ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 DECEMBER 2020
ಸ್ವರೂಪ ಬದಲಿಸಿಕೊಂಡಿರುವ ಕರೋನ ವೈರಸ್ ಪುನಃ ತನ್ನ ಅಟ್ಟಹಾಸ ಮೆರೆಯಲು ಆರಂಭಿಸಿದೆ. ಈಗಾಗಲೆ ಇಂಗ್ಲೆಂಡ್ ದೇಶದಲ್ಲಿ ಲಾಕ್‍ಡೌನ್ ಮಾಡಲಾಗಿದೆ. ಅಲ್ಲಿಂದ ಭಾರತಕ್ಕೆ ಬಂದವರ ಮೇಲೆ ನಿಗಾ ವಹಿಸಲಾಗುತ್ತಿದೆ. ಅದೇ ರೀತಿ, ಇಂಗ್ಲೆಂಡ್‍ನಿಂದ ಶಿವಮೊಗ್ಗಕ್ಕೆ ಬಂದವರ ಮೇಲೂ ಆರೋಗ್ಯ ಇಲಾಖೆ ಕಣ್ಗಾವಲಿಟ್ಟಿದೆ.
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಎಷ್ಟು ಮಂದಿ ಬಂದಿದ್ದಾರೆ?
ಸರ್ಕಾರದ ಸೂಚನೆ ಮೇರೆಗೆ ಇಂಗ್ಲೆಂಡ್‍ನಿಂದ ಶಿವಮೊಗ್ಗಕ್ಕೆ ಬಂದವರ ಪರಿಶೀಲನೆ ನಡೆಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, 15 ಮಂದಿಯನ್ನು ಗುರುತಿಸಿದ್ದಾರೆ. ಇವರೆಲ್ಲ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ ತಾಲೂಕಿಗೆ ಸೇರಿದವರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ತಿಳಿಸಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯ 20 ಸಾವಿರ ಮಂದಿಗೆ ಮೊದಲ ಹಂತದಲ್ಲಿ ಕರೋನ ಲಸಿಕೆ, ಯಾರಿಗೆಲ್ಲ ಸಿಗುತ್ತೆ ಲಸಿಕೆ? ಪೂರೈಕೆ ಹೇಗೆ?
10 ದಿನದ ಮಾಹಿತಿ ಸಂಗ್ರಹ
ರಾಜ್ಯ ಸರ್ಕಾರ ಕಳೆದ ನಾಲ್ಕು ದಿನದ ಹಿಂದೆ ಇಂಗ್ಲೆಂಡ್‍ನಿಂದ ಬಂದವರ ಮಾಹಿತಿ ಕಲೆ ಹಾಕುವಂತೆ ಆರೋಗ್ಯ ಇಲಾಖೆಗೆ ತಿಳಿಸಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ, ಕಳೆದ ಹತ್ತು ದಿನದ ಹಿಂದೆ ಇಂಗ್ಲೆಂಡ್‍ನಿಂದ ಜಿಲ್ಲೆಗೆ ಬಂದವರನ್ನು ಗುರುತಿಸಿ, ಪರೀಕ್ಷೆಗೆ ಒಳಪಡಿಸಲಾಗಿದೆ.
ಮತ್ತೊಂದು ಸುತ್ತಿನ ಪರೀಕ್ಷೆ
ಇಂಗ್ಲೆಂಡ್‍ನಿಂದ ಶಿವಮೊಗ್ಗಕ್ಕೆ ಬಂದಿರುವವರನ್ನು ಒಂದು ಸುತ್ತಿನ ಕೋವಿಡ್ ಪರೀಕ್ಷೆ ಒಳಪಡಿಸಲಾಗಿದೆ. 15 ಮಂದಿಗೂ ನೆಗೆಟಿವ್ ವರದಿ ಬಂದಿದೆ. ಬುಧವಾರ ಮತ್ತೊಂದು ಸುತ್ತಿನ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಡಾ.ರಾಜೇಶ್ ಸುರಗಿಹಳ್ಳಿ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.
ಎಲ್ಲರಿಗೂ ಕ್ವಾರಂಟನ್
15 ಮಂದಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಇವರು ಮನೆಯಿಂದ ಹೊರಬರಬಾರದು, ಯಾರೊಂದಿಗೂ ಸಂಪರ್ಕ ಸಾಧಿಸದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಆರೋಗ್ಯ ಸೇತು ಆಪ್ಲಿಕೇಷನ್ ಹಾಕಲಾಗಿದ್ದು, ಇವರ ಚಲನವಲನ ತಿಳಿಯಲಿದೆ ಎಂದು ಡಾ.ರಾಜೇಶ್ ಸುರಗಿಹಳ್ಳಿ ಹೇಳಿದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

LATEST NEWS
- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

- ಶಿವಮೊಗ್ಗದ ಸವಾರರೆ ಹುಷಾರ್, ಬೈಕ್ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?

- ಭದ್ರಾವತಿ ಹೊಸ ಸಿದ್ಧಾಪುರದಲ್ಲಿ ಮನೆಗೆ ನುಗ್ಗಿದ ಕಳ್ಳರು, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಕಳವು

- ಇವತ್ತಿನ ₹98,140ಕ್ಕೆ ತಲುಪಿದೆ ಅಡಿಕೆ | 12 ಫೆಬ್ರವರಿ 2026 | ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು






