ಶಿವಮೊಗ್ಗ ಲೈವ್.ಕಾಂ |SHIMOGA NEWS | 18 NOVEMBER 2020
ಸ್ಕಾಲರ್ಶಿಪ್ ವಿಳಂಬ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ರಾಜ್ಯಾದ್ಯಂತ ಅಭಿಯಾನ ನಡೆಸಲಾಗುತ್ತದೆ ಎಂದು ಸಂಘಟನೆ ರಾಜ್ಯ ಕಾರ್ಯದರ್ಶಿ ಅಶ್ವಾನ್ ಸಾದಿಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವಾನ್ ಸಾದಿಕ್, ಸ್ಕಾಲರ್ಶಿಪ್ ವ್ಯವಸ್ಥೆಯನ್ನು ಸರಳೀಕೃತಗೊಳಿಸಬೇಕು. ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮಂಜೂರಾಗದೆ ಬಾಕಿ ಇರುವ ಎಲ್ಲಾ ಮಾದರಿ ವಿದ್ಯಾರ್ಥಿ ವೇತನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
VIDEO REPORT
ಕಡಿತಗೊಳಿರುವ ಪಿಹೆಚ್ಡಿ ಫೆಲೋಶಿಪ್ ಆದೇಶ ಹಿಂಪಡೆಯಬೇಕು, ದುರುಪಯೋ ಆಗುತ್ತಿರುವ ವಿದ್ಯಾರ್ಥಿ ವೇತನದ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಿಎಫ್ಐ ಒತ್ತಾಯಿಸಿತು.
ಸಂಘಟನೆ ರಾಜ್ಯ ಕಾರ್ಯದರ್ಶಿ ಅಶ್ರಫ್ ದಾವಣಗೆರೆ, ಜಿಲ್ಲಾಧ್ಯಕ್ಷ ಮುಜಾಹಿದ್ ಶಿವಮೊಗ್ಗ ಸುದ್ದಿಗೋಷ್ಠಿಯಲ್ಲಿದ್ದರು.
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ.
ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ