ಶಿವಮೊಗ್ಗದಲ್ಲಿ 2 ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ, ಯಾಕೆ? ಸಭೆಯಲ್ಲಿ ಯಾರೆಲ್ಲ ಏನೇನು ಹೇಳಿದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 SEPTEMBER 2023

SHIMOGA : ಗಣೇಶ ಚತುರ್ಥಿ ಮತ್ತು ಈದ್‌ ಮಿಲಾದ್‌ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸೋಣ ಎಂಬ ಸಂದೇಶ ಸಾರುವ ಸೌಹಾರ್ದ ಹಬ್ಬವನ್ನು  ಶಿವಮೊಗ್ಗದಲ್ಲಿ ಆಚರಿಸಲಾಯಿತು. ಈ ಹಿನ್ನೆಲೆ ನಗರದಲ್ಲಿ 2 ಸಾವಿರ ಅಡಿ ಉದ್ದದ ಬಹೃತ್‌ ತ್ರಿವರ್ಣ (Tricolor) ಹಿಡಿದು ನಾಗರಿಕರು ಮೆರವಣಿಗೆ ಮಾಡಿದರು.

shanthi9

ಶಿವಮೊಗ್ಗ ಮೆಡಿಕಲ್‌ ಕಾಲೇಜು ಮುಂಭಾಗ ಸೌಹಾರ್ದ ಹಬ್ಬಕ್ಕೆ ಚಾಲನೆ ನೀಡಲಾಯಿತು. ಅಲ್ಲಿಂದ 2 ಸಾವಿರ ಅಡಿ ಉದ್ದದ ತ್ರಿವರ್ಣ ಹಿಡಿದು ಜನರು ಮೆರವಣಿಗೆ ನಡೆಸಿದರು. ಅಶೋಕ ಸರ್ಕಲ್‌, ಬಿ.ಹೆಚ್‌.ರಸ್ತೆ, ಅಮೀರ್‌ ಅಹಮದ್‌ ಸರ್ಕಲ್‌, ಶಿವಪ್ಪನಾಯಕ ಪ್ರತಿಮೆ ಮೂಲಕ ಸೈನ್ಸ್‌ ಮೈದಾನ ತಲುಪಿತು.

shanthi7

ವಿವಿಧ ಸಂಘಟನೆಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶಾಂತಿ, ಸೌಹಾರ್ದತೆ ಪರ ಘೋಷಣೆ ಕೂಗಿದರು.

shanthi6

ಮಠಾಧೀಶರು, ಮೌಲ್ವಿಗಳು ಮತ್ತು ಪಾದ್ರಿಗಳು ಕೈ ಕೈ ಹಿಡಿದು ಹೆಜ್ಜೆ ಹಾಕಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಭಾಗಹಿಸಿದ್ದರು. ಸೈನ್ಸ್‌ ಮೈದಾನದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿತ್ತು.

ಇದನ್ನೂ ಓದಿ – ಗಣೇಶ ಹಬ್ಬ, ಈದ್ ಮಿಲಾದ್, ಶಿವಮೊಗ್ಗದಲ್ಲಿ ಮಿನಿಸ್ಟರ್ ನೇತೃತ್ವದಲ್ಲಿ ಮಹತ್ವದ ಮೀಟಿಂಗ್, ಏನೆಲ್ಲ ಚರ್ಚೆಯಾಯ್ತು?

shanthi8

ಯಾರೆಲ್ಲ ಏನೇನು ಹೇಳಿದರು?

ಧರ್ಮ ಅನ್ನುವುದು ನಡವಳಿಕೆಯಲ್ಲಿ ಇರಬೇಕು. ಇಡೀ ಜಗತ್ತು ಒಂದು ಮನೆ ಇದ್ದಂತೆ. ಎಲ್ಲರು ಒಂದು ಕುಟುಂಬದ ಹಾಗೆ ಇರಬೇಕು. ಅಕ್ಕಪಕ್ಕದವರ ಕುರಿತು ಅನುಮಾನ ಮೂಡದ ಹಾಗಿರಬೇಕು. ಉತ್ಸವ, ಹಬ್ಬಗಳು ಮನುಷ್ಯ ಜಂಜಡ ದೂರ ಮಾಡಿ ಉತ್ಸಾಹ ತುಂಬಲು ಬರುತ್ತವೆ. ಹಬ್ಬಗಳನ್ನು ಎಲ್ಲರು ಕೂಡಿ ಆನಂದಿಸುವಂತಾಗಬೇಕು.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬೆಕ್ಕಿನ ಕಲ್ಮಠ

shanthi4

ವೈವಿಧ್ಯತೆ ನಮ್ಮ ಜೀವನದ ಜೀವನಾಡಿ. ಇದನ್ನು ತೆಗೆದು ಹಾಕಲು ಯತ್ನಿಸುವುದು ಸರಿಯಲ್ಲ. ಧರ್ಮಗಳು ಒಂದೇ ದೇವರನ್ನು ಸೇರಲು ಇರುವ ಅನ್ಯಾನ್ಯ ಮಾರ್ಗ. ಆದ್ರೆ ಇದೆ ಧರ್ಮವನ್ನು ಕೆಟ್ಟ ಉದ್ದೇಶಕ್ಕೆ ಬಳಸಬಾರದು. ಧರ್ಮಾಂಧತೆ ತೊಲಗಿಸಲು ವಿದ್ಯಾಭ್ಯಾಸ ಮುಖ್ಯ. ಎಲ್ಲ ಧರ್ಮದ ಅರಿವು ಎಲ್ಲರಲ್ಲಿ ಇದ್ದಲ್ಲಿ ಸಮಾನತೆಯಿಂದ ಬಾಳಲು ಸಾದ್ಯ. ವಾಟ್ಸಪ್‌ನ್ನೇ ಯುನಿವರ್ಸಿಟಿ ಎಂದು ಭಾವಿಸಿದವರು ಇದ್ದಾರೆ. ತಪ್ಪು ಸಂದೇಶವನ್ನು ವೈರಲ್ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಬೇಕು.ಫಾ. ಸುನಿಲ್‌ ರೋಡ್ರಿಗಸ್‌, ಕ್ರೈಸ್ತ ಧರ್ಮಗುರು

shanthi3

ಚಂದ್ರಯಾನ ಯಶಸ್ಸಿಗೆ ಸರ್ವ ಧರ್ಮದ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ಇನ್ಮುಂದೆ ಚಂದ್ರನಲ್ಲಿ ಗಣಪತಿ, ಈದ್ ಹಬ್ಬ ಆಚರಣೆ ಮಾಡುವಂತಾಗಬೇಕು. ಆಯಾ ಧರ್ಮದ ಕುರಿತು ಸಂದೇಶ ನೀಡಬೇಕಾದ್ದು ಧರ್ಮ ಗುರುಗಳು. ರಾಜಕಾರಣಿಗಳು ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಅವರು ಧಾರ್ಮಿಕ ವಿಚಾರಗಳಿಗೆ ಬರಬಾರದು.ಲತೀಫ್‌ ಷರೀಫ್‌, ಇಸ್ಲಾಂ ಧರ್ಮ ಗುರು

shanthi2

shanthi1

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment