ಮಹಾದೇವಿ ಟಾಕೀಸ್ ಎದುರು ನಡುರಾತ್ರಿ ಸೆಕ್ಯೂರಿಟಿ ಗಾರ್ಡ್ ಮೇಲೆ ದಾಳಿ

ಶಿವಮೊಗ್ಗ
LIVE

SHIVAMOGGA LIVE NEWS | 3 ಮಾರ್ಚ್ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗದ ಮಹಾದೇವಿ ಟಾಕೀಸ್ ಮುಂಭಾಗ ಸೆಕ್ಯೂರಿಟಿ ಗಾರ್ಡ್ ಒಬ್ಬರ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಮಧ್ಯರಾತ್ರಿ ಘಟನೆ ಸಂಭವಿಸಿದೆ.

Shimoga Nanjappa Hospital

ಮಣಿ (68) ಎಂಬವವರು ಹಲ್ಲೆಗೊಳಗಾದವರು. ಮಹಾದೇವಿ ಟಾಕೀಸ್ ಮುಂಭಾಗ ಖಾಸಗಿ ಶಾಲೆಗಳ ಬಸ್ ನಿಲುಗಡೆ ಸ್ಥಳವಿದೆ. ಅದರ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಏನಿದು ಘಟನೆ?

ಫೆ.28ರ ನಡುರಾತ್ರಿ ಮಹಾದೇವಿ ಟಾಕೀಸ್ ಮುಂಭಾಗ ಖಾಸಗಿ ಶಾಲೆಗಳ ಬಸ್ ನಿಲುಗಡೆ ಸ್ಥಳಕ್ಕೆ ವ್ಯಕ್ತಿಯೊಬ್ಬ ಬಂದಿದ್ದಾನೆ. ತನ್ನನ್ನು ಹೊಸಮನೆಯ ಚಂದ್ರು ಎಂದು ಪರಿಚಯಿಸಿಕೊಂಡಿದ್ದಾನೆ. ತಾನು ಮಾಚೇನಹಳ್ಳಿಗೆ ಕೆಲಸಕ್ಕೆ ಹೋಗಬೇಕು. ಸ್ವಲ್ಪ ಹೊತ್ತು ಇಲ್ಲಿ ಮಲಗುತ್ತೇನೆ ಎಂದು ತಿಳಿಸಿದ್ದಾನೆ. ಸೆಕ್ಯೂರಿಟಿ ಮಣಿ ಅವರು ಇದಕ್ಕೆ ಒಪ್ಪದಿದ್ದಾಗ ಕಲ್ಲಿನಿಂದ ಹೊಡೆದು ಓಡಿ ಹೋಗಿದ್ದಾನೆ.

ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment