ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 JULY 2024
SHIMOGA : ಅಳಿಯ (Son In Law) ಪ್ರತಾಪ್ ಕುಮಾರ್ (41) ಆತ್ಮಹತ್ಯೆ ವಿಚಾರ ತಿಳಿದು ಮಾಜಿ ಸಚಿವ ಬಿ.ಸಿ.ಪಾಟೀಲ್ ದಿಗ್ಭ್ರಾಂತರಾಗಿದ್ದರು. ಮೆಗ್ಗಾನ್ ಆಸ್ಪತ್ರೆಯ ಶವಾಗಾರದ ಬಳಿ ಬಂದಿದ್ದ ಅವರು ಕಾರಿನಿಂದ ಕೆಳಗಿಳಿಯದೆ, ಯಾರೊಂದಿಗು ಮಾತನಾಡದೆ ಕೆಲ ಹೊತ್ತು ಕುಳಿತಿದ್ದರು. ಸಂಸದ ಬಿ.ವೈ.ರಾಘವೇಂದ್ರ ಸಾಂತ್ವನ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ಥಳಕ್ಕೆ ಬಂದಾಗ ಬಿ.ಸಿ.ಪಾಟೀಲ್ ಕಾರಿನಿಂದ ಕೆಳಗಿಳಿದರು.
‘ಬೆಳಗ್ಗೆ ಜೊತೆಗೆ ತಿಂಡಿ ತಿಂದಿದ್ದರು’
ಇದೆ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿ.ಸಿ.ಪಾಟೀಲ್, ‘ಇವತ್ತು ಬೆಳಗ್ಗೆ ಒಟ್ಟಿಗೆ ತಿಂಡಿ ತಿಂದಿದ್ದೆವು. ತಮ್ಮ ಊರು ಚನ್ನಗಿರಿಯ ಕತ್ತಲಗೆರೆಗೆ ಹೋಗಿ ಬರುವುದಾಗಿ ಪ್ರತಾಪ್ ತಿಳಿಸಿದರು. ಮಧ್ಯಾಹ್ನ ಪ್ರತಾಪ್ ಅವರ ಸಹೋದರ ಪ್ರಭು ಅವರು ಕರೆ ಮಾಡಿ ಪ್ರತಾಪ್ ಎಲ್ಲಿದ್ದಾನೆ ತಿಳಿಯುತ್ತಿಲ್ಲ. ಗುಳಿಗೆ ನುಂಗಿದ್ದಾನೆ ಅಂತಾ ಸುದ್ದಿ ಬಂದಿದೆ ಪತ್ತೆ ಹಚ್ಚಿಸಿ ಎಂದು ಕೇಳಿದರು. ಪ್ರತಾಪ್ನ ಮೊಬೈಲ್ಗೆ ಎಷ್ಟೆ ಕರೆ ಮಾಡಿದರು ಫೋನ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ದಾವಣಗೆರೆ ಡಿವೈಎಸ್ಪಿ, ಹೊನ್ನಾಳಿ ಇನ್ಸ್ಪೆಕ್ಟರ್, ಶಿವಮೊಗ್ಗ ಎಸ್.ಪಿ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದೆ.’ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
‘ಸತತ ಪ್ರಯತ್ನದ ಬಳಿಕ ಪ್ರತಾಪ್ ಫೋನ್ ಸಂಪರ್ಕಕ್ಕೆ ಸಿಕ್ತು. ಎಲ್ಲಿದ್ದಿಯ ಎಂದು ಕೇಳಿದಾಗ ಆತನ ಮಾತಿನಲ್ಲಿ ಸ್ಪಷ್ಟತೆ ಇರಲಿಲ್ಲ. ಹೊನ್ನಾಳಿ – ಮಲೆಬೆನ್ನೂರು ರಸ್ತೆಯಲ್ಲಿರುವುದಾಗಿ ತಿಳಿಸಿದ್ದರು. ಕೂಡಲೆ ಎಲ್ಲರಿಗು ವಿಚಾರ ತಿಳಿಸಿದ್ದೆ. ಪ್ರತಾಪ್ನನ್ನು ಹೊನ್ನಾಳಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರ ಬಳಿ ನಾನೆ ಫೋನ್ ಮಾಡಿ ಮಾತನಾಡಿದಾಗ, ಜೋಳಕ್ಕೆ ಸಿಂಪಡಿಸುವ ಗುಳಿಗೆ ನುಂಗಿದ್ದಾರೆ ಎಂದು ತಿಳಿಸಿದರು. ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಕರೆದೊಯ್ಯಲು ಯೋಜಿಸಿದೆವು. ಶಿವಮೊಗ್ಗವೆ ಹತ್ತಿರದಲ್ಲಿದೆ ಎಂಬ ಕಾರಣಕ್ಕೆ ಇಲ್ಲಿಗೆ ಕರೆತರಲಾಗುತ್ತಿತ್ತು. ನಾನು ಶಿವಮೊಗ್ಗಕ್ಕೆ ಬರುತ್ತಿದ್ದೆ. ಮಾರ್ಗ ಮಧ್ಯೆದಲ್ಲಿ ಪ್ರತಾಪ್ ಕೊನೆಯುಸಿರೆಳೆದ ವಿಚಾರ ತಿಳಿಯಿತು.ʼ ಎಂದು ಬಿ.ಸಿ.ಪಾಟೀಲ್ ವಿವರಿಸಿದರು.‘ಫೋನ್ ಸಿಕ್ತು, ತೊದಲು ಮಾತುʼ
‘ಮಕ್ಕಳಾಗಿರಲಿಲ್ಲ ಎಂಬ ಕೊರಗು ಇತ್ತುʼ
‘ಪ್ರತಾಪ್ಗೆ ಮಕ್ಕಳಾಗಿರಲಿಲ್ಲ ಎಂಬ ಕೊರಗು ಇತ್ತು. ಬಾಡಿಗೆ ತಾಯ್ತನದ (ಸೆರೊಗೆಸಿ) ಮೂಲಕ ಮಕ್ಕಳು ಪಡೆಯುವ ಕುರಿತು ಈಚೆಗೆ ಬೆಂಗಳೂರಿನಲ್ಲಿ ವಕೀಲರೊಬ್ಬರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಸೆರೊಗೆಸಿ ಮಾಡಿಸಲು ನ್ಯಾಯಾಲಯದ ಅನುಮತಿ ಬೇಕು. ಹಾಗಾಗಿ ಅದರ ಸಿದ್ಧತೆ ನಡೆಸಲಾಗುತ್ತಿತ್ತು. ಈಚೆಗೆ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗಿತ್ತು. ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಿದ್ದೆವು. ಅಲ್ಲಿ ಹೋಗಿ ಬಂದ ಮೇಲೆ ತುಂಚಾ ಚನ್ನಾಗಿ ಆಗಿದ್ದರು. ಮತ್ತೆ ಮದ್ಯ ಸೇವನೆ ಆರಂಭಿಸಿದ್ದರು ಎಂಬ ಮಾಹಿತಿ ಇತ್ತು. ನನಗೆ ಮಗನಂತೆಯೇ ಇದ್ದರು. ನನ್ನ ರಾಜಕೀಯ ವಿಚಾರ, ಜಮೀನುಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು.ʼ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಇದನ್ನೂ ಓದಿ – ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಆತ್ಮಹತ್ಯೆ, ಶಿವಮೊಗ್ಗದಲ್ಲಿ ಮರಣೋತ್ತರ ಪರೀಕ್ಷೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422