ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | PETROL | 30 ಮೇ 2022
ಪೆಟ್ರೋಲ್ ಬಂಕ್ ಮಾಲೀಕರು ತೈಲ ಕಂಪನಿಗಳಿಂದ ಒಂದು ದಿನ ಇಂಧನ ಖರೀದಿ ಮಾಡದೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಆದರೆ ಪೆಟ್ರೋಲ್ ಬಂಕ್’ಗಳು ಬಂದ್ ಆಗಲಿವೆ ಎಂದು ಭಾವಿಸಿ ಪೆಟ್ರೋಲ್, ಡಿಸೇಲ್ ಭರ್ತಿ ಮಾಡಿಸಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ.
ಶಿವಮೊಗ್ಗ ನಗರದಲ್ಲಿ ತಡರಾತ್ರಿವರೆಗೂ ಪೆಟ್ರೋಲ್, ಡಿಸೇಲ್ ಖರೀದಿ ಮುಂದುವರೆದಿದೆ. ಕೆಲವು ಪೆಟ್ರೋಲ್ ಬಂಕ್’ಗಳ ಮುಂದೆ ಜನ ಸಾಗರ ಸೇರಿದೆ. ಗ್ರಾಹಕರನ್ನು ನಿಯಂತ್ರಿಸುವುದು ಬಂಕ್ ಸಿಬ್ಬಂದಿಗೆ ಕಷ್ಟದ ಕೆಲಸವಾಗಿದೆ.
ಕೂಗಾಟ, ಜಗಳ, ಕಿತ್ತಾಟ
ಬಂಕ್’ಗಳ ಮುಂದೆ ಪೆಟ್ರೋಲ್, ಡಿಸೇಲ್’ಗಾಗಿ ಜನರು ಕೂಗಾಟ, ಜಗಳ, ಕಿತ್ತಾಟದಲ್ಲಿ ತೊಡಗಿದ್ದಾರೆ. ಬಂಕುಗಳಲ್ಲಿ ತಮ್ಮ ವಾಹನಕ್ಕೆ ಮೊದಲು ಇಂಧನ ಭರ್ತಿ ಮಾಡಬೇಕು ಎಂಬ ಕಿತ್ತಾಟ ಸಾಮಾನ್ಯವಾಗಿದೆ. ಮತ್ತೊಂದೆಡೆ ಕ್ಯಾನುಗಳಿಗೆ ಪೆಟ್ರೋಲ್, ಡಿಸೇಲ್ ತುಂಬಿಸದಂತೆ ಗ್ರಾಹಕರು ಜಗಳಕ್ಕಿಳಿದಿದ್ದಾರೆ.
ತಡ ರಾತ್ರಿಯಲ್ಲೂ ಕ್ಯೂ
ಶಿವಮೊಗ್ಗದ ಭಾರ್ಗವಿ ಪೆಟ್ರೋಲ್ ಬಂಕ್’ನಲ್ಲಿ ತಡರಾತ್ರಿಯಾದರೂ ಪೆಟ್ರೋಲ್, ಡಿಸೇಲ್ ಹಾಕಿಸಿಕೊಳ್ಳಲು ಜನರು ಮುಗಿಬಿದ್ದಿದ್ದರು. ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುವುದರ ಜೊತೆಗೆ, ಕ್ಯಾನುಗಳಿಗೂ ಇಂಧನ ತುಂಬಿಸಿಕೊಂಡರು. ಪೆಟ್ರೋಲ್ ಹಾಕಿಸಿಕೊಳ್ಳಲು ವಾಹನಗಳ ದೊಡ್ಡ ಸಾಲು ಇದೆ.
ಜಿಲ್ಲೆಯಾದ್ಯಂತ ಇದೆ ಸ್ಥಿತಿ
ಜಿಲ್ಲೆಯ ವಿವಿಧೆಡೆ ಪೆಟ್ರೋಲ್, ಡಿಸೇಲ್’ಗಾಗಿ ಜನರು ಬಂಕ್’ಗಳ ಮುಂದೆ ಮುಗಿಬಿದ್ದಿರುವುದಾಗಿ ತಿಳಿದು ಬಂದೆ. ರಾತ್ರಿ ವೇಳೆಯು ಜನರು ಪೆಟ್ರೋಲ್, ಡಿಸೇಲ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೆಲವು ಕಡೆ ಪೆಟ್ರೋಲ್ ಖಾಲಿಯಾಗಿದೆ ಎಂದು ತಿಳಿಸಿದರೂ ಜನರು ಪಟ್ಟು ಸಡಿಲಿಸಿಲ್ಲ.
ಇದನ್ನೂ ಓದಿ – ಮುಷ್ಕರದ ಎಫೆಕ್ಟ್, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೆಟ್ರೋಲ್, ಡಿಸೇಲ್’ಗಾಗಿ ಮುಗಿಬಿದ್ದ ಜನ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422