ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 24 OCTOBER 2023
SHIMOGA : ನೇತ್ರಾವತಿ ಆನೆ ಮರಿ ಹಾಕಿದ ಬೆನ್ನಿಗೆ ಜಂಬೂ ಸವಾರಿ ಪ್ಲಾನ್ ಬದಲಾವಣೆ ಮಾಡಲಾಗಿದೆ. ನಾಡದೇವಿ ಚಾಮುಂಡೇಶ್ವರಿಯ ಮೂರ್ತಿ ಇರುವ ಅಂಬಾರಿಯನ್ನು ವಾಹನದಲ್ಲಿ ಕೊಂಡೊಯ್ಯಲು ತೀರ್ಮಾನಿಸಲಾಗಿದೆ. ಸಕ್ರೆಬೈಲಿನ ಸಾಗರ ಮತ್ತು ಹೇಮಾವತಿ ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಅರಣ್ಯಾಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಮತ್ತು ಸದಸ್ಯರ ಜೊತೆಗಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಾಗರ ಮತ್ತು ಹೇಮಾವತಿ ಆನೆಗಳು ಫ್ರೀಡಂ ಪಾರ್ಕ್ವರೆಗೆ ಮೆರವಣಿಗೆಯಲ್ಲಿ ಸಾಗಲಿವೆ. ಮಹಾನಗರ ಪಾಲಿಕೆ ವಾಹನದಲ್ಲಿ ಅಂಬಾರಿಯ ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ – ನೇತ್ರಾವತಿ ಆನೆ ಗರ್ಭಿಣಿ ಅನ್ನುವುದೇ ಯಾರಿಗೂ ಗೊತ್ತಿರಲಿಲ್ಲ..! ಶಿವಮೊಗ್ಗದಲ್ಲಿ ನಡೆಯುತ್ತಾ ಜಂಬೂ ಸವಾರಿ?






