ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019
ನವುಲೆಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಾಳೆಯಿಂದ ಕ್ರಿಕೆಟ್ ಪಂದ್ಯಾವಳಿಗಳು ಆರಂಭವಾಗಲಿದೆ. ಅಂಡರ್ 19, ಅಂಡರ್ 23 ಪಂದ್ಯಾವಳಿ ಮತ್ತು ರಣಜಿ ಮ್ಯಾಚ್’ಗಳು ಒಂದರ ಹಿಂದೆ ಒಂದು ನಡೆಯಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಸ್’ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಅರುಣ್ ಅವರು, ಶಿವಮೊಗ್ಗ ಸ್ಟೇಡಿಯಂನಲ್ಲಿ ನಿರಂತರವಾಗಿ ಪಂದ್ಯಾವಳಿ ನಡೆಯಲಿದೆ ಎಂದರು.
ಯಾವ್ಯಾವ ಪಂದ್ಯ ಯಾವಾಗ ನಡೆಯುತ್ತೆ?
ನ.29 ರಿಂದ ಡಿ.2ರವರೆಗೆ ಕರ್ನಾಟಕ ವರ್ಸಸ್ ಗುಜರಾತ್ ತಂಡಗಳ ನಡುವೆ, ಅಂಡರ್ 19 ಪಂದ್ಯಾವಳಿ ನಡೆಯಲಿದೆ. ಕೋಚ್ ಬೆಹರ್ ಟ್ರೋಫಿಗಾಗಿ ಎರಡು ತಂಡಗಳು ಶಿವಮೊಗ್ಗದಲ್ಲಿ ಸೆಣಸಲಿವೆ.
ಡಿ.11 ರಿಂದ 14ರವರೆಗೆ ಸಿ.ಕೆ.ನಾಯ್ಡು ಟ್ರೋಫಿ ಪಂದ್ಯಾವಳಿ ನಡೆಯಲಿದೆ. ಕರ್ನಾಟಕ ಮತ್ತು ಹೈದರಾಬಾದ್ ತಂಡವ ನಡುವೆ ಮ್ಯಾಚ್ ನಡೆಯಲಿದೆ.

ಮುಂದಿನ ವರ್ಷ ಶಿವಮೊಗ್ಗದಲ್ಲಿ ರಣಜಿ
2020ರ ಫೆಬ್ರವರಿಯಲ್ಲಿ ರಣಜಿ ಪಂದ್ಯಾವಳಿ ನಡೆಯಲಿದೆ. ಕರ್ನಾಟಕ ಮತ್ತು ಮಧ್ಯಪ್ರದೇಶ ತಂಡಗಳ ನಡುವೆ ರಣಜಿ ಮ್ಯಾಚ್ ನಡೆಯಲಿದೆ. ಫೆಬ್ರವರಿ 4 ರಿಂದ 7ರವರೆಗೆ ಪಂದ್ಯಾವಳಿ ನಡೆಯಲಿದೆ.
ಮ್ಯಾಚ್’ಗಳ ಟೈಮಿಂಗ್ಸ್ ಏನು?
ಕ್ರಿಕೆಟ್ ಪಂದ್ಯಾವಳಿಗಳು ಬೆಳಗ್ಗೆ 9.30ರಿಂದ ಮಧ್ಯಾಹ್ನ 12ಗಂಟೆವರೆಗೆ ನಡೆಯಲಿದೆ. 12 ರಿಂದ 12.40ರವರೆಗೆ ಭೋಜನ ವಿರಾಮ, ಮಧ್ಯಾಹ್ನ 12.40ರಿಂದ 2.40ರವರಗೆ ಎರಡನೇ ಅವಧಿ ಪಂದ್ಯಾವಳಿ ನಡೆಯಲಿದೆ. ಮಧ್ಯಾಹ್ನ 2.40ರಿಂದ 3ರವರೆಗೆ ಚಹಾ ವಿರಾಮ, ಮಧ್ಯಾಹ್ನ 3 ರಿಂದ 4.30ರವರೆಗೆ ಕೊನೆ ಅವಧಿ ಮ್ಯಾಚ್ ನಡೆಯುತ್ತೆ.
ಮ್ಯಾಚ್ ನೋಡಲು ಫ್ರೀ ಎಂಟ್ರಿ
ಕ್ರಿಕೆಟ್ ಪಂದ್ಯಾವಳಿಗೆ ಬರುವ ಪ್ರೇಕ್ಷಕರಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧೆಡೆ ಇರುವಂತೆ ಹುಲ್ಲು ಹಾಸಿನ ಮೇಲೆ ಕುಳಿತು ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಇದೆ ಎಂದು ಡಿ.ಎಸ್.ಅರುಣ್ ತಿಳಿಸಿದರು. ಇನ್ನು, ಮ್ಯಾಚ್ ನೋಡಲು ಬರುವವರಿಗೆ ಉಚಿತ ಪ್ರವೇಶವಿರಲಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Under 19, Under 23 and Ranaji Trophy Cricket Matches to be held in Navale KSCA Stadium in Shimoga said convener D S Arun in a press Meet