ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಆಗಸ್ಟ್ 2020
ಕಾಂಗ್ರೆಸ್ ಪಕ್ಷದಿಂದ ಆರೋಗ್ಯ ಹಸ್ತ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕಿಟ್ಗಳನ್ನು ಹಸ್ತಾಂತರ ಮಾಡುವ ಮೂಲಕ, ಅಭಿಯಾನಕ್ಕೆ ಚಾಲನೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಭಿಯಾನದಲ್ಲಿ ತೊಡಗಿಸಿಕೊಳ್ಳುವ ಕರೋನ ವಾರಿಯರ್ಸ್ಗೆ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಈ ವೇಳೆ ಕಿಟ್ಗಳನ್ನು ವಿತರಿಸಲಾಯಿತು.
ಏನಿದು ಆರೋಗ್ಯ ಹಸ್ತ ಅಭಿಯಾನ?
ಪ್ರತಿ ವಾರ್ಡು, ಪ್ರತಿ ಹಳ್ಳಿಯಲ್ಲೂ ನಿರಂತರ ಆರೋಗ್ಯ ತಪಾಸಣೆ ನಡೆಸಿ, ಕರೋನ ಸೋಂಕಿನ ಕುರಿತು ಶಂಕೆ ವ್ಯಕ್ತವಾದರೆ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುವುದು ಆರೋಗ್ಯ ಹಸ್ತ ಅಭಿಯಾನದ ಉದ್ದೇಶ. ಇದಕ್ಕಾಗಿ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಮುಖವನ್ನು ರಕ್ಷಿಸುವ ಶೀಲ್ಡ್, ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್, ಡಿಜಿಟಲ್ ಥರ್ಮಮೀಟರ್ ಸೇರಿದಂತೆ ಹಲವು ಸಾಧನಗಳು ಇರಲಿವೆ.
ಆರೋಗ್ಯ ಹಸ್ತ ಅಭಿಯಾನ ಕುರಿತ ವಿಡಿಯೋ ರಿಪೋರ್ಟ್ ಇಲ್ಲಿದೆ
https://www.facebook.com/liveshivamogga/videos/1215206658832375/?t=3
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]