ಶಿವಮೊಗ್ಗದಲ್ಲಿ ಸಂಭ್ರಮ, ಭಕ್ತಿಯ ಕ್ರಿಸ್‌ಮಸ್‌, ಈ ಸರ್ತಿ ಮಧ್ಯರಾತ್ರಿ ಪ್ರಾರ್ಥನೆ ಇಲ್ಲ, ಹೇಗಿತ್ತು ಸಡಗರ?

Published On : ಡಿಸೆಂಬರ್ 25, 2020

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 DECEMBER 2020

ಕೋವಿಡ್ ಆತಂಕದ ನಡುವೆಯು ಶಿವಮೊಗ್ಗದಲ್ಲಿ ಇವತ್ತು ಭಕ್ತಿ ಮತ್ತು ಸಂಭ್ರಮದಿಂದ ಕ್ರಿಸ್‍ಮಸ್ ಹಬ್ಬವನ್ನು ಆಚರಿಸಲಾಯಿತು. ನೈಟ್ ಕರ್ಫ್ಯೂ ಭೀತಿ, ಕೋವಿಡ್ ನಿಯಮ ಪಾಲಿಸಬೇಕಿರುವುದರಿಂದ ಸಾಮೂಹಿಕ ಪ್ರಾರ್ಥನೆಯನ್ನು ಬೇಗ ಮುಕ್ತಾಯ ಮಾಡಲಾಗಿದೆ.

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

ಬೇಗ ಮುಗಿದ ಪ್ರಾರ್ಥನೆ

ಪ್ರತಿ ವರ್ಷ ರಾತ್ರಿ 12 ಗಂಟೆಗೆ ಕ್ರೈಸ್ತರು ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸುತ್ತಿದ್ದರು. ಆದರೆ ಈ ಬಾರಿ ರಾತ್ರಿ ವೇಳೆಗಾಗಲೆ ಕ್ರಿಸ್‍ಮಸ್ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸೇಕ್ರೆಡ್ ಹಾರ್ಟ್‍ ಚರ್ಚ್‍ನಲ್ಲಿ ಭಕ್ತರ ಹೊರತು ಮತ್ಯಾರಿಗೂ ಪ್ರವೇಶ ನೀಡಲಿಲ್ಲ.

NAMMUR NEWS LAUNCHING

ಕೋವಿಡ್ ನಿಯಮ ಪಾಲನೆ

ಸಾಮೂಹಿಕ ಪ್ರಾರ್ಥನೆಗೆ ಕೋವಿಡ್ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿತ್ತು. ಚರ್ಚ್‍ನ ಒಳ ಹೋಗುವ ಮುನ್ನ ಸ್ಯಾನಿಟೈಸರ್‍, ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು. ಸಾಮೂಹಿಕ ಪ್ರಾರ್ಥನೆ ವೇಳೆಯಲ್ಲಿ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿತ್ತು.

ಚರ್ಚ್‍ಗೆ ವಿದ್ಯುತ್ ದೀಪಾಲಂಕರ

ಕ್ರಿಸ್‍ಮಸ್ ಹಿನ್ನೆಲೆ ಶಿವಮೊಗ್ಗದ ಎಲ್ಲಾ ಚರ್ಚ್‍ಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಪ್ರಮುಖವಾಗಿ ಸೇಕ್ರೆಡ್‍ ಹಾರ್ಟ್‍ ಚ‌ರ್ಚ್ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಪ್ರಾರ್ಥನೆ ಮುಗಿಯುತ್ತಿದ್ದಂತೆ ಚರ್ಚ್ ಬಾಗಿಲು ಬಂದ್ ಮಾಡಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಯಿತು.

PHOTO GALLERY

131987581 1295291117498972 2101461530610397813 o.jpg? nc cat=103&ccb=2& nc sid=730e14& nc ohc=4ESzpRBCKaQAX sblB6& nc ht=scontent.fblr1 5

132657812 1295291104165640 7634829516548197914 o.jpg? nc cat=111&ccb=2& nc sid=730e14& nc ohc=YuFHR3PyLqEAX d 3z & nc ht=scontent.fblr1 5

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಡಿಸೆಂಬರ್ 25, 2020

Leave a Comment