SHIVAMOGGA LIVE NEWS | COMPETATIVE EXAMS | 23 ಏಪ್ರಿಲ್ 2022
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಶ್ರದ್ಧೆ, ಪರಿಶ್ರಮದ ಜತೆಯಲ್ಲಿ ಉತ್ತಮ ಸಂವಹನ ಕೌಶಲ್ಯವು ಅತ್ಯಂತ ಮುಖ್ಯ ಎಂದು ಎಚ್.ಸಿ.ಎಲ್ ತರಬೇತಿ ವ್ಯವಸ್ಥಾಪಕ ವಿನಯ್ ಕುಮಾರ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಉನ್ನತ ಹುದ್ದೆ ತಲುಪಿದರೂ ಆಯಾ ಕ್ಷೇತ್ರಕ್ಕೆ ಅಗತ್ಯವಿರುವ ಸಂವಹನ ಕೌಶಲ್ಯ ಅಗತ್ಯ. ಸಂವಹನ ಕೌಶಲ್ಯ ಉತ್ತಮ ಮಾಡಿಕೊಳ್ಳುವುದು ಸಹ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಅವಶ್ಯಕ ಎಂದು ತಿಳಿಸಿದರು.
ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಚೀರಂಜಿವಿ ಮಾತನಾಡಿ, ಸ್ಪರ್ಧಾತ್ಮಕ ಅಂಶವನ್ನು ಋಣಾತ್ಮಕವಾಗಿ ಪರಿಗಣಿಸಬಾರದು. ನಮ್ಮ ಸಾಮಾರ್ಥ್ಯದ ಪರಿಗಣನೆಗೆ ನಡೆಯುವ, ಅರ್ಹತೆಯ ಪರೀಕ್ಷೆ ಆಗಿರುತ್ತದೆ. ಧನಾತ್ಮಕವಾಗಿ ಆಲೋಚಿಸುವ, ನಮ್ಮಲ್ಲಿರುವ ಸಾಮಾರ್ಥ್ಯ ತೋರಿಸುವ ಬಗ್ಗೆ ಸದಾ ಆಲೋಚಿಸಬೇಕು ಎಂದು ಹೇಳಿದರು.
ಸಮನ್ವಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ಮನೋ ಸಾಮಾರ್ಥ್ಯ ವೃದ್ಧಿಸಿಕೊಳ್ಳುವತ್ತ ಗಮನಹರಿಸಬೇಕು. ನಾವು ಸಾಧಿಸುವ ಗುರಿಯ ಮಾರ್ಗವನ್ನು ಹಂತ ಹಂತವಾಗಿ ಸಾಗುವ ಬಗ್ಗೆ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು. ಧನಾತ್ಮಕ ಆಲೋಚನೆಗಳೇ ನಮ್ಮ ಶಕ್ತಿ. ಒಳ್ಳೆಯ ಅಲೋಚನೆಗಳನ್ನು ಯೋಜಿಸುತ್ತ ಅನುಷ್ಠಾನಗೊಳಿಸಿ ಯಶಸ್ಸು ಸಾಧಿಸಬೇಕುಎಂದರು.
ಸಮನ್ವಯಟ್ರಸ್ಟ್ ಸ್ಥಾಪಕ ಸದಸ್ಯೆ ಸ್ಮಿತಾ, ಟ್ರಸ್ಟಿ ನಿತ್ಯಾ ಎಚ್.ಆರ್., ಪ್ರಮುಖರಾದ ವಿಜಯಕುಮಾರ್, ವಿಸ್ಮಯ, ಶರತ್, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯ ಮೂವರು ಇನ್ಸ್ ಪೆಕ್ಟರ್’ಗಳ ವರ್ಗಾವಣೆ, ಯಾರೆಲ್ಲರ ವರ್ಗವಾಗಿದೆ?
COMPETATIVE EXAMS