ಶಿವಮೊಗ್ಗ LIVE
SHIVAMOGGA LIVE NEWS | 20 ಮಾರ್ಚ್ 2022
ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಬೈಕ್ ಸವಾರನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.

ಬಸ್ ಚಾಲಕ ಫಯಾಜ್ ಪಾಷಾ ಗಾಯಗೊಂಡಿದ್ದಾರೆ. ಅವರಿಗೆ ಮಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಏನಿದು ಪ್ರಕರಣ?
ಕುಣಿಗಲ್’ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಬೈಪಾಸ್ ರಸ್ತೆಯ ತುಂಗಾ ಸೇತುವೆ ಬಳಿ ತೆರಳುತಿತ್ತು. ದಿಢೀರನೆ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದಾನೆ. ಚಾಲಕ ಫಯಾಜ್ ಪಾಷಾ ಬೈಕ್ ಸವಾರನಿಗೆ ಅಡ್ಡದಿಡ್ಡ ಬೈಕ್ ಓಡಿಸಿದ್ದಕ್ಕೆ ಬೈದಿದ್ದಾರೆ. ಆಕ್ರೋಶಗೊಂಡ ಬೈಕ್ ಸವಾರ ಬಸ್ಸನ್ನು ಅಡ್ಡಗಟ್ಟಿದ್ದಾನೆ.
ಡೋರ್ ತೆಗೆದು ಫಯಾಜ್ ಪಾಷಾ ಅವರನ್ನು ಬಸ್ಸಿನಿಂದ ಕೆಳಗೆ ಎಳೆದು ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಫಯಾಜ್ ಪಾಷಾ ಅವರ ಕಾಲು ಡೋರ್’ಗೆ ಸಿಕ್ಕಿಬಿದ್ದು ಗಾಯವಾಗಿದೆ. ಬಸ್ಸಿನ ಕಂಡಕ್ಟರ್ ಚಾಲಕ ಫಯಾಜ್ ಪಾಷಾ ಅವರನ್ನು ರಕ್ಷಿಸಿದ್ದಾರೆ.
ಫಯಾಜ್ ಪಾಷಾ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾಲಿಗೆ ನಾಲ್ಕು ಹೊಲಿಗೆ ಹಾಕಲಾಗಿದೆ. ಸರ್ಕಾರಿ ಕರ್ತವ್ಯಕ್ಕ ಅಡ್ಡಿಪಡಿಸಿದ ಆರೋಪ ಸಂಬಂಧ ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಕುತ್ತಿಗೆ ಹಿಸುಕಿ ಹೆಂಡತಿಯನ್ನು ಕೊಂದ ಗಂಡ, ಎಲ್ಲಿ? ಕಾರಣವೇನು?

- ಮತ್ತೆ 91 ಸಾವಿರಕ್ಕೆ ತಲುಪಿದ ಅಡಿಕೆ ರೇಟ್ | 12 ಜನವರಿ 2026 | ಅಡಿಕೆ ಧಾರಣೆ

- ನಿಯಂತ್ರಣ ತಪ್ಪಿದ ರಾಯಲ್ ಎನ್ಫೀಲ್ಡ್ ಬೈಕ್, ಅಪಘಾತ, ಸವಾರ ಸ್ಥಳದಲ್ಲೇ ಸಾವು

- ವೈನ್ ಶಾಪ್ನಲ್ಲಿ ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದ ವ್ಯಕ್ತಿ, ಕಾರಣವೇನು?

- ‘ಇಡೀ ದೇಶವೇ ಸ್ವಾಗತಿಸಿದೆ, ಕಾಂಗ್ರೆಸ್ ನಾಯಕರು ಮಾತ್ರ ಹಗುರ ಮಾತಾಡುತ್ತಿದ್ದಾರೆ’, ಏನಿದು?

About The Editor
ನಿತಿನ್ ಆರ್.ಕೈದೊಟ್ಲು






