ಶಿವಮೊಗ್ಗ ಲೈವ್.ಕಾಂ | SHIMOGA NEWS | 8 MARCH 2021
ಮಹಿಳಾ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಕೋವಿಡ್ ಲಸಿಕೆ ವಿತರಣಾ ಪಿಂಕ್ ಬೂತ್ಗೆ ಆರಂಭಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ ಅವರೆ ಲಸಿಕೆ ಪಡೆದು ಪಿಂಕ್ ಬೂತ್ಗೆ ಚಾಲನೆ ನೀಡಿದರು.
ಶಿವಮೊಗ್ಗದ ತುಂಗಾನಗರದ ಪ್ರಸೂತಿ ಕೇಂದ್ರದಲ್ಲಿ ಪಿಂಕ್ ಬೂತ್ ಆರಂಭಿಸಲಾಗಿದೆ.
ಲಸಿಕೆಯಿಂದ ಆತಂಕವಿಲ್ಲ
ಪಿಂಕ್ ಬೂತ್ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ, ಚುನಾವಣೆ ಸಂದರ್ಭ ಮಹಿಳಾ ಮತದಾರರು ಹೆಚ್ಚಿರುವೆಡೆ ಪಿಂಕ್ ಬೂತ್ ಸ್ಥಾಪಿಸಲಾಗುತ್ತಿತ್ತು. ಈಗ ಲಸಿಕೆ ನೀಡಲು ಪಿಂಕ್ ಬೂತ್ಗಳನ್ನು ಆರಂಭಿಸಲಾಗಿದೆ. ಲಸಿಕೆ ಪಡೆಯುವುದರಿಂದ ಯಾವುದೆ ಆತಂಕವಿಲ್ಲ. ನಾನು ಮೊದಲ ಡೋಸ್ ಪಡೆದಿದ್ದೇನೆ. ಯಾವುದೆ ಸಮಸ್ಯೆ ಆಗಿಲ್ಲ ಎಂದು ತಿಳಿಸಿದರು.
ಎರಡನೇ ಡೋಸ್ ಪಡೆದ ಸಿಇಒ
ಸಿಇಒ ವೈಶಾಲಿ ಅವರು ಲಸಿಕೆ ಪಡೆದು ಪಿಂಕ್ ಬೂತ್ಗೆ ಚಾಲನೆ ನೀಡಿದರು. ಮೊದಲ ಡೋಸ್ ಪಡೆದು 28 ದಿನವಾಗಿತ್ತು. ಹಾಗಾಗಿ ಎರಡನೇ ಡೋಸನ್ನು ಪಿಂಕ್ ಬೂತ್ನಲ್ಲಿ ಪಡೆದರು.
VIDEO REPORT
ಜಿಲ್ಲಾ ವೈದ್ಯಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]