ವಿನೋಬನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ, ಸಂಸದರನ್ನು ಭುಜದ ಮೇಲೆ ಕೂರಿಸಿಕೊಂಡು ಕಾರ್ಯಕರ್ತರ ಕುಣಿತ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 13 MARCH 2024

SHIMOGA : ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಹೆಸರು ಪ್ರಕಟವಾದ ಹಿನ್ನೆಲೆ, ಶಿವಮೊಗ್ಗದ ಅವರ ನಿವಾಸದ ಬಳಿ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು. ರಾಘವೇಂದ್ರ ಅವರನ್ನು ಭಜದ ಮೇಲಿರಿಸಿಕೊಂಡು ಕುಣಿದು, ಘೋಷಣೆ ಕೂಗಿದರು.

ಪಟ್ಟಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ವಿನೋಬನಗರದಲ್ಲಿರುವ ರಾಘವೇಂದ್ರ ಅವರ ಮನೆ ಮುಂದೆ ಸಂಭ್ರಮಾಚರಣೆ ಮಾಡಿದರು‌. ಪಟಾಕಿ ಸಿಡಿಸಿ, ಸಿಹಿ‌ ಹಂಚಿ, ಘೋಷಣೆ ಕೂಗಿದರು.

ಇದೆ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ಮತ್ತೊಮ್ಮೆ ನಮ್ಮ ಪಕ್ಷದ ವತಿಯಿಂದ ಸ್ಪರ್ಧೆ ಮಾಡುವ ಆಶೀರ್ವಾದ ಮಾಡಿದ್ದಾರೆ. ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 400 ಪ್ಲೆಸ್ ಸೀಟು ಗೆಲ್ಲಬೇಕು ಎಂಬುದು ಪ್ರಧಾನಿ ಮೋದಿ ಅವರ ಗುರಿ. ಗೆಲವಿಗೆ ಪೂರಕ ವಾತಾವರಣ ಇದೆ. ಪ್ರಧಾನ ಮಂತ್ರಿ ಮೋದಿ ಅವರೇ ಮಾ.18 ರಂದು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಇಲ್ಲಿಂದಲೇ ಪ್ರಚಾರ ಆರಂಭ ಆಗಲಿದೆ ಎಂದರು.

ಇದನ್ನೂ ಓದಿ – ಬಿಜೆಪಿ ಪಟ್ಟಿ, ಈಶ್ವರಪ್ಪ ಕುಟುಂಬದವರ ಕಣ್ಣೀರು, ಫೋನ್ ಕರೆ ಬೆನ್ನಿಗೆ ದಿಢೀರ್ ಹೊರನಡೆದ ಮಾಜಿ ಮಿನಿಸ್ಟರ್

Leave a Comment