SHIVAMOGGA LIVE NEWS
ಶಿವಮೊಗ್ಗ | ಎಲ್ಲಾ ಸಂಸ್ಕೃತಿಯ ಆಭರಣಗಳು ಒಂದೇ ವೇದಿಕೆಯಲ್ಲಿ ಪ್ರದರ್ಶನ ಮಾಡಲಾಗುತ್ತಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ ಎಂದು ಅರ್ಬನ್ ಇಂಡಿಯಾ ಸಂಸ್ಥೆ ಸಂಸ್ಥಾಪಕಿ ನಿರಂಜನಿ ಹೇಳಿದರು.
ನಗರದ ಎಲ್.ಎಲ್.ಆರ್. ರಸ್ತೆಯಲ್ಲಿರುವ ಮೈತ್ರಿ ಮೈ ಜುವೆಲ್ಸ್ ಚಿನ್ನದ ಮಳಿಗೆಯಲ್ಲಿ ಆಯೋಜಿಸಲಾಗಿರುವ ಆ್ಯಂಟಿಕ್ ಚಿನ್ನದ (ANTIQUE JEWELS) ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆಯರಿಗಾಗಿ ಆ್ಯಂಟಿಕ್ ಚಿನ್ನದ ಉತ್ಸವ ಆಯೋಜಿಸಿರುವುದು ಸಂತಸದ ವಿಷಯವಾಗಿದೆ. ಮದುವೆ, ಹಬ್ಬ, ಶುಭ ಕಾರ್ಯಗಳಿಗೆ ಮೆರಗು ನೀಡಲು, ಮೈತ್ರಿ ಮೈ ಜುವೆಲ್ಸ್ ಆಭರಣ ಮಳಿಗೆಯಲ್ಲಿ ಈ ವಿನೂತನ ಆ್ಯಂಟಿಕ್ ಚಿನ್ನದ ಉತ್ಸವ ಗಮನ ಸೆಳೆಯುತ್ತಿದೆ ಎಂದರು.
ಮದುವೆ ಸಮಾರಂಭಗಳಿಗೆ, ಹಬ್ಬ-ಹರಿದಿನಗಳಿಗೆ ಆಭರಣಗಳನ್ನು ಕೊಂಡುಕೊಳ್ಳಲು ಮೈತ್ರಿ ಮೈ ಜುವೆಲ್ಸ್ ಉತ್ತಮ ವೇದಿಕೆಯಾಗಿದೆ. ಶಿವಮೊಗ್ಗ ಸೇರಿದಂತೆ, ಸುತ್ತಮುತ್ತಲಿನ ನಾಗರೀಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಮೈತ್ರಿ ಮೈ ಜುವೆಲ್ಸ್ ನ ಆ್ಯಂಟಿಕ್ ಚಿನ್ನದ ಉತ್ಸವ ಸಹಕಾರಿಯಾಗಿದೆ. ವಿವಿಧ ಕುಶಲಕರ್ಮಿಗಳು ತಯಾರಿಸಿದ ವಿಭಿನ್ನ ಶೈಲಿಯ ಆಭರಣಗಳನ್ನು ಈ ಉತ್ಸವದಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಎಲ್ಲಾ ಚಿನ್ನದ ಆಭರಣಗಳು, ಹಾಲ್ ಮಾರ್ಕ್ ಹೊಂದಿರುವುದು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ ಎಂದರು. ಈ ಆಭರಣ ಉತ್ಸವದ ಮಳಿಗೆ ಆಭರಣ ಪ್ರಿಯ ಮಹಿಳೆಯರು ಮತ್ತು ಜನರ ಕಣ್ಣುಗಳಿಗೆ ರಸದೌತಣ ನೀಡಲಿದೆ ಎಂದರು.
ಈ ವೇಳೆ, ಮೈತ್ರಿ ಮೈ ಜುವೆಲ್ಸ್ ಸಿಇಓ ಸೆಂಥಿಲ್ ವೇಲನ್, ಸಂಸ್ಥೆ ನಿರ್ದೇಶಕಿ ಅನಿತಾ, ಬಾಲಸುಂದರಿ, ಬಿಲ್ಡರ್ ವನಿತಾ, ಸ್ವಪ್ನ ಬದರಿನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಭಾರತೀಯ ಶೈಲಿಯ ಒಡವೆಗಳ ಉತ್ಸವ ಆಗಸ್ಟ್ 25 ರವರೆಗೆ ನಡೆಯಲಿದೆ. ಶಿವಮೊಗ್ಗದಲ್ಲಿ ಆ್ಯಂಟಿಕ್ ಚಿನ್ನದ ಉತ್ಸವದಲ್ಲಿ, ಮುಂಜಾನೆಯಿಂದಲೇ ಚಿನ್ನದ ಉತ್ಸವ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಸಂಸ್ಕೃತಿಯ ಆಭರಣಗಳು ಒಂದೇ ಸೂರಿನಡಿಯಲ್ಲಿ ಇಡಲಾಗಿದ್ದು, ಪುರಾತನ ನವನವೀನ ಶೈಲಿಯ ಹಳದಿ ವಜ್ರಾಭರಣಗಳು, ಆ್ಯಂಟಿಕ್ ಚಿನ್ನದ ನೆಕ್ ಲೇಸ್ ಗಳು, ಹಾರ, ಚೌಕರ್, ಆಕರ್ಷಕ ಡಿಸೈನ್ಸ್ ಗಳ ಬಳೆಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ. ಮೇಕಿಂಗ್ ಚಾರ್ಜಸ್ ಇಲ್ಲದೇ, ಆಕರ್ಷಕ ಡಿಸೈನ್ಸ್ ಗಳ ಕಲಾತ್ಮಕತೆಯ ಕುಸುರಿ ಕೆಲಸದ ಆಭರಣಗಳನ್ನು ಪಾರದರ್ಶಕತೆಯಿಂದ ವ್ಯವಹರಿಸಲಾಗುತ್ತಿದೆ ಎಂದು ಮೈತ್ರಿ ಮೈ ಜ್ಯೂವೆಲರ್ಸ್ ಸಂಸ್ಥೆ ತಿಳಿಸಿದೆ.
ಲಕ್ಕಿ ಡಿಪ್ ಬಹುಮಾನ ಕೂಡ ಈ ಮೇಳದಲ್ಲಿ ಇದೆ. ಗ್ರಾಹಕರ ಅಭಿರುಚಿಗೆ ಮತ್ತು ಬಜೆಟ್ ಗೆ ಅನುಗುಣವಾಗಿ, ಚಿನ್ನ ಮತ್ತು ವಜ್ರದ ಆಭರಣಗಳು ಶಿವಮೊಗ್ಗದ ಜನತೆಗಾಗಿ ಈ ಉತ್ಸವದಲ್ಲಿ ಪ್ರದರ್ಶಿಸಲಾಗಿದೆ.
ಆಭರಣ ಪ್ರಿಯರು ಪ್ರದರ್ಶನದಲ್ಲಿ ಆಭರಣವನ್ನು ಕಂಡು ಜನರು ರೋಮಾಂಚನಗೊಳ್ಳುತ್ತಾರೆಂಬ ಭರವಸೆ ನಮಗಿದೆ. ಅಂತರಾಷ್ಟ್ರೀಯ ಗುಣಮಟ್ಟದ ಪ್ರಾಮಾಣಿಕರಣ ಹೊಂದಿದ್ದು, ಶಿವಮೊಗ್ಗ ಸುತ್ತಮುತ್ತಲಿನ ಜನರ ಅಭಿರುಚಿ ಅರಿತು ಅವರ ಇಚ್ಚಗನುಗುಣವಾಗಿ, ಆಭರಣಗಳನ್ನು ತಯಾರಿಸಿ, ಪ್ರದರ್ಶನಕ್ಕಿಡಲಾಗಿದೆ. ಈ ಮೇಳವು ಎಲ್ಲಾ ರೀತಿಯ ಗ್ರಾಹಕರಿಗೆ ಖಂಡಿತವಾಗಿಯೂ ತೃಪ್ತಿದಾಯಕವಾಗಿರುತ್ತದೆ. ಈ ಪ್ರದರ್ಶನ ಕೇವಲ 6 ದಿನಗಳಾಗಿದ್ದು, ಎಲ್ಲರೂ ಇದರ ಲಾಭ ಪಡೆಯಬೇಕು ಎಂದು ಮೈತ್ರಿ ಮೈ ಜುವೆಲ್ಸ್ ಸಂಸ್ಥೆ ಮನವಿ ಮಾಡಿದೆ.
ಇದನ್ನೂ ಓದಿ – ತೀವ್ರ ಕುತೂಹಲ ಕೆರಳಿಸಿದ್ದ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಚುನಾವಣೆ ಫಲಿತಾಂಶ ಪ್ರಕಟ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200