ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ನಟ ಶಂಕರ್ ನಾಗ್ ಆಪ್ತ, ಶಿವಮೊಗ್ಗ ಮೂಲದ ಜಗದೀಶ್ ಮಲ್ನಾಡ್ ಅವರು ನಿರ್ಮಿಸಿರುವ ಚಿರತೆ ಬಂದು ಚಿರತೆ ಸಿನಿಮಾ ಏ.19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಶಿವಮೊಗ್ಗದ ಚಿತ್ರಮಂದಿರದಲ್ಲು ಸಿನಿಮಾ ರಿಲೀಸ್ ಆಗಲಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಗದೀಶ್ ಮಲ್ನಾಡ್, ಚಿರತೆ ಬಂತು ಚಿರತೆ ಸಿನಿಮಾ ಚಿರತೆಯ ಜಿವನ ಕ್ರಮದ ಬಗ್ಗೆ ತಿಳಿಸುವ ಚಿತ್ರವಾಗಿದೆ. ಚಿರತೆ ಗ್ರಾಮಕ್ಕೆ ನುಗ್ಗಿದರೆ ಅದನ್ನು ಕೊಲ್ಲುವ ಬಗ್ಗೆಯೆ ಗ್ರಾಮಸ್ಥರು ಯೋಚಿಸುತ್ತಾರೆ. ಚಿರತೆ ಏಕೆ ಗ್ರಾಮಗಳಿಗೆ ಬರುತ್ತದೆ ಎಂಬ ಬಗ್ಗೆ ಸಿನಿಮಾ ತಿಳಿಸಲಿದೆ. ಕೃಷ್ಣಮೂರ್ತಿ ಇದಕ್ಕೆ ಕಥೆ ಬರೆದಿದ್ದಾರೆ. ಸುಂದರ್‌ರಾಜ್ ಸೇರಿದಂತೆ ಪ್ರಮುಖರು ನಟಿಸಿದ್ದಾರೆ. ಏ.19ರಂದು ಬಿಡುಗಡೆ ಆಗುತ್ತಿದೆ ಎಂದು ತಿಳಿಸಿದರು.
ಆ.ಚಿ.ಪ್ರಕಾಶ್ ಮಾತನಾಡಿ, ಜಗದೀಶ್ ಮಲ್ನಾಡ್ ಅವರು ಶಂಕರ್ ನಾಗ್ ಅವರ ಅಪ್ತರು. ಮೂಲತಃ ಶಿವಮೊಗ್ಗದವರು. ಎಟಿಎನ್‌ಸಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಹೊಂದಿದ್ದಾರೆ. ಬಳಿಕ ಬೆಂಗಳೂರಿನಲ್ಲಿ ಶಂಕರ್ ನಾಗ್ ಅವರ ಸಂಕೇತ್ ತಂಡ ಸೇರಿದ್ದರು. ಶಂಕರ್ ನಾಗ್ ಅವರ ಬಹುತೇಕ ಸಿನಿಮಾಗಳಲ್ಲಿ ಜಗದೀಶ್ ಮಲ್ನಾಡ್ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆ.ಚಿ.ಪ್ರಕಾಶ್, ಡಿ.ಆರ್.ನಾಗರಾಜ್, ಆ.ನಾ.ವಿಜಯೇಂದ್ರ ರಾವ್ ಇದ್ದರು.
ಇದನ್ನೂ ಓದಿ – ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮವಿರಲಿದೆ?