SHIVAMOGGA LIVE NEWS | 7 ಮಾರ್ಚ್ 2022
ಹರ್ಷ ಹತ್ಯೆ ಖಂಡಿಸಿ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ವೇಳೆ ಜೇನು ದಾಳಿಯಾಗಿ ಹಲವರು ಗಾಯಗೊಂಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಜೇನುಗಳು ದಾಳಿ ನಡೆಸಿವೆ. ಹಲವರಿಗೆ ಜೇನುಗಳು ಕಚ್ಚಿದ್ದು, ಗಾಯಗೊಂಡಿದ್ದಾರೆ.
ಇದನ್ನೂ ಓದಿ | ಹರ್ಷ ಹತ್ಯೆ ವಿರುದ್ಧ ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಗಳ ಆಕ್ರೋಶ
ಜಿಲ್ಲಾಧಿಕಾರಿ ಕಚೇರಿ ಮತ್ತು ತಾಲೂಕು ಕಚೇರಿ ಕಟ್ಟಡದಲ್ಲಿ ಹಲವು ಕಡೆಗೆ ಜೇನುಗಳು ಗೂಡು ಕಟ್ಟಿವೆ. ಇವತ್ತು ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಜೇನುಗಳು ಗೂಡು ಬಿಟ್ಟು ಮೇಲೆದ್ದಿವೆ. ಕೂಡಲೆ ಕೆಲವು ಪೇಪರ್, ಒಣಗಿದ ಎಲೆಗಳಿಗೆ ಬೆಂಕಿ ಹಚ್ಚಿದ್ದರಿಂದ ಜೇನುಗಳು ಬೇರೆಡೆಗೆ ಹಾರಿದವು.
ಜೇನು ದಾಳಿಯಿಂದ ಗಾಯಗೊಂಡಿದ್ದ ಕೆಲವರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200