ಉಡುಪಿ ಸೇನಾ ನೇಮಕಾತಿಗೆ ಶಿವಮೊಗ್ಗದಲ್ಲಿ ಉಚಿತ ತರಬೇತಿ, ಯಾವಾಗ? ಯಾರೆಲ್ಲ ಪಾಲ್ಗೊಳ್ಳಬಹುದು?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 FEBRUARY 2021

ಉಡುಪಿಯಲ್ಲಿ ನಡೆಯುವ ಸೇನಾ ನೇಮಕಾತಿಗೆ ಶಿವಮೊಗ್ಗದಲ್ಲಿ ಉಚಿತ ತರಬೇತಿ ನೀಡಲಾಗುತ್ತಿದೆ. ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮಾತ್ರ ಉಚಿತ ತರಬೇತಿ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಸುಭಾಷ್ ಚಂದ್ರ ತೇಜಸ್ವಿ ಅವರು, ಮಾರ್ಚ್ 17 ರಿಂದ 22ನೇ ತಾರೀಖಿನವರೆಗೆ ಉಡುಪಿಯಲ್ಲಿ ಸೇನಾ ನೇಮಕಾತಿ ರಾಲಿ ನಡೆಯಲಿದೆ. ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಲು ಉಚಿತವಾಗಿ ತರಬೇತಿ ಆಯೋಜಿಸಲಾಗಿದೆ. ಫೆಬ್ರವರಿ 25 ರಿಂದ ಮಾರ್ಚ್ 12ರವರೆಗೆ ಶಿವಮೊಗ್ಗದಲ್ಲಿ ಶಿಬಿರ ನಡೆಯಲಿದೆ ಎಂದರು.

152806704 1333904313637652 3894529238576081024 n.jpg? nc cat=104&ccb=3& nc sid=8bfeb9& nc ohc=2Pr7JE9OAqQAX8DdFNg& nc ht=scontent.fblr4 3

ಆನಂದಪುರದ ಮಲ್ನಾಡ್ ಸೋಲ್ಜರ್ ಕೋಚಿಂಗ್ ಸೆಂಟರ್‍ನ ಕಿಶೋರ್ ಭೈರಾಪುರ ಮಾತನಾಡಿ, ಕಳೆದ ಬಾರಿ ಆನಂದಪುರದ ಮುರುಘಾ ಮಠದ ಆವರಣದಲ್ಲಿ ಆಯೋಜಿಸಿದ್ದ ಉಚಿತ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಯೋಧರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬಾರಿಯುವ ಅದೇ ಮಾದರಿಯ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಯಾರಲ್ಲ ಪಾಲ್ಗೊಳ್ಳಬಹುದು?

ಸೇನಾ ನೇಮಕಾತಿಗೆ ಅಗತ್ಯವಿರುವ ಎಲ್ಲಾ ಬಗೆಯ ತರಬೇತಿಯನ್ನು ಈ ಶಿಬಿರದಲ್ಲಿ ನೀಡಲಾಗುತ್ತದೆ. ಶಿವಮೊಗ್ಗ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ, ದಾವಣಗೆರೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಬಿಜಾಪುರದ ಅಭ್ಯರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಉಡುಪಿ ನೇಮಕಾತಿ ರಾಲಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮಾತ್ರವೆ ತರಬೇತಿಗೆ ಅವಕಾಶವಿದೆ.

ಆಸಕ್ತರು ಸುಭಾಷ್ ಚಂದ್ರ ತೇಜಸ್ವಿ 7975912094, ಕಿಶೋರ್ ಬೈರಾಪುರ 7892548122, ಬಾಬು ಶಾಬಾಜ್‍ 7975163415 ಸಂಪರ್ಕಿಸಬಹುದು.

Leave a Comment