ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 MARCH 2021
ನಮ್ಮೊಲುಮೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸತತ ಮೂರು ಗಂಟೆ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸಿದರು.
ಇದನ್ನೂ ಓದಿ | ಸಿಎಂ ಯಡಿಯೂರಪ್ಪಗೆ ಶಿವಮೊಗ್ಗದಲ್ಲಿ ನಮ್ಮೊಲುಮೆ, ಬೆಳ್ಳಿ ಕಾಮಧೇನು ನೀಡಿ ಅಭಿನಂದನೆ
ಫ್ರೀಡಂ ಪಾರ್ಕ್‍ನಲ್ಲಿ ಸನ್ಮಾನ ಕಾರ್ಯಕ್ರಮದ ಬಳಿಕ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾತ್ರಿ 8 ಗಂಟೆ ಹೊತ್ತಿಗೆ ಶುರುವಾದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಯಡಿಯೂರಪ್ಪ ವೀಕ್ಷಿಸಿದರು. ರಾತ್ರಿ 11 ಗಂಟೆವರೆಗೂ ಸಿಎಂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹಾಡುಗಳನ್ನು ಕೇಳಿ ಖುಷಿ ಪಟ್ಟರು.
ಮುಖದಲ್ಲಿ ನಗು ತರಿಸಿದ ನಿರೂಪಣೆ
ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರ ನಿರೂಪಣೆ, ಆಗಾಗ ಅವರ ಜೋಕ್‍ಗಳಿಗೆ ಸಿಎಂ ಯಡಿಯೂರಪ್ಪ ಹಸನ್ಮುಖಿಯಾಗುತ್ತಿದ್ದರು. ಕೆಲವು ಹಾಡುಗಳಿಗೆ ಚಪ್ಪಾಳೆಯನ್ನೂ ತಟ್ಟಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರ ಡಾನ್ಸ್ ಮಾಡುತ್ತಿದ್ದದ್ದನ್ನು ತಿರುಗಿ ನೋಡಿಕು ಖುಷಿ ಪಟ್ಟರು.
ಸೆಲ್ಫಿಗೆ ಮುಗಿಬಿದ್ದ ಜನರು
ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರು ಸಿಎಂ ಜೊತೆ ಸೆಲ್ಫಿಗೆ ಮುಗಿಬಿದ್ದರು. ಸೆಕ್ಯೂರಿಟಿಯ ನಡುವೆಯು ಸಿಎಂ ಬಳಿಗೆ ಬರುತ್ತಿದ್ದ ಹಲವರು, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ಸಿಎಂಗೆ ಹಸ್ತಲಾಘವ ನೀಡುತ್ತಿದ್ದರು. ಸೆಲ್ಫಿ ಕೇಳಿ ಬಂದವರೊಂದಿಗೆ ಸಿಎಂ ನಗುಮೊಗದೊಂದಿಗೆ ಪೋಸ್ ಕೊಡುತ್ತಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422