ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 2 ಮೇ 2020
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ಜಿಲ್ಲೆ ಗ್ರೀನ್ ಜೋನ್‍ನಲ್ಲಿದೆ. ಮದ್ಯ ಮಾರಾಟಕ್ಕೆ ಅನುಮತಿ ಸಿಗುತ್ತೋ ಇಲ್ಲವೋ ಅಂತಾ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲೆಯಾದ್ಯಂತ ಬಾರ್‍ಗಳಲ್ಲಿ ಪರಿಶೀಲನೆ ಆರಂಭಿಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಅಧಿಕಾರಿಗಳು ಏನೆಲ್ಲ ಪರಿಶೀಲಿಸುತ್ತಿದ್ದಾರೆ?
ಅಬಕಾರಿ ಆಯುಕ್ತರಿಂದ ಸ್ಟಾಕ್ ಚೆಕ್ ನಡೆಸುವಂತೆ ನಿರ್ದೇಶನ ಬಂದಿದೆ. ಈ ಹಿನ್ನೆಯಲ್ಲಿ ಮದ್ಯದಂಗಡಿಯಲ್ಲಿ ಇರುವ ದಾಸ್ತಾನು ಪರಿಶೀಲನೆ ನಡೆಸಲಾಗುತ್ತಿದೆ. ಪುಸ್ತಕದಲ್ಲಿ ಎಂಟ್ರಿ ಅಗಿರುವ ದಾಸ್ತಾನು ಪ್ರಮಾಣ ಮತ್ತು ಅಂಗಡಿಯಲ್ಲಿ ಎಷ್ಟು ಸ್ಟಾಕ್ ಇದೆ ಅನ್ನುವುದರ ಪರಿಶೀಲನೆ ನಡೆಸಲಾಗುತ್ತಿದೆ.
ಬಾರ್‌ಗಳಲ್ಲಿ ಗಂಟೆಗಟ್ಟಲೆ ಪರಿಶೀಲನೆ
ಪ್ರತಿ ಅಂಗಡಿಯಲ್ಲೂ ಗಂಟೆಗಟ್ಟಲೆ ಪರಿಶೀಲನೆ ನಡೆಸಲಾಗುತ್ತದೆ. ಬಾರ್‍ಗಳ ಬಾಗಿಲಿಗೆ ಹಾಕಿರುವ ಸೀಲ್ ಪರಿಶೀಲನೆ ನಡೆಸಲಾಗುತ್ತದೆ. ಸೀಲ್ ತೆರೆದು ಅಂಗಡಿಯಲ್ಲಿರುವ ದಾಸ್ತಾನುಗಳ ಲೆಕ್ಕ ಹಾಕಲಾಗುತ್ತದೆ. ಎರಡು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ಕಾರ್ಯ ನಡೆಯಲಿದೆ. ಏಕಕಾಲಕ್ಕೆ ಎಲ್ಲ ತಾಲೂಕುಗಳಲ್ಲೂ ಆಯಾ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಬಾರ್ ಮಾಲೀಕರು ಸ್ಥಳದಲ್ಲಿ ಇರಲಿದ್ದಾರೆ.
ಅಬಕಾರಿ ಡಿಸಿ ವಿಸಿಟ್
ಇನ್ನು, ಬಾರ್‍ಗಳಲ್ಲಿ ಸ್ಟಾಕ್ ಪರಿಶೀಲನೆ ವೇಳೆ ಅಬಕಾರಿ ಉಪ ಆಯುಕ್ತ ಅಜಿತ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಯುಕ್ತರ ಸೂಚನೆಯಂತೆ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ ಇದರಲ್ಲಿ ವ್ಯತ್ಯಾಸ ಕಂಡು ಬಂದರೆ ಬಾರ್ ಅಥವಾ ಬಾರ್ ಅಂಡರ್ ರೆಸ್ಟೋರೆಂಟ್‍ನ ಪರವಾನಗಿಯನ್ನೇ ರದ್ದುಪಡಿಸಲಾಗುತ್ತದೆ ಎಂದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]