ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಮರಣಶಾಸನವಾಗಿರುವ ಒಳ ಮೀಸಲಾತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಬಂಜಾರ (Banjara) ಸಮುದಾಯದ ಮುಖಂಡರು ಇವತ್ತು ಕುವೆಂಪು ರಂಗಮಂದಿರಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಕೆಎಎಸ್ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ, ಆಗಿದ್ದೇನು?
ಕಪ್ಪು ಪಟ್ಟಿ ಧರಿಸಿ ಬಂಜಾರ ಕನ್ವೆನ್ಷನ್ ಹಾಲ್ ಮುಂಭಾಗದಿಂದ ಮೆರವಣಿಗೆ ನಡೆಸಿದ ಬಂಜಾರ ಸಂಘದ ಪ್ರಮುಖರು, ಸಿದ್ದರಾಮಯ್ಯ ಸರ್ಕಾರ, ಒಳ ಮೀಸಲಾತಿಯಲ್ಲಿನ ಅನ್ಯಾಯದ ವಿರುದ್ಧ ಘೋಷಣೆ ಕೂಗಿದರು. ಕುವೆಂಪು ರಂಗಮಂದಿರದ ಗೇಟ್ ಮುಂಭಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ರಂಗಮಂದಿರಕ್ಕೆ ಮುತ್ತಿಗೆ ಏಕೆ?
ಕುವೆಂಪು ರಂಗಮಂದಿರದಲ್ಲಿ ಸರ್ಕಾರದ ವತಿಯಿಂದ ಸಂತ ಸೇವಾಲಾಲ್ ಜಯಂತಿ ಆಯೋಜಿಸಲಾಗಿತ್ತು. ‘ಬಂಜಾರ ಸಮುದಾಯದ ಭವಿಷ್ಯಕ್ಕೆ ಧಕ್ಕೆ ಉಂಟು ಮಾಡುವ ಒಳ ಮೀಸಲಾತಿ ಜಾರಿಗೊಳಿಸಿ, ಸಂತ ಸೇವಾಲಾಲ್ ಜಯಂತಿ ನಡೆಸಲಾಗುತ್ತಿದೆ. ಸರ್ಕಾರದ ಈ ನಡೆ ಸರಿಯಲ್ಲ’ ಎಂದು ಬಂಜಾರ ಸಮುದಾಯದ ಮುಖಂಡರು ಆರೋಪಿಸಿದರು. ಬಂಜಾರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ಅಶೋಕ್ ನಾಯ್ಕ್, ಪ್ರಮುಖರಾದ ಜಗದೀಶ್ ನಾಯ್ಕ್, ಹೀರಾನಾಯ್ಕ್, ನಾನ್ಯನಾಯ್ಕ್, ಆನಂದ ನಾಯ್ಕ್, ನಾಗೇಶ್ ನಾಯ್ಕ್, ದೇವರಾಜ ನಾಯ್ಕ್, ಹರೀಶ್ ನಾಯ್ಕ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿತು. ಇಲ್ಲಿದೆ ವಿಡಿಯೋ
ಸಭೀಕರಿಲ್ಲದೆ ಜಯಂತಿ ಆಚರಣೆ
ಇನ್ನು, ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಬಂಜಾರ ಸಂಘದ ವತಿಯಿಂದ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು. ರಂಗಮಂದಿರದಲ್ಲಿ ಸಭೀಕರೆ ಇರದೆ ಚೇರುಗಳು ಖಾಲಿ ಉಳಿದಿದ್ದವು. ಇದೇ ಕಾರಣಕ್ಕೆ ರಂಗಮಂದಿರದ ವೇದಿಕೆ ಮೇಲೆ ಬೆರಳೆಣಿಕೆಯಷ್ಟು ಕುರ್ಚಿಗಳನ್ನು ಹಾಕಲಾಯಿತು. ಕೆಲವೇ ಕೆಲವು ಮಂದಿ ಸಂತ ಸೇವಾಲಾಲ್ ಜಯಂತಿ ಅಚರಣೆಯಲ್ಲಿ ಭಾಗವಹಿಸಿದ್ದರು.



ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹನುಮಾನಾಯ್ಕ, ಲೋಕೋಪಯೋಗಿ ಇಲಾಖೆ ಇಇ ಉಮೇಶ್ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಇದ್ದರು.



LATEST NEWS
- ಶಿವಮೊಗ್ಗದಲ್ಲಿ ಬಂಜಾರ ಮುಖಂಡರು ಪೊಲೀಸ್ ವಶಕ್ಕೆ, ಸಭೀಕರಿಲ್ಲದೆ ನಡೆಯಿತು ಸೇವಾಲಾಲ್ ಜಯಂತಿ

- ಶಿವಮೊಗ್ಗದಲ್ಲಿ ಕೆಎಎಸ್ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ, ಆಗಿದ್ದೇನು?

- ಬಿಳಕಿಯಲ್ಲಿ ಅಂಗನವಾಡಿ ಸಹಾಯಕಿ ಮೃತದೇಹ ಪತ್ತೆ

- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

About The Editor
ನಿತಿನ್ ಆರ್.ಕೈದೊಟ್ಲು





