ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS
SHIMOGA | ಬೇಬಿ ಪ್ರಾಪ್ಸ್ ಸ್ಟೂಡಿಯೋ (BABY STUDIO) ಮತ್ತು ಶಿವಮೊಗ್ಗ ಲೈಟ್ಸ್ ಶೋ ರೂಂ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನಟ ವಿನೋದ್ ಪ್ರಭಾಕರ್ ಮತ್ತು ಗಾಯಕ ಆಲ್ ಓಕೆ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ಗಾಂಧಿ ನಗರದಲ್ಲಿರುವ ವಿಧಾತ್ರಿ ಭವನ ಹೊಟೇಲ್ ಮುಂಭಾಗ ವೇದಿಕೆ ನಿರ್ಮಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟ ವಿನೋದ್ ಪ್ರಭಾಕರ್ ಅವರು ಮಾತನಾಡಿ, ಗೀತಾ ಶಿವರಾಜ್ ಕುಮಾರ್ ಅವರು ಚುನಾವಣೆಗೆ ಸ್ಪರ್ಧೆ ಮಾಡಿದ್ದ ವೇಳೆ ಪ್ರಚಾರಕ್ಕೆ ಬಂದಿದ್ದೆ. ಅದೇ ರೀತಿಯ ಪ್ರೀತಿ ಈಗಲು ಸಿಗುತ್ತಿದೆ. ಚಿತ್ರರಂಗಕ್ಕೆ ಬಂದು 20 ವರ್ಷವಾಯ್ತು. ಕಲಾವಿದನಿಂದ ನಿರ್ಮಾಪಕನ ತನಕ ಬೆಳೆಸಿದ್ದೀರ. ತಮ್ಮ ಸಂಸ್ಥೆಯ ವತಿಯಿಂದ ನಿರ್ಮಾಣ ಮಾಡಿರುವ ಲಂಕಾಸುರ ಸಿನಿಮಾ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಡೈಲಾಗ್, ಹಾಡು, ಫೋಟೋ ಶೂಟ್ (BABY STUDIO)
ನಟ ವಿನೋದ್ ಪ್ರಭಾಕರ್ ಅವರು ಸಿನಿಮಾ ಡೈಲಾಗ್ ಹೇಳುವಂತೆ ಅಭಿಮಾನಿಗಳು ಒತ್ತಾಯಿಸಿದರು. ಈ ವೇಳೆ ನವಗ್ರಹ, ರಾಬರ್ಟ್ ಮತ್ತು ಲಂಕಾಸುರ ಸಿನಿಮಾದ ಡೈಲಾಗ್ ಗಳನ್ನು ಹೇಳಿ ರಂಜಿಸಿದರು.
ಇತ್ತ ಆಲ್ ಓಕೆ ಖ್ಯಾತಿಯ ರಾಪ್ ಗಾಯಕ ಅಲೋಕ್ ಅವರಿಂದ ಹಾಡು ಹೇಳಿಸಿ, ಅಭಿಮಾನಿಗಳು ಖುಷಿ ಪಟ್ಟರು. ಬಳಿಕ ಸೆಲ್ಫಿ, ಫೋಟೊಗೆ ಜನ ಮುಗಿಬಿದ್ದರು.
ಶ್ರೀಗಳಿಂದ ಸ್ಟೂಡಿಯೋ ಉದ್ಘಾಟನೆ (BABY STUDIO)
ಬೇಬಿ ಪ್ರಾಪ್ ಸ್ಟೂಡಿಯೋ (BABY STUDIO) ಮತ್ತು ಶಿವಮೊಗ್ಗ ಲೈಟ್ಸ್ ಶೋ ರೂಂನ್ನು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರು ಉದ್ಘಾಟನೆ ಮಾಡಿದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಖ್ಯಾತ ವೈದ್ಯ ಡಾ.ಧನಂಜಯ ಸರ್ಜಿ, ಗುರುಸ್ವಾಮಿ, ಸುನೀಲ್, ಪ್ರವೀಣ್ ಬಿ.ಎನ್. ಹಾಜರಿದ್ದರು.










ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯಾದ್ಯಂತ ಅ.31ರವರೆಗೆ ಜಾನುವಾರು ಜಾತ್ರೆ, ಜಾನುವಾರು ಸಾಗಾಣೆ ನಿಷೇಧ, ಕಾರಣವೇನು?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






