ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ

ಶಿವಮೊಗ್ಗ ಲೈವ್.ಕಾಂ |SHIMOGA NEWS | 26 NOVEMBER 2020
ಕರೋನ ಮಹಾಮಾರಿ ವಿರುದ್ಧ ಜಾಗೃತಿಗೆ ಶಿವಮೊಗ್ಗ ಪೊಲೀಸರು ಮತ್ತೊಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಗೀತೆ ರಚಿಸಿ, ಶಿವಮೊಗ್ಗದಲ್ಲಿ ಕರೋನ ಜಾಗೃತಿ ಜೊತೆಗೆ, ಆದೇಶಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.
ಪೊಲೀಸರದ್ದೇ ಸಾಹಿತ್ಯ, ಸಂಗೀತ, ಗಾಯನ
ಕರೋನ ಕುರಿತ ಆಲ್ಬಂ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹಾಡಿಗೆ ಪೊಲೀಸರದ್ದೇ ಸಾಹಿತ್ಯ, ಪೊಲೀಸರೆ ಸಂಗೀತ ನೀಡಿದ್ದಾರೆ. ಪೊಲೀಸರೆ ಹಾಡಿರುವುದು ವಿಶೇಷ. ತುಂಗಾ ನಗರ ಠಾಣೆ ಸಿಬ್ಬಂದಿ ಪ್ರಶಾಂತ್ ಸಾಹಿತ್ಯ ರಚಿಸಿದ್ದಾರೆ. ಪಶ್ಚಿಮ ಸಂಚಾರಿ ಠಾಣೆಯ ಎಎಸ್ಐ ದಾನಂ ಅವರು ಹಾಡಿದ್ದಾರೆ. ಪೊಲೀಸ್ ಸಿಬ್ಬಂದಿಗಳೇ ಕೋರಸ್ ನೀಡಿದ್ದಾರೆ.
ಏನಿದು ಸಾಂಗ್? ಹೇಗಿದೆ?
ಸುಮಾರು 5 ನಿಮಿಷ 40 ಸಕೆಂಡ್ನ ಹಾಡು ಸಿದ್ಧಪಡಿಸಲಾಗಿದೆ. ಇದರಲ್ಲಿ ಕರೋನ ಕುರಿತು ಜಾಗೃತಿ ಮೂಡಿಸುವ ಸಂದೇಶ, ತುರ್ತು ಸಂದರ್ಭವಾದ್ದರಿಂದ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ. ‘ತೂರಬೇಡಿ ಗಾಳಿಗೆ ಆದೇಶ’ ಎಂಬ ಹೆಸರಿನೊಂದಿಗೆ ಸಾಂಗ್ ಬಿಡುಗಡೆ ಮಾಡಲಾಗಿದೆ.
ಹಾಡು ಸಿದ್ಧವಾದ ಅನುಭವ ಹೇಗಿತ್ತು? ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ನೋಡಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್
ಪೊಲೀಸರ ಹಾಡು ಶಿವಮೊಗ್ಗದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಆಗುತ್ತಿದೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯುವ ವ್ಯಕ್ತವಾಗುತ್ತಿದೆ.
ಪೂರ್ತಿ ಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com





