| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಸೆಪ್ಟಂಬರ್ 2020
ಅಮೃತ್ ಯೋಜನೆ ಅಡಿಯಲ್ಲಿ ನಗರದ ರಾಜಾಕಾಲುವೆಗಳ ದುರಸ್ತಿ ಕಾರ್ಯ ಇದುವರೆಗೂ ಪೂರ್ಣಗೊಂಡಿಲ್ಲ ಎಂದು ಮಹಾ ನಗರ ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ.ಯೋಗೀಶ್ ಆರೋಪಿಸಿದರು.
ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ, ರಾಜಾಕಾಲುವೆಗಳ ದುರಸ್ತಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ ಅವರು, ರಾಜಕಾಲು ವೆಗಳನ್ನು ರಿಪೇರಿಗೊಳಿಸುವ ಕಾರ್ಯ ಕಳೆದ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿವೆ ಎಂದು ದೂರಿದರು.
ಇತ್ತೀಚಿನ ದಿನಗಳಲ್ಲಿ ಅಲ್ಪ ಮಳೆಗೂ ಸಹ ರಾಜಾಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯದೆ ಮನೆಗಳಿಗೆ ನುಗ್ಗುತ್ತಿದ್ದು, ರಾಜಾ ಕಾಲುವೆಗಳ ದುರಸ್ತಿ ಕಾಮಗಾರಿ ಸರಿಯಾಗಿ ನಡೆಯದ ಕಾರಣ ಅವ್ಯವಸ್ಥೆಗೆ ಜನ ಒದ್ದಾಡುವ ಹಾಗೆ ಆಗಿದೆ ಎಂದರು.
ಯೋಗೀಶ್ ನೇತೃತ್ವದ ತಂಡದಲ್ಲಿ ಆರ್.ಸಿ ನಾಯ್ಕ್, ಯಮುನಾ ರಂಗೇಗೌಡ, ರೇಖಾರಂಗನಾಥ್ ಸೇರಿದ ಪಾಲಿಕೆ ಸದಸ್ಯರನ್ನೊಳಗೊಂಡ ನಿಯೋಗ ಹೊಸಮನೆ 6 ನೇ ಅಡ್ಡರಸ್ತೆ, 1 ನೇ ಮುಖ್ಯರಸ್ತೆಯ ರಾಜಕಾಲುವೆ, ಜೆಪಿಎನ್ ನಗರ, ಟಿಪ್ಪುನಗರ, ಶ್ರೀರಾಮ ನಗರ, ಶಾಂತಮ್ಮ ಲೇಔಟ್ ಹಾಗೂ ಮಹಾದೇವಿ ನಗರದ ರಾಜಕಾಲುವೆಗಳಿಗೆ ಭೇಟಿ ನಿಡಿ ಪರಿಶೀಲನೆ ನಡೆಸಿತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ
- ಯಡೇಹಳ್ಳಿ ಕ್ರಾಸ್ ಬಳಿ ಅರಣ್ಯ ಸಂಚಾರಿ ದಳದ ದಾಳಿ, ಕಾರಾವಾರದ ವ್ಯಕ್ತಿ ಅರೆಸ್ಟ್
- ಅಡಿಕೆ ಎಲೆಚುಕ್ಕಿ ರೋಗ, ಬಾಕಿ ಹಣ ಬಿಡುಗಡೆಗೆ ಸಿಎಂ ಸೂಚನೆ
- ಕಿತ್ತೂರು ರಾಣಿ ಚನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ
- ಸಾಗರ ನಗರಸಭೆ ಎಚ್ಚರಿಕೆ, ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಮುಖ ಪ್ರಕಟಣೆ
- ‘ಶಿವಮೊಗ್ಗ ಮಹಾನಗರ ಪಾಲಿಕೆಗೆ ಜನವರಿ 2ರವರೆಗೆ ಗಡುವುʼ
- ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಜೋರು, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?
- ಬಾವಿಗೆ ಬಿದ್ದ ಗೂಳಿ, ಹರಸಾಹಸ ಮಾಡಿ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ, ಆಗಿದ್ದೆಲ್ಲಿ?
![]()