Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಶಿವಮೊಗ್ಗ ಸಿಟಿ ಕೋ ಆಪರೇಟಿವ್‌ ಬ್ಯಾಂಕ್‌ ಚುನಾವಣೆ, ಇಷ್ಟೊಂದು ಅಬ್ಬರ ಏಕೆ?

ಶಿವಮೊಗ್ಗ ಸಿಟಿ ಕೋ ಆಪರೇಟಿವ್‌ ಬ್ಯಾಂಕ್‌ ಚುನಾವಣೆ, ಇಷ್ಟೊಂದು ಅಬ್ಬರ ಏಕೆ?

28/12/2024 4:28 PM
ನಿತಿನ್‌ ಕೈದೊಟ್ಲು

SHIVAMOGGA LIVE NEWS | 28 DECEMBER 2024

ಇವತ್ತಿನ ಎಲ್ಲ NEWS
» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

shivamogga live news whatsappa number

ಶಿವಮೊಗ್ಗ : ಸಿಟಿ (City) ಕೋ ಆಪರೇಟಿವ್‌ ಬ್ಯಾಂಕ್‌ ನಿರ್ದೇಶಕರ ಸ್ಥಾನಕ್ಕೆ ಡಿಸೆಂಬರ್‌ 29ರಂದು ಚುನಾವಣೆ ನಡೆಯಲಿದೆ. 15 ನಿರ್ದೇಶಕರ ಸ್ಥಾನಕ್ಕೆ 32 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತದಾರರ ಮನವೊಲಿಸಲು ಅಭ್ಯರ್ಥಿಗಳು ಕಡೆ ಕ್ಷಣದಲ್ಲಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಫ್ಲೆಕ್ಸುಗಳ ಅಬ್ಬರ, ಹಣ, ಗಿಫ್ಟುಗಳ ಹಂಚಿಕೆ ಆರೋಪ, ಜಾತಿ ಪ್ರಭಾವದ ಗುಸುಗುಸು ಕೂಡ ಕೇಳಿ ಬಂದಿದೆ.

ಭಾನುವಾರ ನಡೆಯಲಿದೆ ಚುನಾವಣೆ

ಸಿಟಿ ಕೋ ಆಪರೇಟಿವ್‌ ಬ್ಯಾಂಕ್‌ನ 15 ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಲಿದೆ. ನ್ಯಾಷನಲ್‌ ಹೈಸ್ಕೂಲ್‌ ಆವರಣದಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಒಟ್ಟು 4080 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

ಹಿರಿಯರಿಗೆ ಕಿರಿಯ ಎದುರಾಳಿಗಳು

ಸಿಟಿ ಕೋ ಆಪರೇಟಿವ್‌ ಬ್ಯಾಂಕ್‌ ನಿರ್ದೇಶಕರ ಚುನಾವಣೆಗೆ ಹಿರಿಯರಿಗೆ ಹಲವು ಕಿರಿಯ ಅಭ್ಯರ್ಥಿಗಳು ಸವಾಲೊಡ್ಡಿದ್ದಾರೆ.

ಹಿರಿಯರೆಲ್ಲ ಸೇರಿ ಬ್ಯಾಂಕನ್ನು ಸಧೃಡಗೊಳಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಿರಿಯರಿಗು ಅವಕಾಶ ಕೊಡಬೇಕು. ಹಳೆ ಬೇರು, ಹೊಸ ಚಿಗುರು ಎಂಬಂತೆ ಯುವಕರು ಮತ್ತು ಹಿರಿಯರು ಒಗ್ಗೂಡಿದಾಗ ಬ್ಯಾಂಕನ್ನು ಮತ್ತಷ್ಟು ಗಟ್ಟಿಗೊಳಿಸಬಹುದು. ಹಾಗಾಗಿ ನಮಗೆ ಒಂದು ಅವಕಾಶ ಕೊಡಲಿ.

– ಎಂ.ವಿಜಯ್‌, ನಿರ್ದೇಶಕರ ಸ್ಥಾನದ ಅಭ್ಯರ್ಥಿ

RED-LINE-

City Co Operative Bank Election

ಎಸ್‌.ಟಿ. ಮೀಸಲು ಕ್ಷೇತ್ರದಿಂದ ನಾಲ್ವರು ಅಭ್ಯರ್ಥಿಗಳಿದ್ದೇವೆ. ಈ ಬಾರಿ ಕಿರಿಯರಿಗೆ ಅವಕಾಶ ಕೊಟ್ಟರೆ ಹಿರಿಯರೊಂದಿಗೆ ಕೆಲಸ ಮಾಡಿ, ಬ್ಯಾಂಕ್‌ನ ಭವಿಷ್ಯಕ್ಕೆ ಅನುಕೂಲವಾಗುವಂತೆ ಸಧೃಡಗೊಳಿಸುತ್ತೇವೆ. ನನ್ನ ಗುರುತು ಟಿ.ವಿ. ಕ್ರಮ ಸಂಖ್ಯೆ 21ಕ್ಕೆ ಮತದಾರರು ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ಇದೆ.

– ಬಿ.ಲೋಕೇಶ್‌, ನಿರ್ದೇಶಕರ ಸ್ಥಾನದ ಅಭ್ಯರ್ಥಿ

RED-LINE-

ಬ್ಯಾಂಕ್‌ ಸಧೃಡಗೊಳಿಸಿದ್ದೇ ನಮ್ಮ ಸಾಧನೆ

ಇನ್ನೊಂದೆಡೆ ಹಿರಿಯರು ಮತ್ತು ಹಾಲಿ ನಿರ್ದೇಶಕರು ಪ್ರತ್ಯೇಕ ತಂಡ ರಚಿಸಿಕೊಂಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿನ ಸಾಧನೆಯ ಪಟ್ಟಿಯನ್ನು ಮುಂದಿಟ್ಟು ಮತ ಕೇಳುತ್ತಿದ್ದಾರೆ.

City Co Operative Bank Election

ಬ್ಯಾಂಕ್‌ಗೆ 112 ವರ್ಷದ ಇತಿಹಾಸ ಇದೆ.  ಈ ಬಾರಿ ಚುನಾವಣೆಗೆ 15 ಜನ ಹಾಲಿ ನಿರ್ದೇಶಕರು ಸ್ಪರ್ಧೆ ಮಾಡಿದ್ದೇವೆ. 100 ಕೋಟಿ ಠೇವಣಿ ಸಂಗ್ರಹ ಮಾಡಿದ್ದೇವೆ. ಆರ್‌ಬಿಐ ನಿಯಮ ಪಾಲಿಸುತ್ತಿದ್ದೇವೆ. 500 ಕೋಟಿ ರೂ.ಗು ಹೆಚ್ಚು ವಹಿವಾಟು ನಡೆಸುತ್ತಿದ್ದೇವೆ. 118 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ.

ಉಮಾಶಂಕರ ಉಪಾಧ್ಯ, ಅಧ್ಯಕ್ಷರು, ಸಿಟಿ ಕೋ ಅಪರೇಟಿವ್‌ ಬ್ಯಾಂಕ್‌

RED-LINE-

ರಾರಾಜಿಸಿದ ಫ್ಲೆಕ್ಸುಗಳು ಕಿಕ್‌ ಔಟ್‌

ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಗರದ ವಿವಿಧೆಡೆ ನೂರಾರು ಫ್ಲೆಕ್ಸ್‌ ಅಳವಡಿಸಿದ್ದರು. ಮತಗಟ್ಟೆ ಇರುವ ನ್ಯಾಷನಲ್‌ ಹೈಸ್ಕೂಲ್‌ನ ರಸ್ತೆಯಲ್ಲಂತು ಅಡಿಗಡಿಗೆ ಫ್ಲೆಕ್ಸ್‌ ಅಳವಡಿಸಲಾಗಿತ್ತು. ಹಾಗಾಗಿ ಸಿಟಿ ಕೋ ಆಪರೇಟಿವ್‌ ಬ್ಯಾಂಕ್‌ ಚುನಾವಣೆ ಬಗ್ಗೆ ಜನರಲ್ಲಿ ಸಹಜ ಕುತೂಹಲ ಮೂಡಿದೆ. ಇನ್ನೊಂದೆಡೆ ಈ ಪರಿ ಫ್ಲೆಕ್ಸ್‌ ಆಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮಹಾನಗರ ಪಾಲಿಕೆ ಶುಕ್ರವಾರ ಸಂಜೆ ವೇಳೆಗೆ ಫ್ಲೆಕ್ಸ್‌ಗಳನ್ನು ತೆರವು ಮಾಡಿದೆ.

City Co Operative Bank Election

ಬ್ಯಾಂಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಮತದಾರರಿಗೆ ನಮ್ಮ ಕೆಲಸ ಕಾರ್ಯಗಳು ಇಷ್ಟವಾದರೆ ಆಯ್ಕೆ ಮಾಡುತ್ತಾರೆ‌. ಇನ್ನು, ಇಷ್ಟೊಂದು ಅಭ್ಯರ್ಥಿಗಳು, ಅಬ್ಬರಕ್ಕೆ ಕಾರಣ ಗೊತ್ತಿಲ್ಲ.

ಎಸ್‌.ಕೆ.ಮರಿಯಪ್ಪ, ಮಾಜಿ ಅಧ್ಯಕ್ಷ, ಸಿಟಿ ಕೋ ಆಪರೇಟಿವ್‌ ಬ್ಯಾಂಕ್‌

RED-LINE-

ಹಣ, ಗಿಫ್ಟು, ಜಾತಿ ಪ್ರಭಾವ

ಇನ್ನೊಂದೆಡೆ ಮತದಾರರಿಗೆ ಹಣ, ಗಿಫ್ಟು ಹಂಚುತ್ತಿರುವ ಆರೋಪ ಕೇಳಿ ಬಂದಿದೆ. ಪ್ರತಿ ಮತಕ್ಕು ಇಂತಿಷ್ಟು ಎಂದು ನಿಗದಿ ಮಾಡಿ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು, ನಾನಾ ವಿಧದ ಗಿಫ್ಟುಗಳನ್ನು ಕೂಡ ನೀಡಲಾಗುತ್ತಿದೆ. ಅಭ್ಯರ್ಥಿಗಳ ಖರ್ಚು – ವೆಚ್ಚಕ್ಕೆ ಯಾವುದೇ ಮಿತಿ ಇಲ್ಲ. ಹಾಗಾಗಿ ಪ್ರಚಾರ ಕಣದಲ್ಲಿ ಅಬ್ಬರ ಜೋರಿದೆ. ಇವೆಲ್ಲದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಜಾತಿ ಹೆಸರಿನ ಮೆಸೇಜುಗಳನ್ನು ಕಳುಹಿಸಲಾಗಿತ್ತಿರುವ ಆರೋಪವು ಇದೆ. ‘ಎರಡು ದಿನದಿಂದ ಹಣ, ಬ್ಯಾಗ್, ಟಿಫನ್ ಬಾಕ್ಸ್, ಕುಕ್ಕರ್ ಹಂಚಿಕೆ ಮಾಡ್ತಿದ್ದಾರೆʼ ಎಂದು ಎಂ.ಉಮಾಶಂಕರ ಉಪಾಧ್ಯ ಆರೋಪಿಸಿದ್ದಾರೆ.

-City-Co-Operative-Election-flex-in-Shimoga-city.

ಯಾಕಿಷ್ಟು ಜಿದ್ದಾಜಿದ್ದಿ? ಏನಿದರ ಮರ್ಮ?

ಸಿಟಿ ಕೋ ಆಪರೇಟಿವ್‌ ಬ್ಯಾಂಕ್‌ನ ನಿರ್ದೇಶಕರಾದವರು ಬಳಿಕ ನಗರಸಭೆ ಸದಸ್ಯರಾಗಿದ್ದಾರೆ, ಪಾಲಿಕೆಗು ಪಾದಾರ್ಪಣೆ ಮಾಡಿದ್ದಾರೆ. ಹಾಗಾಗಿ ಇಲ್ಲಿ ಆಯ್ಕೆಯಾದವರು ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸ್ಪರ್ಧಿಸಬಹುದು ಎಂಬ ದೂರದೃಷ್ಟಿಯೊಂದಿಗೆ ಹಲವರು ಕಣಕ್ಕಿಳಿದಿದ್ದಾರೆ ಎನ್ನಲಾಗಿದೆ. ಪಾಲಿಕೆ ಚುನಾವಣೆ ಹೊಸ್ತಿಲಲ್ಲಿ ಸಿಟಿ ಕೋ ಆಪರೇಟಿವ್‌ ಬ್ಯಾಂಕ್‌ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಹಾಗಾಗಿ ಕೆಲವರ ಪಾಲಿಗೆ ಇದು ಪಾಲಿಕೆ ಚುನಾವಣೆಯ ತಾಲೀಮು ಎಂಬಂತಾಗಿದೆ.

ಇದನ್ನೂ ಓದಿ » ಪ್ರಯಾಣಿಕರೆ ಗಮನಿಸಿ, ಡಿ.31ರಿಂದ ರಸ್ತೆಗಿಳಿಲ್ಲ KSRTC ಬಸ್, ಕಾರಣವೇನು?

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article 281224 KSRTC workers to go on a strike ಪ್ರಯಾಣಿಕರೆ ಗಮನಿಸಿ, ಡಿ.31ರಿಂದ ರಸ್ತೆಗಿಳಿಲ್ಲ KSRTC ಬಸ್, ಕಾರಣವೇನು?
Next Article Car-and-Bus-mishap-at-anandapura-murugha-mutt. ಕಾರು, ಬಸ್‌ ಮುಖಾಮುಖಿ ಡಿಕ್ಕಿ, ಇಬ್ಬರು ಸಾವು

ಇದನ್ನೂ ಓದಿ

Lokayukta-raid-at-Shimoga-hosanagara-and-shikaripura.
SHIVAMOGGA CITY

BREAKING NEWS – ಶಿವಮೊಗ್ಗ ಜಿಲ್ಲೆಯ ಮೂರು ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
24/06/2025
BJP-City-president-Mohan-Reddy-press-meet.
SHIVAMOGGA CITY

ತುರ್ತು ಪರಿಸ್ಥಿತಿಗೆ 50 ವರ್ಷ, ಶಿವಮೊಗ್ಗದಲ್ಲಿ ಕರಾಳ ದಿನ, ಯಾವಾಗ? ಏನೆಲ್ಲ ಕಾರ್ಯಕ್ರಮ ಇರುತ್ತೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
power cut mescom ELECTRICITY
SHIVAMOGGA CITY

ಶಿವಮೊಗ್ಗ ಸಿಟಿಯ ಅರ್ಧಕ್ಕರ್ಧ ಭಾಗದಲ್ಲಿ ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
Traffic-Police-checks-School-vans-in-Shimoga-city
SHIVAMOGGA CITY

ಶಿವಮೊಗ್ಗ ಸಿಟಿಯಲ್ಲಿ ಶಾಲಾ ವಾಹನಗಳ ದಿಢೀರ್‌ ತಪಾಸಣೆ, ನಾಲ್ಕು ಡ್ರಂಕ್‌ ಅಂಡ್‌ ಡ್ರೈವ್‌ ಕೇಸ್‌ ಪತ್ತೆ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
Former-Minister-MP-Renukacharya-at-Shimoga-DAR-Police-ground
SHIVAMOGGA CITY

ಶಿವಮೊಗ್ಗದಲ್ಲಿ ದಾವಣಗೆರೆ ಸಿಟಿ ಬಂದ್‌ಗೆ ದಿನಾಂಕ ಘೋಷಿಸಿದ ಮಾಜಿ ಸಚಿವ ರೇಣುಕಾಚಾರ್ಯಾ, ಯಾವಾಗ? ಯಾಕೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
Beluru-Gopalakrishna-Speaks-to-media-about-BJP-Leaders
SHIVAMOGGA CITY

‘ಆಗ ಬೀದಿ ರಂಪಾಟ ಮಾಡಿದ್ದ ಬಿಜೆಪಿ ನಾಯಕರ ಬಾಯಿ ಈಗ ಒಣಗಿ ಹೋಗಿದೆಯೇ?ʼ, ಬೇಳೂರು ಗರಂ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
Previous Next

ಶಿವಮೊಗ್ಗ ಲೈವ್ ಗ್ರೂಪ್ ಸೇರಲು ಕ್ಲಿಕ್ ಮಾಡಿ

🟢 shivamoggalive.com

whatsapp-logo
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?