥೆಯು ಈ ಷರತ್ತುಗಳನ್ನು ಪೂರ್ತಿಯಾಗಿ ಪೂರೈಸಿಲ್ಲ. ಇದೇ ಕಾರಣಕ್ಕೆ ಈಗ ಡಿಜಿಸಿಎ ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್ ಅವಧಿಯನ್ನು ಕೇವಲ ಒಂದು ತಿಂಗಳಿಗೆ ನವೀಕರಿಸಿದೆ.» ಷರತ್ತುಗಳು ಪೂರ್ತಿಯಾಗಿಲ್ಲ
ಡಿಜಿಸಿಎ ನೀಡಿದ ಕಾರಣಗಳೇನು?
ವಿಮಾನ ನಿಲ್ದಾಣದ ರನ್ ವೇ ಸುರಕ್ಷತಾ ಪ್ರದೇಶವು ಮಾನದಂಡಕ್ಕೆ ಅನುಗುಣವಾಗಿಲ್ಲ. ರಕ್ಷಣಾ ಸಾಧನಗಳ ಖರೀದಿ ವಿಳಂಬವಾಗಿದೆ. ಫೈರ್ ಸೇಫ್ಟಿ ನೋಡಿಕೊಳ್ಳುವ ಸಿಬ್ಬಂದಿ ಕೊರತೆ ಇದೆ. ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್ಟಿ) ಇಲ್ಲ. ಭದ್ರತಾ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಇವುಗಳನ್ನು ಪೂರೈಸಿದರೆ ಲೈಸೆನ್ಸ್ ನವೀಕರಣ ಮಾಡಲಾಗುತ್ತದೆ ಎಂದು ಡಿಜಿಸಿದೆ ತಿಳಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ » ‘ಸಂಜೆ 6 ಗಂಟೆಗೆ ಮನೆ ಸೇರದಿದ್ದರೆ ಊರು ಬಿಡಬೇಕುʼ, ಕಸ್ತೂರಿ ರಂಗನ್ ವರದಿ ಬಗ್ಗೆ ಮಿನಿಸ್ಟರ್ ಮಹತ್ವದ ಹೇಳಿಕೆ
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ.ರಾಘವೇಂದ್ರ, ಈಚೆಗೆ ಕೆಎಸ್ಐಐಡಿಸಿ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಸಮಸ್ಯೆಗಳ ಕುರಿತು ಚರ್ಚಿಸಿದ್ದೇನೆ. ಅಗತ್ಯ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದೇನೆ. ಕೆಎಸ್ಐಐಡಿಸಿ ಅಧಿಕಾರಿಗಳು ತಕ್ಷಣ ಈ ಸಮಸ್ಯೆಗಳನ್ನು ಪರಿಹರಿಸುವುದು ಸೂಕ್ತ ಎಂದು ತಿಳಿಸಿದರು.‘ಸಮಸ್ಯೆ ಪರಿಹಾರಕ್ಕೆ ಮುಂದಾಗಲಿ’
ಮಧ್ಯ ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣದ
ಮಧ್ಯ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಈಗಾಗಲೇ ಶಿವಮೊಗ್ಗದಿಂದ ಬೆಂಗಳೂರು, ಗೋವಾ, ಹೈದರಾಬಾದ್ ಮತ್ತು ತಿರುಪತಿಗೆ ನಿತ್ಯ ವಿಮಾನಗಳು ಹಾರಾಟ ನಡೆಸುತ್ತಿವೆ. ಇಂಡಿಗೋ ಮತ್ತು ಸ್ಟಾರ್ ಏರ್ಲೈನ್ಸ್ ಸೇವೆ ನೀಡುತ್ತಿವೆ. ಸದ್ಯದಲ್ಲೇ ಸ್ಪೈಸ್ ಏರ್ಲೈನ್ಸ್ ಕೂಡ ವಿಮಾನಯಾನ ಆರಂಭಿಸುವ ಸಾಧ್ಯತೆ ಇದೆ.
ಇದನ್ನೂ ಓದಿ » ಬೈಕುಗಳು ಡಿಕ್ಕಿ, ಓರ್ವ ಸವಾರ ಸಾವು, ಮತ್ತಿಬ್ಬರು ಮೆಗ್ಗಾನ್ ಆಸ್ಪತ್ರೆಗೆ ದಾಖಲು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200