SHIVAMOGGA LIVE NEWS | 18 NOVEMBER 2023
ಬಸವ ಕೇಂದ್ರದಿಂದ ಚಿಂತನ ಕಾರ್ತಿಕ
![]() |
ಶಿವಮೊಗ್ಗದ ಬಸವ ಕೇಂದ್ರದಿಂದ ನ.19ರಿಂದ ಡಿ.19ರವರೆಗೆ ಶ್ರೀ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಿಂತನ ಕಾರ್ತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ನ.19 ರಂದು ಸಂಜೆ 6.30ಕ್ಕೆ ನಡೆಯುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಯುಗದ ಸಿರಿ ಮತ್ತು ಯುಗದ ಬೆಳಕು ಪುಸ್ತಕಗಳು ಬಿಡುಗಡೆಯಾಗಲಿವೆ. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡರು ಪುಸ್ತಕ ಬಿಡುಗಡೆ ಮಾಡುವರು. ಕಾದಂಬರಿಕಾರ ಯ.ರು.ಪಾಟೀಲ (ಸವದತ್ತಿ) ಕಾರ್ಯಕ್ರಮ ಉದ್ಘಾಟಿಸುವರು. ಬಸವ ಕೇಂದ್ರದ ಅಧ್ಯಕ್ಷ ಬೆನಕಪ್ಪ ಅಧ್ಯಕ್ಷತೆ ವಹಿಸುವರು. ವಿದ್ಯುತ್ ಇಲಾಖೆ ವೀರಶೈವ ನೌಕರರ ಸಂಘದ ಅಧ್ಯಕ್ಷ ಎಸ್.ಜಿ.ಶಶಿಧರ್ ಉಪಸ್ಥಿತರಿರುವರು. ಒಂದು ತಿಂಗಳು ಅನೇಕ ಚಿಂತನಾ ಗೋಷ್ಠಿಗಳು ನಡೆಯಲಿದೆ.
ಭದ್ರಾವತಿಯಲ್ಲಿ ರಂಭಾಪುರಿ ಶ್ರೀಗಳ ಇಷ್ಟಲಿಂಗ ಪೂಜೆ
ಭದ್ರಾವತಿಯ ಲೋಯರ್ ಹುತ್ತಾ ಶ್ರೀ ರಂಗನಾಥ ಕೃಪಾ ನಿವಾಸದಲ್ಲಿ ನ.20ರಂದು ಬೆಳಗ್ಗೆ 9 ಗಂಟೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ನೆರವೇರಲಿದೆ. ತೀರ್ಥಹಳ್ಳಿ ತಾಲೂಕು ಮಳಲಿಮಠದ ಡಾ. ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದು ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು.
ಇದನ್ನೂ ಓದಿ- VIVOದಿಂದ 100X ಜೂಮ್ ಕ್ಯಾಮರಾ ಮೊಬೈಲ್, REALMEಯಿಂದ 1 ಟಿಬಿ ಸ್ಟೋರೇಜ್‌ನ ಫೋನ್
ಆನಂದಪುರದಲ್ಲಿ ಶಿವಾನುಭವ ಗೋಷ್ಠಿ
ಆನಂದಪುರದ ಮುರುಘಾಮಠದಲ್ಲಿ ನ.21ರಂದು ಬೆಳಗ್ಗೆ 10.30ಕ್ಕೆ 572ನೇ ಮಾಸಿಕ ಶಿವಾನುಭವ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಈ ಗೋಷ್ಠಿಯಲ್ಲಿ ಸಾಗರದ ಬಳಸಗೋಡಿನ ಶ್ರೀ ಶೃಂಗೀಶ್ವರ ಮಠದ ವಿನಾಯಕ ದೇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಚಾಪುರ ಗ್ರಾಪಂ ಪಿಡಿಒ ಪಿ.ಆರ್.ರಂಗಸ್ವಾಮಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200