ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಜನವರಿ 2022
ಹೇಳುವುದಕ್ಕೆ ಇದು ಹೈಪ್ರೊಫೈಲ್ ಏರಿಯಾ. ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಮನೆಗಳು ಇಲ್ಲಿವೆ. ಆದರೆ ಕತ್ತಲಾಗುತ್ತಿದ್ದಂತೆ ಈ ಜಾಗ ರಂಗು ಪಡೆದುಕೊಳ್ಳುತ್ತದೆ. ಕಾರು, ಬೈಕುಗಳಲ್ಲಿ ಬಂದು ನಿಂತು ಪಾರ್ಟಿ ಮಾಡುವವರಿಗೆ ಇದು ಸುರಕ್ಷಿತ ತಾಣವಾಗುತ್ತಿದೆ. ಅದಕ್ಕೆ ಸಾಕ್ಷಿ ಇಲ್ಲಿ ಬಿದ್ದಿರುವ ಬಾಟಲಿಗಳು, ಮದ್ಯದ ಪೌಚುಗಳು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದು ಶಿವಮೊಗ್ಗದ ಬಸವನಗುಡಿ ಮುಖ್ಯ ರಸ್ತೆಯಲ್ಲಿನ ದುಸ್ಥಿತಿ. ಈ ಕುರಿತು ಶಿವಮೊಗ್ಗ ಲೈವ್.ಕಾಂಗೆ ಶಿವಾನಂದ ಎಂಬುವವರು ವಿಡಿಯೋ ಸಹಿತ ಮಾಹಿತಿ ನೀಡಿದ್ದಾರೆ.
ಡಿಸಿ ಕಾಂಪೌಂಡು, ಸ್ಕೂಲು, ಸ್ಟೇಡಿಯಂ
ಬಸವನಗುಡಿ ಮುಖ್ಯರ ರಸ್ತೆಯು ಇಲ್ಲಿ ತಿರುವು ಪಡೆಯುತ್ತದೆ. ಒಂದೆಡೆ ಸರ್ವೋದಯ ಶಾಲೆ, ಮತ್ತೊಂದೆಡೆ ನೆಹರೂ ಸ್ಟೇಡಿಯಂ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಜಿಲ್ಲಾಧಿಕಾರಿ ಮನೆ ಕಾಂಪೌಂಡ್ (ಡಿಸಿ ಕಾಂಪೌಂಡ್) ಇದೆ. ಇಂತಹ ಜಾಗ ಕುಡುಕರ ಅಡ್ಡೆಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ.
ಡಿಸಿ ಕಾಂಪೌಂಡ್ ಪಕ್ಕದಲ್ಲಿ ಕತ್ತಲಾಗುತ್ತಿದ್ದಂತೆ ಕೆಲವರು ಕಾರು, ಬೈಕುಗಳಲ್ಲಿ ಬಂದು ನಿಂತು ಮದ್ಯ ಸೇವಿಸುತ್ತಾರೆ ಎಂದು ಆರೋಪಿಸಲಾಗಿದೆ. ಈ ಜಾಗದಲ್ಲಿ ಅಂಗಡಿ, ಮನೆಗಳಿಲ್ಲ. ಹಾಗಾಗಿ ಇಲ್ಲಿ ಯಾರೆ ಬಂದು ನಿಂತರೂ ಪ್ರಶ್ನಿಸುವವರಿಲ್ಲ. ಹಾಗಾಗಿ ಕಾರುಗಳನ್ನು ತಂದು ನಿಲ್ಲಿಸಿಕೊಂಡು ಸಲೀಸಾಗಿ ಪಾರ್ಟಿಗಳನ್ನು ನಡೆಸುತ್ತಿದ್ದಾರೆ ಎಂದು ಜನ ಆರೋಪಿಸುತ್ತಾರೆ.
ಸಾಕ್ಷಿ ಹೇಳುತ್ತವೆ ಬಾಟಲಿಗಳು
ಮದ್ಯ ಸೇವಿಸಿದವರು ಬಾಟಲಿಗಳನ್ನು ಅಲ್ಲಿಯೇ ಇಟ್ಟು ಹೋಗುತ್ತಿದ್ದಾರೆ. ಬೆಳಗ್ಗೆ ವಾಕಿಂಗ್, ಜಾಗಿಂಗ್ ಬರುವವರಿಗೆ ಈ ಬಾಟಲಿಗಳು ದರ್ಶನ ನೀಡುತ್ತವೆ. ಇನ್ನು, ಸರ್ವೋದಯ ಶಾಲೆಗೆ ಬರುವ ಮಕ್ಕಳು ಕೂಡ ಬಾಟಲಿಗಳನ್ನು ನೋಡಿಕೊಂಡೆ ತರಗತಿಗೆ ತೆರಳುವ ದುಸ್ಥಿತಿ ಎದುರಾಗಿದೆ.
ಶಾಲೆಯಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಮದ್ಯ, ಗುಟ್ಕಾ, ಸಿಗರೇಟು ಮಾರಾಟ ನಿಷೇಧವಿದೆ. ಆದರೆ ಮದ್ಯ ಸೇವಿಸಿ ಬಾಟಲಿಗಳನ್ನು ಬಿಸಾಡಿದರೆ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲವೆ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.
ಈ ಜಾಗದಿಂದ ನೂರು ಮೀಟರ್ ಒಳಗೆ ಜಯನಗರ ಪೊಲೀಸ್ ಠಾಣೆ ಇತ್ತು. ಆಗ ಇಂತಹ ಸಮಸ್ಯೆ ಇರಲಿಲ್ಲ. ಈಗ ಮದ್ಯೆ ಸೇವಿಸುವವರಿಗೆ ಇದು ಸುರಕ್ಷಿತ ತಾಣವಾಗಿ ಮಾರ್ಪಾಡಾಗಿದೆ.