ವಿನೋಬನಗರ 100 ಅಡಿ ರಸ್ತೆಯಲ್ಲಿ ಸಿಟಿ ಬಸ್ ಕಂಡಕ್ಟರ್, ಡ್ರೈವರ್ ಮೇಲೆ ಹಲ್ಲೆ

 ಶಿವಮೊಗ್ಗ  LIVE 

SHIVAMOGGA LIVE NEWS | 8 ಮಾರ್ಚ್ 2022

ಕಂಡಕ್ಟರ್ ಒಬ್ಬರ ಜೊತೆ ಸಿಟಿ ಬಸ್ಸಿನಲ್ಲಿ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಬಸ್ಸಿನಲ್ಲಿದ್ದ ಲೀವರ್’ನಿಂದ ಕಂಡಕ್ಟರ್ ಮೇಲೆ ಹಲ್ಲೆ ನಡೆಸಲಾಗಿದ್ದು. ಜಗಳ ಬಿಡಿಸಲು ಬಂದ ಡ್ರೈವರ್ ಮೇಲೂ ಹಲ್ಲೆಯಾಗಿದೆ.

Sigandur-Janthre-2026-scaled.

Shimoga Nanjappa Hospital

ಕಂಡಕ್ಟರ್ ಈರಣ್ಣ, ಡ್ರೈವರ್ ಖಲೀಲ್ ಗಾಯಗೊಂಡಿದ್ದಾರೆ. ವಿನೋಬನಗರದ 100 ಅಡಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ.

ಹೇಗಾಯ್ತು ಘಟನೆ?

ವಿನೋಬನಗರ 100 ಅಡಿ ರಸ್ತೆಯಲ್ಲಿ ಚಲಿಸುತ್ತಿದ್ದ ಸಿಟಿ ಬಸ್ ಅಡ್ಡಗಟ್ಟಿ ನಾಲ್ವರು ಬಸ್ ಹತ್ತಿದ್ದಾರೆ. ಏಕಾಏಕಿ ಕಂಡಕ್ಟರ್ ಈರಣ್ಣ ಜೊತೆಗೆ ಜಗಳ ಆರಂಭಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಲೀವರ್’ನಿಂದ ಹಲ್ಲೆ ನಡೆಸಿದ್ದಾರೆ. ಕೂಡಲೆ ಬಸ್ ನಿಲ್ಲಿಸಿದ ಚಾಲಕ ಖಲೀಲ್ ಅವರು ಜಗಳ ಬಿಡಿಸಲು ಬಂದಿದ್ದಾರೆ. ಚಾಲಕನ ಮೇಲೂ ಹಲ್ಲೆಯಾಗಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರೆ ಜಗಳ ಬಿಡಿಸಿ ಕಂಡಕ್ಟರ್, ಡ್ರೈವರ್ ಇಬ್ಬರಿಗು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆ ಸಂಬಂಧ ನಾಗರಾಜ, ರಾಕೇಶ, ರಾಮು, ಪ್ರಶಾಂತ ಎಂಬುವವರ ವಿರುದ್ಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment