ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 NOVEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಚೆಕ್ ಮೂಲಕ ಎರಡು ಲಕ್ಷ ರೂ. ಹಣ ಪಾವತಿಸಿದ್ದರೂ ಸಾಮಗ್ರಿ ಒದಗಿಸಲು ವಿಫಲವಾದ ಶಿವಮೊಗ್ಗದ ಎಲೆಕ್ಟ್ರಿಕ್ ಅಂಗಡಿಯೊಂದರ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ (fine) ವಿಧಿಸಿದೆ.
ಹೊಸೂರು ಗ್ರಾಮದ ಕೆ.ಪಿ.ಶಾಂತಕುಮಾರ್ ಎಂಬುವವರು ತಮ್ಮ ಜಮೀನಿನಲ್ಲಿ ಬೋರ್ವೆಲ್ ತೆಗೆಸಲು ಸಾಮಗ್ರಿಗಳ ಖರೀದಿಗೆ ಅಂಬಾ ಭವಾನಿ ಎಲೆಕ್ಟ್ರಿಕ್ಸ್ ಎಂಬ ಮಳಿಗೆಗೆ ಎರಡು ಲಕ್ಷ ರೂ. ಚೆಕ್ ನೀಡಿದ್ದರು. 2020ರ ಜೂನ್ 11ರಂದು ಅಂಗಡಿಯವರು ಚೆಕ್ ನಗದೀಕರಿಸಿದ್ದರು. ಆದರೂ ಸಾಮಗ್ರಿ ಒದಗಿಸಿರಲಿಲ್ಲ. ಈ ಹಿನ್ನೆಲೆ ಶಾಂತ ಕಮಾರ್ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ವಿಚಾರಣೆ ವೇಳೆ ಅಂಗಡಿ ಮಾಲೀಕರು ಡಾ. ಮೂರ್ತಿ ಎಂಬುವವರು ಚೆಕ್ ತಂದು ಕೊಟ್ಟಿದ್ದರು. ಅವರಿಗೆ ಸಾಮಗ್ರಿ ಒದಗಿಸಲಾಗಿದೆ ಎಂದು ತಿಳಿಸಿದ್ದರು. ಆದರೆ ಸಾಮಗ್ರಿಗಳನ್ನು ಸ್ವೀಕರಿಸಿದ ಡಾ. ಮೂರ್ತಿಯವರ ಸಹಿ ಕಂಡು ಬರಲಿಲ್ಲ. ಇನ್ನು, ಶಾಂತ ಕುಮಾರ್ ಅವರು ಕಳುಹಿಸಿದ ಲೀಗಲ್ ನೊಟೀಸ್ಗೆ ಮಳಿಗೆಯವರು ಸಮರ್ಪಕ ಉತ್ತರ ನೀಡದ ಹಿನ್ನೆಲೆ ಸೇವಾ ನ್ಯೂನತೆ ಎಂದು ಪರಿಗಣಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ- ಶಿವಮೊಗ್ಗದ ಗಾರ್ಡನ್ ಏರಿಯಾದಲ್ಲಿ ಟ್ರಾಫಿಕ್ ಪೊಲೀಸರ ದಾಳಿ, ಸೈಲೆನ್ಸರ್ಗಳು ಸೀಜ್
ಸೇವಾ ನ್ಯೂನತೆ ಎಸಗಿದ್ದಕ್ಕೆ ಎಲೆಕ್ಟ್ರಿಕ್ ಮಳಿಗೆಯವರು 2 ಲಕ್ಷ ರೂ. ಚೆಕ್ ಮೊತ್ತವನ್ನು ಶೇ.9ರ ಬಡ್ಡಿ ದರದಲ್ಲಿ ಶಾಂತ ಕುಮಾರ್ ಅವರಿಗೆ ಹಿಂತಿರುಗಿಸಬೇಕು. ಇತರೆ ಹಾನಿಗಳಿಗೆ 10 ಸಾವಿರ ರೂ. ವ್ಯಾಜ್ಯದ ಖರ್ಚು ವೆಚ್ಚದ ಬಾಬ್ತು 10 ಸಾವಿರ ರೂ. ಪಾವತಿಸಬೇಕು ಎಂದು ಆದೇಶಿಸಲಾಗಿದೆ. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಬಿ.ಪಟ್ಟಣಶೆಟ್ಟಿ ಮತ್ತು ಬಿ.ಡಿ. ಯೋಗಾನಂದ ಅವರ ಪೀಠ ಈ ಆದೇಶ ಹೊರಡಿಸಿದೆ.