ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 DECEMBER 2022
ಶಿವಮೊಗ್ಗ : ಮೋಜು ಮಸ್ತಿಗಾಗಿ ದರೋಡೆ ಮಾಡಲು ಹೊಂಚು ಹಾಕಿದ್ದ ಗ್ಯಾಂಗ್ (gang arrested) ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಒಬ್ಬ ತಪ್ಪಿಸಿಕೊಂಡಿದ್ದಾನೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ರೈಲ್ವೆ ನಿಲ್ದಾಣ ಪಕ್ಕದ ಗೂಡ್ಸ್ ಶೆಡ್ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಕೋಟೆ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
(gang arrested)
ಮಾರಕಾಸ್ತ್ರ, ಖಾರದ ಪುಡಿ
ದಾಳಿ ನಡೆಸುತ್ತಿದ್ದಂತೆ ಐವರು ಆರೋಪಿಗಳ ಪೈಕಿ ಓರ್ವ ಪರಾರಿಯಾಗಿದ್ದಾನೆ. ಉಳಿದ ನಾಲ್ವರು ಸಿಕ್ಕಿಬಿದ್ದಿದ್ದಾರೆ. ರಾಗಿಗುಡ್ಡದ ತೌಫಿಕ್ (32), ಬಾಪೂಜಿನಗರದ ಡ್ಯಾನಿಯಲ್ (42), ಭಾರತಿ ಕಾಲೋನಿಯ ಕುಮಾರಸ್ವಾಮಿ (45), ಶೇಷಾದ್ರಿಪುರದ ರಾಘವೇಂದ್ರ (42) ಬಂಧಿತರು. ಇವರ ಬಳಿಕ ಒಂದು ತಲ್ವಾರ, ಕಬ್ಬಿಣ ರಾಡ್, ದೊಣ್ಣೆ, ಖಾರದ ಪುಡಿ ಪತ್ತೆಯಾಗಿದೆ.
ಒಬ್ಬಂಟಿಯಾಗಿ ಬರುವವರೆ ಟಾರ್ಗೆಟ್
ದುಡಿದ ಹಣ ಮೋಜು ಮಸ್ತಿಗೆ ಸಾಲುತ್ತಿರಲಿಲ್ಲ ಎಂದು ದರೋಡೆಗೆ ಮುಂದಾಗಿದ್ದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಶೇಷಾದ್ರಿಪುರ ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕಿದ್ದಾಗಿ ಹೇಳಿಕೆ ನೀಡಿದ್ದಾರೆ.
ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ALSO READ – ಆಸ್ಪತ್ರೆ ಟಾಯ್ಲೆಟ್‌ನಿಂದ ಹೊರಬಂದು ಕೈದಿಯ ರಂಪಾಟ, ಚೆಕ್ ಮಾಡುವಾಗ ಕೆಳಗೆ ಬಿತ್ತು ಪೊಟ್ಟಣ, FIR ದಾಖಲು