ಶಿವಮೊಗ್ಗ: ಮಳೆಗಾಲಕ್ಕೂ (Monsoon) ಮೊದಲು ಸಮರೋಪಾದಿಯಲ್ಲಿ ರಾಜ ಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸಿದರೆ ಮಾತ್ರ ನಗರ ಉಳಿಯುತ್ತದೆ. ಈ ನಿಟ್ಟಿನಲ್ಲಿ ಮೇ 31ರೊಳಗೆ ಹೂಳು ಮತ್ತು ಇತರೆ ತ್ಯಾಜ್ಯ ತೆಗೆಸುವ ಕೆಲಸ ಆಗಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಸಭಾಂಗಣದಲ್ಲಿ ಮಳೆಗಾಲ ಪೂರ್ವಸಿದ್ಧತೆಗೆ ಸಂಬಂಧ ಆಯೋಜಿಸಿದ್ದ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಂಎಲ್‌ಎ ಏನೆಲ್ಲ ಸೂಚಿಸಿದರು? ಇಲ್ಲಿದೆ ಪಾಯಿಂಟ್ಸ್
ನಗರದಲ್ಲಿ 200 ಸೂಕ್ಷ್ಮ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಎಲ್ಲ ಪಾಯಿಂಟ್‌ಗಳಲ್ಲೂ ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸಬೇಕು. ಮಳೆಗೆ ಅನಾಹುತ ಸಂಭವಿಸಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು.
ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಸಣ್ಣ ಚರಂಡಿಗಳನ್ನೂ ಸ್ವಚ್ಛ ಮಾಡಿಸಬೇಕು. ಗುತ್ತಿಗೆದಾರರ ಬೆನ್ನತ್ತಿ ಕೆಲಸ ಮಾಡಿಸಿದಾಗ ಮಾತ್ರ ಶಿವಮೊಗ್ಗಕ್ಕೆ ಉಳಿಗಾಲ. ಇಲ್ಲವಾದರೆ ನಾನಾ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಬೇಸಿಗೆಯಲ್ಲಿ ತಣ್ಣಗೆ ಕುಳಿತು ಮಳೆ ಬಿದ್ದ ಬಳಿಕ ಕೆಲಸ ಮಾಡಿಸಲು ಹೋಗುವುದು ಸರಿಯಲ್ಲ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರತಿ ವರ್ಷ ಇದೇ ಪಟ್ಟಿ ಹಿಡಿದು ಹೋಗುವಂತಹ ಕೆಲಸ ಆಗಬಾರದು. ಇಷ್ಟು ಹೊತ್ತಿಗಾಗಲೆ ಹೂಳೆತ್ತುವ ಕೆಲಸ ಮುಗಿಸಬೇಕಿತ್ತು. ಪ್ರತಿ ವರ್ಷವೂ ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಬೇಸರವಾಗುತ್ತದೆ.
7, 8, 9, 18ನೇ ವಾರ್ಡ್‌ಗಳಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡಿಲ್ಲ. ಇದರಿಂದ ಸಣ್ಣ ಮಳೆಯಾದರೂ ಮುಖ್ಯ ರಸ್ತೆಗಳಲ್ಲಿ ನೀರು ಹರಿಯುತ್ತಿದೆ. ಪಾಲಿಕೆಯಲ್ಲಿ ಯಂತ್ರೋಪಕರಣ ಇದ್ದರು ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ.

ಅಶೋಕ ವೃತ್ತದಿಂದ ಬೆಕ್ಕಿನಕಲ್ಮಠದವರೆಗೆ ಡ್ರೈನೇಜ್, ಬೊಮ್ಮನಕಟ್ಟೆ, ವಿದ್ಯಾನಗರ, ಶಾಂತಮ್ಮ ಲೇಔಟ್, ಚಿಕ್ಕಲ್, ಟಿಪ್ಪುನಗರ ಮುಖ್ಯ ರಸ್ತೆ ಸೇರಿ ನಗರದಾದ್ಯಂತ ಇರುವ ಚರಂಡಿ, ರಸ್ತೆ, ರಾಜಕಾಲುವೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.
ಸಭೆ ಮಧ್ಯೆ ಅಧಿಕಾರಿ ಅಸ್ವಸ್ಥ
ಸಭೆಯಲ್ಲಿ ಪಾಲ್ಗೊಂಡಿದ್ದ ಸಹಾಯಕ ಕಂದಾಯ ಅಧಿಕಾರಿ ಯಶ್ವಂತ್ ಏಕಾಏಕಿ ಕಿರುಚಿಕೊಂಡು ಅಸ್ವಸ್ಥರಾದರು. ಗಾಬರಿಗೊಂಡ ಇತರೆ ಸಿಬ್ಬಂದಿ, ಶಾಸಕ ಮತ್ತು ಆಯುಕ್ತರು ಕೂಡಲೆ ಅವರ ನೆರವಿಗೆ ಧಾವಿಸಿದರು. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಉಪ ಆಯುಕ್ತ ತುಷಾರ ಹೊಸೂರು ಉಪಸ್ಥಿತರಿದ್ದರು.
ಇದನ್ನೂ ಓದಿ » ಮುಂದಿನ ಏಳು ದಿನ ಶಿವಮೊಗ್ಗ ಜಿಲ್ಲೆಗೆ ಸಾಲು ಸಾಲು ಎಚ್ಚರಿಕೆ, ಯಾವ್ಯಾವ ದಿನ ಎಷ್ಟಿರುತ್ತೆ ಮಳೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200