SHIVAMOGGA LIVE NEWS, 20 JANUARY 2025
ಶಿವಮೊಗ್ಗ : ಸಂಚಾರ ದಟ್ಟಣೆ ಮತ್ತು ಅಪಾಘತ ತಪ್ಪಿಸಲು ಹಾಕಲಾಗಿರುವ ರಸ್ತೆ ವಿಭಜಕಗಳೆ ಈಗ ಅಪಘಾತಕ್ಕೆ ಕಾರಣವಾಗುತ್ತಿವೆ. ನಗರದ ವಿವಿಧೆಡೆ ಡಿವೈಡರ್ಗಳು (Divider) ಅಡ್ಡಾದಿಡ್ಡಿಯಾಗಿವೆ. ಇದರಿಂದ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಕುವೆಂಪು ರಸ್ತೆ
ನಗರದ ಕುವೆಂಪು ರಸ್ತೆಯಲ್ಲಿ ಸಾಯಿವರಂ ಹೊಟೇಲ್ ಮುಂಭಾಗ ಸಿಮೆಂಟ್ ಬ್ಲಾಕ್ಗಳ ರಸ್ತೆ ವಿಭಜಕ ಹಾಕಲಾಗಿದೆ. ಈ ವಿಭಜಕಗಳು ಅಡ್ಡಾದಿಡ್ಡಿಯಾಗಿವೆ. ಇಲ್ಲಿ ಆಂಬುಲೆನ್ಸ್ಗಳ ಸಂಚಾರ ಹೆಚ್ಚು. ಅಲ್ಲದೆ ವಾಹನ ದಟ್ಟಣೆಯು ಇರುತ್ತದೆ. ಸ್ವಲ್ಪ ಯಾಮಾರಿದರೆ ಅಪಘಾತ ನಿಶ್ಚಿತ. ಈಚೆಗೆ ಇದೇ ವಿಭಜಕಕ್ಕೆ ಕಾರು ಡಿಕ್ಕಿಯಾತ್ತು. ಅದೃಷ್ಟವಶಾತ್ ಯಾವುದೇ ಸಮಸ್ಯೆಯಾಗಲಿಲ್ಲ.
ಶಂಕರಮಠ ರಸ್ತೆ
ಇನ್ನು, ಶಂಕರಮಠ ರಸ್ತೆಯಲ್ಲಿ ಬಿ.ಹೆಚ್.ರಸ್ತೆಗೆ ಹೋಗುವ ಮಾರ್ಗದಲ್ಲಿ ಸಿಮೆಂಟ್ ಬ್ಲಾಕ್ನ ಡಿವೈಡರ್ ಹಾಕಲಾಗಿದೆ. ಇಲ್ಲಿಯು ಡಿವೈಡರ್ ಅಪಾಯಕಾರಿ ಸ್ಥಿತಿಯಲ್ಲಿವೆ. ಹೊರ ಜಿಲ್ಲೆಯ ಅತಿ ಹೆಚ್ಚು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.
ಪಾಯಿಂಟ್ 1 ಸಿಮೆಂಟ್ ಬ್ಲಾಕ್ ರಸ್ತೆ ವಿಭಜಕಗಳು ಅಡ್ಡಾದಿಡ್ಡಿಯಾಗಿವೆ. ಇವುಗಳನ್ನು ತಕ್ಷಣ ಸರಿಪಡಿಸದೆ ಹೋದರೆ ಅಪಘಾತ ನಿಶ್ಚಿತವಾಗಿದೆ. ರಸ್ತೆ ವಿಭಜಕಗಳು ಇರುವೆಡೆ ಸೂಚನಾ ಫಲಕಗಳಿಲ್ಲ. ರಿಫ್ಲೆಕ್ಟರ್ಗಳನ್ನು ಕೂಡ ಹಾಕಲಾಗಿಲ್ಲ. ಆದ್ದರಿಂದ ವಿಭಜಗಳ ಕುರಿತು ವಾಹನ ಚಾಲಕರಿಗೆ ತಕ್ಷಣ ಗೊತ್ತಾಗುವುದಿಲ್ಲ. ಶಂಕರಮಠ ರಸ್ತೆ, ಜೈಲ್ ವೃತ್ತ, ತುಂಗಾ ಸೇತುವೆ ಬಳಿ ಎನ್ಸಿಸಿ ಕಚೇರಿ ಮುಂಭಾಗ ಹೊಸದಾಗಿ ನಿರ್ಮಿಸಲಾಗಿರುವ ರಸ್ತೆ ವಿಭಜಗಳು ಇದಕ್ಕೆ ಉದಾಹರಣೆ. ರಸ್ತೆ ವಿಭಜಕಗಳು ಇರುವ ಕಡೆ ಬೆಳಕಿಗೆ ಕೊರತೆ ಇದೆ. ಬೀದಿ ದೀಪಗಳು ಇರದ ಕಾರಣಕ್ಕೆ ಇಂತಹ ಜಾಗಗಳಲ್ಲಿ ವಿಭಜಕಗಳು ಚಾಲಕರ ಅರಿವಿಗೆ ಬರುವ ಹೊತ್ತಿಗೆ ವಾಹನಗಳು ವಿಭಜಕದ ಸಮೀಪಕ್ಕೆ ತಲುಪಿರುತ್ತವೆ.ರಸ್ತೆ ವಿಭಜಕದಿಂದ ಅಪಘಾತ, ಹೇಗದು?
ಪಾಯಿಂಟ್ 2
ಪಾಯಿಂಟ್ 3
ಇದನ್ನೂ ಓದಿ » ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?