ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಅಕ್ಟೋಬರ್ 2020
ಕೋವಿಡ್ ಲಾಕ್ ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ, ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ನೆರವು ನೀಡಿದೆ. ಶಿವಮೊಗ್ಗದ 57 ಅತಿಥಿ ಉಪನ್ಯಾಸಕರಿಗೆ ನೆರವಿನ ಚೆಕ್ ನೀಡಲಾಗಿದೆ.
VIDEO REPORT
ಸರ್ಕಾರಿ ನೌಕರರ ಸಂಘ ಭವನದಲ್ಲಿ ಆಯೋಜಿಸಿದ್ದ ಆತಿಥ್ಯ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಿಗೆ ತಲಾ 7300 ರುಪಾಯಿಯ ಚೆಕ್ ವಿತರಿಸಲಾಯಿತು. ಸರ್ಕಾರಿ ನೌಕರರ ಸಂಘದ ರಾಜಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಡಿಡಿಪಿಐ ನಾಗರಾಜ್ ಕಾಗಲ್ಕರ್ ಅವರು ಚೆಕ್ ವಿತರಿಸಿದರು.
ಕುಮಾರನಾಯ್ಕ ವರದಿ ಜಾರಿಗೆ
ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವೇತನ ಸೇರಿದಂತೆ ವಿವಿಧ ಸುಧಾರಣೆಗಾಗಿ ಕುಮಾರನಾಯ್ಕ ಆಯೋಗ ರಚಿಸಲಾಗಿತ್ತು. ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದಂತೆ ಕುಮಾರನಾಯ್ಕ ಆಯೋಗದ ವರದಿಯ ಜಾರಿಗೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಇದೆ ವೇಳೆ, ಉಪನ್ಯಾಸಕ ಶ್ರೀಕಾಂತ್ ಅವರು ಯು ಟ್ಯೂಬ್ ವಿಡಿಯೋ ತಯಾರಿ ಮತ್ತು ಪ್ರಸಾರ – ತಾಂತ್ರಿಕ ಮಾಹಿತಿ ಒದಗಿಸಿದರು. ಕೆ.ಎಲ್.ಸೀತಾರಾಮಾಚಾರ್ ಅವರ ಶಿವಮೊಗ್ಗದ ಕಾಳಿಂಗ ಪ್ರಕಾಶನ ಪ್ರಕಟಿಸಿರುವ ಫಿಸಿಕ್ಸ್ ಸಿಂಪ್ಲಿಫೈಯ್ಡ್ ಪುಸ್ತಕ ಬಿಡುಗಡೆ ಮಾಡಲಾಯಿತು.
ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
From Kalinga Publications – book EMINENT ECONOMICS – Author MOHAN RAJ M