ಶಿವಮೊಗ್ಗ ಲೈವ್.ಕಾಂ | SHIMOGA NEWS | 04 FEBRUARY 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಕ್ಯಾನ್ಸರ್ ಕಾಯಿಲೆಗೆ ತುತ್ತಾದ ಸರ್ಕಾರಿ ನೌಕರರಿಗೆ ಸಾಂದರ್ಭಿಕ ರಜೆ ಮಂಜೂರು ಮಾಡವ ಆದೇಶ ಸದ್ಯದಲ್ಲೇ ಹೊರಬೀಳಲಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಷಡಾಕ್ಷರಿ, ಕ್ಯಾನ್ಸರ್ ಚಿಕಿತ್ಸೆಗೆ ರೇಡಿಯೇಷನ್, ಕಿಮೋಥೆರಪಿ ಮಾಡಿಸಲು ಈ ಸಾಂದರ್ಭಿಕ ರಜೆ ಅನುಕೂಲವಾಗಲಿದೆ ಎಂದರು.
ಇದನ್ನೂ ಓದಿ | ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, ಧನ್ಯವಾದ ಶಿವಮೊಗ್ಗ
ಆರೋಗ್ಯ ಸಿರಿ ಯೋಜನೆ
ರಾಜ್ಯ ಸರ್ಕಾರಿ ನೌಕರರ ಅನುಕೂಲಕ್ಕಾಗಿ ಏಪ್ರಿಲ್ 1ರಿಂದ ಆರೋಗ್ಯ ಸಿರಿ ಯೋಜನೆ ಜಾರಿಯಾಗಲಿದೆ ಎಂದು ಷಡಾಕ್ಷರಿ ತಿಳಿಸಿದ್ದಾರೆ.
ಆರೋಗ್ಯ ಸರಿ ಯೋಜನೆಗಾಗಿ ಪ್ರತ್ಯೇಕ ಸಾಫ್ಟ್‍ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ.
ಸರ್ಕಾರಿ ನೌಕರರು ಒಳ, ಹೊರ ರೋಗಿಗಳಾಗಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಎಲ್ಲ ವಿಧದ ಔಷಧ, ಮೆಡಿಕಲ್ ಇಮೇಜಿಂಗ್ ಸ್ಕ್ಯಾನಿಂಗ್, ಲ್ಯಾಬೊರೇಟರಿ ಪರೀಕ್ಷೆಗಳು, ವಾಹನ ಸೌಲಭ್ಯ ಉಚಿತವಾಗಿ ಲಭಿಸಲಿದೆ.

ನೌಕರರಿಗೆ ಆನ್ ಲೈನ್ ತರಗತಿ
ರಾಜ್ಯ ಸರ್ಕಾರಿ ನೌಕರರು ಅಕೌಂಟ್ಸ್ ಹೈಯರ್, ಲೋಯರ್ ಮತ್ತು ಜನರಲ್ ಲಾ ಭಾಗ 1 ಮತ್ತು 2 ಇಲಾಖೆ ಪರೀಕ್ಷೆ ಮತ್ತು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಎದುರಿಸಲು ಆನ್ ಲೈನ್ ಕ್ಲಾಸ್ ಆಯೋಜಿಸಲಾಗಿತ್ತಿದೆ. ಸರ್ಕಾರಿ ನೌಕರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಷಡಾಕ್ಷರಿ ತಿಳಿಸಿದರು.
ಸಂಘದ ಗೌರವಾಧ್ಯಕ್ಷ ರಮೇಶ್, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್ ಕುಮಾರ್, ಕಾರ್ಯದರ್ಶಿ ಐ.ಪಿ.ಶಾಂತಾಜ್, ಉಪಾಧ್ಯಕ್ಷ ಪಾಪಣ್ಣ, ಪ್ರಮುಖರಾದ ಆರ್.ಮಾರುತಿ, ದಿನೇಶ್, ಸತೀಶ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಭದ್ರಾವತಿಯಲ್ಲಿ ಸಬ್ ಇನ್ಸ್ಪೆಕ್ಟರ್ಗಳ ಕಾಲಿನ ಮೂಳೆ, ಕೈ ಬೆರಳು ಕಟ್, ಆರೋಪಿ ಕಾಲಿಗೆ ಗುಂಡೇಟು

- ಶಿವಮೊಗ್ಗ ಜಿಲ್ಲೆಯಲ್ಲಿ ಮೈ ಸುಡುವ ಬಿಸಿಲಿನ ಜೊತೆಗೆ ಮೈ ನಡುಗಿಸುವ ಚಳಿ, ಇವತ್ತಿನ ಹವಾಮಾನ ವರದಿ

- ಶಿವಮೊಗ್ಗ ತಾಲೂಕಿನ ಹಲವೆಡೆ ಫೆಬ್ರವರಿ 8, 9 ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ನಂಜಪ್ಪ ಆಸ್ಪತ್ರೆಯಲ್ಲಿ ನಡುರಾತ್ರಿ ಚಿರತೆಗೆ ಸ್ಕ್ಯಾನಿಂಗ್, ಏನಿದು? ಹೇಗೆ ನಡೆಯಿತು ಪ್ರಕ್ರಿಯೆ?

- ಶಿವಮೊಗ್ಗ ಬೈಪಾಸ್ನಲ್ಲಿ ಧಗಧಗ ಉರಿದ ಮಳಿಗೆ, ವಸ್ತುಗಳು ಸ್ಪೋಟ, ಏನೇನಾಯ್ತು?

About The Editor
ನಿತಿನ್ ಆರ್.ಕೈದೊಟ್ಲು






