ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 30 MAY 2024
SHIMOGA : ಹೊಂಗಿರಣ ಸಂಸ್ಥೆ ವತಿಯಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜೂನ್ 1ರಂದು ಸಂಜೆ 7ಕ್ಕೆ ‘ದನಾ ಕಾಯೋರ ದೊಡ್ಡಾಟ ಮತ್ತು ಶ್ರೀ ಕೃಷ್ಣ ಸಂಧಾನ’ ಹಾಸ್ಯ ನಾಟಕ (Comedy Drama) ಪ್ರದರ್ಶನ ಆಯೋಜಿಸಲಾಗಿದೆ. ಕಾಮಿಡಿ ಕಿಲಾಡಿ ಸೀಸನ್ 3ರ ಫೈನಲಿಸ್ಟ್ ಆಗಿದ್ದ ಚಂದ್ರಶೇಖರ್ ಹಿರೇಗೋಣಿಗೆರೆ ನಿರ್ದೇಶನ ಮಾಡಿದ್ದಾರೆ ಎಂದು ರಂಗ ನಿರ್ದೇಶಕ ಸಾಸ್ವೆಹಳ್ಳಿ ಸತೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಸ್ವೆಹಳ್ಳಿ ಸತೀಶ್, ಖ್ಯಾತ ಕಿರುತೆರೆ ನಟ ಚಂದ್ರಶೇಖರ ಶಾಸ್ತ್ರಿ ಸೇರಿದಂತೆ ಕಿರುತೆರೆ, ಹಿರಿತೆರೆಯ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಿದ್ದಾರೆ. ಈಗಾಗಲೆ ಈ ಹಾಸ್ಯ ನಾಟಕ 95 ಪ್ರದರ್ಶನ ಕಂಡಿದೆ. ಶಿವಮೊಗ್ಗದಲ್ಲಿನ ಪ್ರದರ್ಶನಕ್ಕೆ ಪ್ರತಿಯೊಬ್ಬರಿಗೆ 50 ರೂ. ಟಿಕೆಟ್ ನಿಗದಿಗೊಳಿಸಲಾಗಿದೆ. ಗೋಪಿ ಸರ್ಕಲ್ನ ಶ್ರೀನಿಧಿ ಕಾಂಪ್ಲೆಕ್ಸ್ನಲ್ಲಿರುವ ಕ್ರೀಡಾ ಲೋಕದಲ್ಲಿ ಟಿಕೆಟ್ಗಳು ದೊರೆಯಲಿವೆ ಎಂದು ತಿಳಿಸಿದರು.
ಇನ್ನು, ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತಂಡದ ಕಲಾವಿದರಾದ ಕೆ.ಸಿ.ಚುಕ್ಕಿ ಮತ್ತು ನಾದ ಹಾಲಸ್ವಾಮಿ, ರಂಗಭೂಮಿ ವಿಷಯದಲ್ಲಿ ಪಿಹೆಚ್ಡಿ ಪಡೆದ ಜಿ.ಆರ್.ಲವ, ಡಿಲಿಟ್ ಪದವಿ ಪಡೆದ ಗಣೇಶ ಕೆಮಚನಾಲ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಸಾಸ್ವೆಹಳ್ಳಿ ಸತೀಶ್ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ‘ಶೆಟ್ಟರ ಸಂತೆ’, ವಿವಿಧ ತಿಂಡಿ, ತಿನಿಸು, ಡ್ರೆಸ್ ಮೆಟೀರಿಯಲ್ ಪ್ರದರ್ಶನ, ಮಾರಾಟ, ಎಲ್ಲಿ? ಯಾವಾಗ?






