
ಶಿವಮೊಗ್ಗ ಲೈವ್.ಕಾಂ | SHIMOGA | 7 ಏಪ್ರಿಲ್ 2020
ಕನ್ಸರ್’ವೆನ್ಸಿಯಲ್ಲಿ ಹಾಕಲಾಗಿದ್ದ ಸ್ಲ್ಯಾಬ್’ಗಳನ್ನು ಖಾಸಗಿ ಸಂಸ್ಥೆಯೊಂದರ ಬಳಕೆಗೆ ಸಾಗಿಸಲಾಗಿದೆ ಎಂದು ಆರೋಪಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಮೇಯರ್ ಅವರ ಪತಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ.
ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ 6,7 ಮತ್ತು 8ನೇ ಅಡ್ಡರಸ್ತೆಯಲ್ಲಿರುವ ಕನ್ಸರ್’ವೆನ್ಸಿಗಳಲ್ಲಿ ಹಾಕಲಾಗಿದ್ದ ಸ್ಲ್ಯಾಬ್’ಗಳನ್ನು ಗೂಡ್ಸ್ ವಾಹನದಲ್ಲಿ ಸಾಗಿಸಲಾಗಿದೆ. ಉಪ ಮೇಯರ್ ಸುರೇಖಾ ಮುರಳೀಧರ್ ಅವರ ಪತಿ ನೇತೃತ್ವದಲ್ಲೇ ಈ ಕೆಲಸ ಆಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.
ಸ್ಲ್ಯಾಬ್’ಗಳನ್ನು ಸಾಗಿಸಿರುವ ಸಂಬಂಧ ವಿಡಿಯೋ ಮತ್ತು ಫೋಟೊ ಮಾಹಿತಿಯೊಂದಿಗೆ, ಶಿವಮೊಗ್ಗ ಮಹಾನಗರ ಪಾಲಿಕೆ ಕಮಿಷನರ್ ಚಿದಾನಂದ ವಟಾರೆ ಮತ್ತು ಕೋಟೆ ಪೊಲೀಸ್ ಠಾಣೆಗೆ ದೂರ ನೀಡಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]