SHIVAMOGGA LIVE NEWS
ಶಿವಮೊಗ್ಗ| ಸಾವರ್ಕರ್ ಫೋಟೊ (SAVARKAR FLEX CONTROVERSY) ವಿವಾದ ಶಿವಮೊಗ್ಗ ನಗರದಲ್ಲಿ ಎರಡು ದಿನದ ವ್ಯಾಪಾರ ವಹಿವಾಟನ್ನು (BUSINESS) ಕಸಿದುಕೊಂಡಿದೆ. ಕೋಟ್ಯಂತರ ರೂ. ನಷ್ಟವನ್ನು ಉಂಟ ಮಾಡಿದೆ. ಹಲವರ ತುತ್ತು ಚೀಲಕ್ಕೆ ಕುತ್ತು ತಂದಿದೆ.
ಆ.15ರಂದು ಮಧ್ಯಾಹ್ನ ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ತಕ್ಷಣದಿಂದಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಅಂಗಡಿಗಳನ್ನು ಬಂದ್ ಮಾಡಿಸಲಾಯಿತು. ಇದರಿಂದ ಕೋಟ್ಯಂತರ ರೂ. ನಷ್ಟ ಉಂಟಾಗಿದೆ.
ಶಿವಮೊಗ್ಗ ನಗರದ ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್. ಸುಮಾರು 500 ಮಳಿಗೆಗಳು ಇಲ್ಲಿದ್ದು, ನಗರದ ಒಟ್ಟು ವಹಿವಾಟಿನ ಶೇ.40ರಷ್ಟು ಪಾಲು ವ್ಯಾಪಾರ ಗಾಂಧಿ ಬಜಾರ್ ನಲ್ಲಿ ನಡೆಯುತ್ತದೆ. ದಿನಸಿ, ಜವಳಿ, ಆಭರಣ, ಹೂವು, ಹಣ್ಣು, ತರಕಾರಿ ಸೇರಿದಂತೆ ಎಲ್ಲಾ ಬಗೆಯ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು ಇಲ್ಲಿದ್ದಾರೆ. ಶಿವಮೊಗ್ಗ ನಗರ ಮತ್ತು ತಾಲೂಕಿನ ವಿವಿಧ ರಿಟೇಲ್ ವ್ಯಾಪಾರಿಗಳಿಗೆ ಗಾಂಧಿ ಬಜಾರ್ ಹೋಲ್ ಸೇಲ್ ಅಂಗಡಿಗಳೆ ಆಧಾರ. ಗಾಂಧಿ ಬಜಾರ್ ಬಂದ್ ಆದರೆ ನಗರದಾದ್ಯಂತ ವಹಿವಾಟಿನ ಮೇಲೆ ಪರಿಣಾಮ ಉಂಟಾಗಲಿದೆ. ಕಳೆದ ಫೆಬ್ರವರಿಯಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆ ಒಂದು ವಾರಕ್ಕೂ ಹೆಚ್ಚು ಕಾಲ ಗಾಂಧಿ ಬಜಾರ್ ಬಂದ್ ಆಗಿತ್ತು. ಈಗ ಫ್ಲೆಕ್ಸ್ ವಿವಾದದಿಂದ ಪುನಃ ವಹಿವಾಟು ಸ್ಥಗಿತಗೊಂಡಿದೆ. ಇದರಿಂದ ಗಾಂಧಿ ಬಜಾರ್ ನಲ್ಲಿ ಕೋಟ್ಯಂತರ ರೂ. ನಷ್ಟವಾಗಿದೆ. ಶಿವಮೊಗ್ಗದ ಬಿ.ಹೆಚ್.ರಸ್ತೆ, ನೆಹರೂ ರಸ್ತೆ, ದುರ್ಗಿಗುಡಿ ಕೂಡ ಪ್ರಮುಖ ವಾಣಿಜ್ಯ (BUSINESS) ಕೇಂದ್ರಗಳಾಗಿವೆ. ಇಲ್ಲಿಯು ವ್ಯಾಪಾರ, ವಹಿವಾಟು ಬಿರುಸಾಗಿ ನಡೆಯುತ್ತಿತ್ತು. ಅಮೀರ್ ಅಹಮದ್ ಸರ್ಕಲ್ ಗೆ ಹೊಂದಿಕೊಂಡ ಹಾಗೆ ಬಿ.ಹೆಚ್.ರಸ್ತೆ, ನೆಹರೂ ರಸ್ತೆಗಳಿವೆ. ಸಂಜೆ ವೇಳೆಗೆ ಇಲ್ಲಿ ವ್ಯಾಪಾರ ಬಿರುಸು ಪಡೆಯುತ್ತದೆ. ಆದರೆ ಫ್ಲೆಕ್ಸ್ ವಿವಾದದಿಂದಾಗಿ ಇವೆರಡೂ ರಸ್ತೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಇತ್ತ ದುರ್ಗಿಗುಡಿಯಲ್ಲಿಯು ವ್ಯಾಪಾರ ಕುಂಟಿತವಾಗಿದೆ. ಸುತ್ತಮುತ್ತಲ ಹಲವು ತಾಲೂಕುಗಳಿಗೆ ಶಿವಮೊಗ್ಗ ನಗರವೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ, ಶಿಕಾರಿಪುರ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಎನ್.ಆರ್.ಪುರ, ಶೃಂಗೇರಿ, ಹಾವೇರಿ, ಹೊನ್ನಾಳಿ, ಚನ್ನಗಿರಿ ಸೇರಿದಂತೆ ಹಲವು ತಾಲೂಕಿನ ಜನರು ಶಿವಮೊಗ್ಗ ನಗರದೊಂದಿಗೆ ವ್ಯಾವಹಾರಿಕ ನಂಟು ಹೊಂದಿದ್ದಾರೆ. ಕೋವಿಡ್ ಲಾಕ್ ಡೌನ್ ನಂತರ ದೊಡ್ಡ ಪ್ರಮಾಣದ ಗ್ರಾಹಕರು ಬೇರೆ ದೊಡ್ಡ ಮಾರುಕಟ್ಟೆಗಳತ್ತ ಮುಖ ಮಾಡಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಶಿವಮೊಗ್ಗದತ್ತ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು, ಪದೇ ಪದೆ ಗಲಭೆಗಳು ಆಗುತ್ತಿರುವುದರಿಂದ ಮತ್ತಷ್ಟು ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ವರ್ತಕರಿಗೆ ಎದುರಾಗಿದೆ. ಇದನ್ನೂ ಓದಿ – ಟಿವಿ ಚಾನಲ್’ಗಳಲ್ಲಷ್ಟೆ ‘ಶಿವಮೊಗ್ಗ ಪ್ರಕ್ಷುಬ್ದ’, ಈಗ ಹೇಗಿದೆ ನಗರದ ಪರಿಸ್ಥಿತಿ? ಫ್ಲೆಕ್ಸ್ ವಿವಾದದಿಂದ ಶಿವಮೊಗ್ಗದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾತ್ರಿ 9 ಗಂಟೆವರೆಗೆ ವ್ಯಾಪಾರ ನಡೆಸಲು ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ. ಆದರೆ ಪೊಲೀಸರು ಕೆಲವು ಕಡೆ ಮಧ್ಯಾಹ್ನದ ವೇಳೆಗೆ ಅಂಗಡಿ ಬಂದ್ ಮಾಡಿಸುತ್ತಿದ್ದಾರೆ. ಹಾಗಾಗಿ ನಿಷೇಧಾಜ್ಞೆ ತೆರವಾಗುವವರೆಗೆ ಮಾರುಕಟ್ಟೆ ಸಹಜ ಸ್ಥಿತಿಗೆ ಮರಳುವುದಿಲ್ಲ. ಒಂದು ವಾರದ ವಾರದ ವರೆಗೆ ಪರಿಣಾಮ ಉಂಟಾಗಲಿದೆ. ಶಿವಮೊಗ್ಗ ನಗರದಲ್ಲಿ ನಿತ್ಯ ಕೋಟ್ಯಂತರ ರೂ. ವಹಿವಾಟು (BUSINESS) ನಡೆಯುತ್ತದೆ. ಅಂದಾಜು ಪ್ರಕಾರ ಪ್ರತಿ ತಿಂಗಳು 300 ಕೋಟಿ ರೂ.ಗು ಹೆಚ್ಚು ವ್ಯಾಪಾರವಾಗುತ್ತದೆ. ಕೋವಿಡ್ ಸಂದರ್ಭ ಎರಡು ವರ್ಷ ವರ್ತಕರು ಸಂಕಷ್ಟಕ್ಕೀಡಾಗಿದ್ದರು. ಆ ಬಳಿಕ ಗಲಭೆಗಳು ವರ್ತಕರನ್ನು ಹೈರಾಣಾಗಿಸಿದೆ. ನಗರದ ವರ್ತಕರು ನಷ್ಟ ಅನುಭವಿಸುತ್ತಿದ್ದು, ಹಲವು ಮಳಿಗೆಗಳನ್ನು ಬಂದ್ ಮಾಡುವ ಹಂತಕ್ಕೆ ತಲುಪಿದೆ. ಇದು ಶಿವಮೊಗ್ಗ ನಗರದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುವ ಸಾದ್ಯತೆ ಇದೆ. ಇದನ್ನೂ ಓದಿ – ಶಿವಮೊಗ್ಗ ನಗರದಲ್ಲಿ ವಿಸ್ತರಣೆ ಆಗುತ್ತಾ ನಿಷೇಧಾಜ್ಞೆ, ಎಡಿಜಿಪಿ ಹೇಳಿದ್ದೇನು? ADVERTISEMENT SHIVAMOGGA LIVE WHATSAPP ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. » ಶಿವಮೊಗ್ಗ ಲೈವ್ gmail » Whatsapp Number 7411700200ನಗರದ ವ್ಯಾಪಾರಿಗಳು ಹೈರಾಣು
ಗ್ರಾಹಕರು ಮರಳಿ ಬಾರದ ಆತಂಕ
ಸುಧಾರಿಸಿಕೊಳ್ಳಲು ವಾರ ಬೇಕು
ನಿತ್ಯ ಕೋಟಿ ಕೋಟಿ ವ್ಯವಹಾರ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು