ಶಿವಮೊಗ್ಗ ಲೈವ್.ಕಾಂ | SHIMOGA NEWS | 15 JANUARY 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಶಿವಮೊಗ್ಗ ಜಿಲ್ಲೆಗೆ ಇವತ್ತು ಕರೋನ ಲಸಿಕೆ ಆಗಮಿಸಿದೆ. ಚಿತ್ರದುರ್ಗದ ಪ್ರಾದೇಶಿಕ ಉಗ್ರಾಣದಿಂದ ಲಸಿಕೆ ಶಿವಮೊಗ್ಗದ ಔಷಧ ಉಗ್ರಾಣಕ್ಕೆ ತಲುಪಿದೆ.
45 ಸಾವಿರ ಡೋಸ್ ಲಸಿಕೆಯನ್ನು ಶಿವಮೊಗ್ಗಕ್ಕೆ ಬಂದಿದೆ. ಜನವರಿ 16ರಿಂದ ಲಸಿಕೆ ವಿತರಣೆ ನಡೆಯಲಿದೆ.
ಚಿತ್ರದುರ್ಗದಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಲಸಿಕೆ ತರಲಾಯಿತು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ, ಡಿಹೆಚ್‌ಒ ರಾಜೇಶ್ ಸುರಗೀಹಳ್ಳಿ ಸಮ್ಮುಖದಲ್ಲಿ ಲಸಿಕೆ ಮತ್ತು ಸಿರೇಂಜ್ ಬಾಕ್ಸ್‌ಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಲಸಿಕೆಯನ್ನು ವಾಕಿನ್ ಕೂಲರ್‌ನಲ್ಲಿ ಇರಿಸಲಾಯಿತು.

ಮೊದಲ ದಿನ ಎಲ್ಲೆಲ್ಲಿ ಲಸಿಕೆ ವಿತರಣೆ?
ಜ.16ರಂದು ಶಿವಮೊಗ್ಗ ಜಿಲ್ಲೆಯ 9 ಕಡೆಯಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತದೆ. ಸಾಗರ, ಸೊರಬ, ತೀರ್ಥಹಳ್ಳಿ, ಶಿಕಾರಿಪುರ, ಭದ್ರಾವತಿ ಮತ್ತು ಹೊಸನಗರ ತಾಲೂಕಿನ ಎಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮತ್ತು ತುಂಗಾನಗರದ ಪ್ರಸೂತಿ ಕೇಂದ್ರ, ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ.
91 ಕೇಂದ್ರದಲ್ಲಿ ಲಸಿಕೆ
ಜ.18ರಿಂದ ಜಿಲ್ಲೆಯ 91 ಕೇಂದ್ರಗಳಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಪ್ರತಿ ಬೂತ್‍ನಲ್ಲೂ ನೂರು ಜನರಿಗೆ ಲಸಿಕೆ ನೀಡಲಾಗುತ್ತದೆ.
ಇದನ್ನೂ ಓದಿ | ಶಿವಮೊಗ್ಗಕ್ಕೆ ಮೊದಲು ಬರುತ್ತೆ ಕರೋನ ಲಸಿಕೆ, ಅಕ್ಕಪಕ್ಕದ ಜಿಲ್ಲೆಗೆ ಇಲ್ಲಿಂದಲೇ ಪೂರೈಕೆ, ಹೇಗಿದೆ ಗೊತ್ತಾ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ?
ಇದನ್ನೂ ಓದಿ | ಶಿವಮೊಗ್ಗದಲ್ಲಿ ಕರೋನ ಲಸಿಕೆ ಡ್ರೈ ರನ್ ಶುರು, ಏನಿದು ಡ್ರೈ ರನ್? ಎಲ್ಲೆಲ್ಲಿ ಆಗ್ತಿದೆ? ಯಾರೆಲ್ಲ ಭಾಗವಹಿಸಿದ್ದಾರೆ?
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಭದ್ರಾವತಿಯಲ್ಲಿ ಸಬ್ ಇನ್ಸ್ಪೆಕ್ಟರ್ಗಳ ಕಾಲಿನ ಮೂಳೆ, ಕೈ ಬೆರಳು ಕಟ್, ಆರೋಪಿ ಕಾಲಿಗೆ ಗುಂಡೇಟು

- ಶಿವಮೊಗ್ಗ ಜಿಲ್ಲೆಯಲ್ಲಿ ಮೈ ಸುಡುವ ಬಿಸಿಲಿನ ಜೊತೆಗೆ ಮೈ ನಡುಗಿಸುವ ಚಳಿ, ಇವತ್ತಿನ ಹವಾಮಾನ ವರದಿ

- ಶಿವಮೊಗ್ಗ ತಾಲೂಕಿನ ಹಲವೆಡೆ ಫೆಬ್ರವರಿ 8, 9 ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ನಂಜಪ್ಪ ಆಸ್ಪತ್ರೆಯಲ್ಲಿ ನಡುರಾತ್ರಿ ಚಿರತೆಗೆ ಸ್ಕ್ಯಾನಿಂಗ್, ಏನಿದು? ಹೇಗೆ ನಡೆಯಿತು ಪ್ರಕ್ರಿಯೆ?

- ಶಿವಮೊಗ್ಗ ಬೈಪಾಸ್ನಲ್ಲಿ ಧಗಧಗ ಉರಿದ ಮಳಿಗೆ, ವಸ್ತುಗಳು ಸ್ಪೋಟ, ಏನೇನಾಯ್ತು?

About The Editor
ನಿತಿನ್ ಆರ್.ಕೈದೊಟ್ಲು






