ಶಿವಮೊಗ್ಗದಲ್ಲಿ 2 ಕಡೆ ಹಲ್ಲೆ, ಹಿಂದೂ ಕಾರ್ಯಕರ್ತರು ಆಸ್ಪತ್ರೆಗೆ ದೌಡು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 26 JUNE 2023

ಕ್ಷುಲಕ ವಿಚಾರಕ್ಕೆ ಕಿರಿಕ್‌

SHIMOGA : ಕ್ಷುಲಕ ವಿಚಾರಕ್ಕೆ ಎರಡು ಕೋಮಿನ ಯುವಕರ (Youths) FATAFAT NEWS 1 jpgಮಧ್ಯೆ ಟಿಪ್ಪು ನಗರದಲ್ಲಿ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಘಟನೆ ಕೋಮು ಸ್ವರೂಪ ಪಡೆದಿತ್ತು. ರಸ್ತೆಯಲ್ಲಿ ಹೋಗುವಾಗ ಬೈಕ್‌ ಮತ್ತು ಆಟೋ ತಾಗಿವೆ. ಇದೆ ವಿಚಾರಕ್ಕೆ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. ಸಂದೇಶ್‌ ಎಂಬಾತನ ಕಣ್ಣಿನ ಬಳಿ ಗಾಯವಾಗಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

7-am-fatafat-attack-case-against-hindu-youths-in-Shimoga

ಚೂಪಾದ ಆಯುಧದಿಂದ ಹಲ್ಲೆ

SHIMOGA : ದ್ರೌಪದಮ್ಮ ಸರ್ಕಲ್‌ ಬಳಿ ವಿಜಯ್‌ ಕುಮಾರ್‌ ಎಂಬಾತನ FATAFAT NEWS 2 jpgಮೇಲೆ ಭಾನುವಾರ ಸಂಜೆ ಹಲ್ಲೆಯಾಗಿದೆ. ಗುರುಸಿದ್ದಪ್ಪ ಮತ್ತು ತಸ್ರು ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಜಯ್‌ ಕುಮಾರ್‌ ಬೆನ್ನು ಮತ್ತು ಬಲೈಗೆ ಹಲ್ಲೆಯಾಗಿದೆ. ‘ಪ್ರಾಥಮಿಕವಾಗಿ ಚೂಪಾದ ಆಯುಧದಿಂದ ಹಲ್ಲೆಯಾಗಿದೆ ಎಂದು ತಿಳಿದು ಬಂದಿದೆ. ಯಾವ ಆಯುಧ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ. ಇದು ವೈಯಕ್ತಿಕ ಪ್ರಕರಣವಾಗಿದ್ದು ತನಿಖೆ ಬಳಿಕ ಪ್ರಕರಣ ದಾಖಲು ಮಾಡಲಾಗುತ್ತದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ವಾಟ್ಸಪ್‌ ಮೂಲಕ ಮಾ‍ಧ್ಯಮಗಳಿಗೆ ತಿಳಿಸಿದ್ದಾರೆ.

Assault on Youth at Shimoga

ಕಠಿಣ ಕ್ರಮಕ್ಕೆ ಒತ್ತಾಯ

SHIMOGA : ಟಿಪ್ಪು ನಗರ ಮತ್ತು ದ್ರೌಪದಮ್ಮ ಸರ್ಕಲ್‌ನಲ್ಲಿ ನಡೆದ FATAFAT NEWS 3 jpgಹಲ್ಲೆ ಪ್ರಕರಣಗಳು ಕೋಮು ಸ್ವರೂಪ ಪಡೆದುಕೊಂಡಿದ್ದವು. ವಿಚಾರ ತಿಳಿದು ಹಿಂದೂ ಸಂಘಟನೆಗಳ ಕಾರ್ಯಕರ್ತರು ರಾತ್ರಿ ಮೆಗ್ಗಾನ್‌ ಆಸ್ಪತ್ರೆ ಮುಂಭಾಗ ಸೇರಿದ್ದರು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ – ಹಗಲು ಹೊತ್ತಲ್ಲೂ ಬೀದಿ ದೀಪ ಆನ್‌| ಶಿವಮೊಗ್ಗದಲ್ಲಿ ಎಷ್ಟು ಮಳೆಯಾಗಿದೆ? | ಮತ್ತಷ್ಟು ಸುದ್ದಿಗಳು ಫಟಾಫಟ್‌

Assault on youth in Shimoga

ಇಬ್ಬರನ್ನು ವಶಕ್ಕೆ ಪಡೆದ ಪೊಲೀಸ್

SHIMOGA : ಟಿಪ್ಪು ನಗರದಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧ FATAFAT NEWS 4 jpgಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ವಾಟ್ಸಪ್‌ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ‘ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ‌

ಇದನ್ನೂ ಓದಿ – IMPACT | ಶಿವಮೊಗ್ಗ ಲೈವ್.ಕಾಂ ವರದಿ ಬಳಿಕ ಜೈಲ್‌ ಸರ್ಕಲ್‌ಗೆ ಹೊಸ ಲುಕ್‌, ಏನೇನಾಗಿದೆ ಈಗ?

Shimoga SP Mithun Kumar IPS

ಸುಳ್ಳು ಸುದ್ದಿಗೆ ಆಕ್ಷೇಪ

SHIMOGA : ಟಿಪ್ಪು ನಗರ ಮತ್ತು ದ್ರೌಪದಮ್ಮ ಸರ್ಕಲ್‌ನಲ್ಲಿ ನಡೆದ FATAFAT NEWS 5 jpgಹಲ್ಲೆ ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಮತ್ತು ಕೆಲವು ಸುದ್ದಿ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದಕ್ಕೆ ಪೊಲೀಸ್‌ ಇಲಾಖೆ ಅಕ್ಷೇಪ ವ್ಯಕ್ತಪಡಿಸಿದೆ. ‘ಎರಡು ಘಟನೆಗಳು ಪ್ರತ್ಯೇಕವಾಗಿದ್ದು, ಒಂದಕ್ಕೊಂದು ಸಂಬಂಧವಿಲ್ಲ. ಮಾಹಿತಿ ಪ್ರಕಟಣೆಗು ಮೊದಲು ಸತ್ಯಾಸತ್ಯತೆ ಅರಿಯುವಂತೆ’ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಸೂಚಿಸಿದ್ದಾರೆ.

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment