SHIVAMOGGA LIVE NEWS | 17 MARCH 2023
SHIMOGA : ವಾಷಿಂಗ್ ಮೆಷಿನ್ ಟೆಕ್ನಿಷಿಯನ್ ಒಬ್ಬ ನಡು ರಸ್ತೆಯಲ್ಲಿ ಭರ್ಚಿಯಂತಿರುವ ದೊಡ್ಡ ಚಾಕು (Knife) ತೋರಿಸಿ ಜನರಲ್ಲಿ ಆತಂಕ ಮೂಡಿಸಿದ್ದ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಆತನನ್ನು ಬಂಧಿಸಿದ್ದು, ಚಾಕುವನ್ನು ವಶಕ್ಕೆ ಪಡೆದಿದ್ದಾರೆ.
ನಗರದ ನ್ಯೂ ಮಂಡ್ಲಿ ಸರ್ಕಲ್ ಬಳಿ ಘಟನೆ ಸಂಭವಿಸಿದೆ. ತೋಹಿದ್ ಉರ್ ರೆಹಮಾನ್ (20) ಎಂಬಾತನನ್ನು ಬಂಧಿಸಲಾಗಿದೆ. ಈತ ನ್ಯೂ ಮಂಡ್ಲಿ ಸರ್ಕಲ್ ನಲ್ಲಿ ಚಾಕು (Knife) ಪ್ರದರ್ಶಿಸುತ್ತ ಜನರಲ್ಲಿ ಆತಂಕ ಮೂಡಿಸಿದ್ದ.
ಇದನ್ನೂ ಓದಿ – ಶಿವಮೊಗ್ಗದ ಲಕ್ಷ್ಮಿ ಟಾಕೀಸ್ ಇನ್ನು ನೆನಪಷ್ಟೇ, ಟಾಕೀಸ್ ಬಗ್ಗೆ ನಿಮಗೆಷ್ಟು ಗೊತ್ತು? ಮುಂದೇನಾಗುತ್ತೆ ಇಲ್ಲಿ?
ಸ್ಥಳಕ್ಕೆ ಬಂದ ದೊಡ್ಡಪೇಟೆ ಠಾಣೆ ಪೊಲೀಸರು ತೋಹಿದ್ ಉರ್ ರೆಹಮಾನ್ ಅನ್ನು ಬಂಧಿಸಿದ್ದಾರೆ. ಆತನಿಂದ ಸುಮಾರು 20 ಇಂಚು ಉದ್ದದ ಚಾಕುವನ್ನು ವಶಕ್ಕ ಪಡೆಯಲಾಗಿದೆ. ತೋಹಿದ್ ಉರ್ ರೆಹಮಾನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.