ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 JANUARY 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಕೆಂಪು ಲೈಟ್ ಹೊತ್ತಿಕೊಳ್ಳುವ ಮುನ್ನ ಸಿಗ್ನಲ್ ದಾಟಬೇಕು ಎಂದು ವಾಹನ ಸವಾರರು ಧಾವಂತದಲ್ಲಿ ನುಗ್ಗುವುದು ಸಾಮಾನ್ಯ. ಸಿಗ್ನಲ್ ಲೈಟ್ ಇಲ್ಲದೆ ಇದ್ದರಂತು ವಾಹನಗಳ ವೇಗ ತಗ್ಗುವುದೇ ಇಲ್ಲ. ಅದರೆ ನಗರದ ಮೂರು ಕಡೆ ಸಿಗ್ನಲ್‌ನಲ್ಲಿ ಧಾವಂತ ತೋರಿಸಿದರೆ, ಕತ್ತಲಲ್ಲಿ ಸ್ವಲ್ಪ ಮೈಮರೆತರೆ ದ್ವಿಚಕ್ರ ವಾಹನ ಸವಾರರು ಕೈ, ಕಾಲು ಕಳೆದುಕೊಳ್ಳುವುದು ನಿಶ್ಚಿತ. ಹಣೆಬರಹ ಸರಿ ಇಲ್ಲದೆ ಇದ್ದರೆ ಪ್ರಾಣಕ್ಕೆ ಸಂಚಕಾರ ಎದುರಾಗಲಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಎಲ್ಲೆಲ್ಲಿ ಏನಿದು ಸಮಸ್ಯೆ?
ಸಿಗ್ನಲ್ 1 : ಕರ್ನಾಟಕ ಸಂಘದ ಬಳಿ
ಬಿ.ಹೆಚ್.ರಸ್ತೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪುತ್ಥಳಿ ಮುಂಭಾಗ ಸಿಗ್ನಲ್ ಇದೆ. ಇಲ್ಲಿ ಕಾಂಕ್ರಿಟ್ ರಸ್ತೆಯ ಮೇಲೆ ಆಳವಾದ ಗುಂಡಿಯಾಗಿದೆ. ಕೇಬಲ್ ಅಳವಡಿಸುವ ಸಲುವಾಗಿ ಈ ಗುಂಡಿ ಅಗೆಯಲಾಗಿತ್ತು ಎಂದು ಸ್ಥಳೀಯರು ತಿಳಿಸುತ್ತಾರೆ. ಆದರೆ ಗುಂಡಿಯನ್ನು ಸರಿಯಾಗಿ ಮುಚ್ಚದಿರುವುದರಿಂದ ವಾಹನ ಸವಾರರಿಗೆ ಕಂಟಕವಾಗಿದೆ.
ಸಿಗ್ನಲ್ 2 : ಶಂಕರಮಠ ಸರ್ಕಲ್
ಇತ್ತ ಶಂಕರ ಮಠ ಸರ್ಕಲ್‌ನಲ್ಲಿಯು ಇದೇ ರೀತಿ ಸಮಸ್ಯೆ ಇದೆ. ರಾಯಲ್ ಎನ್‌ಫೀಲ್ಡ್ ಶೋ ರೂಂ ಮುಂಭಾಗ ಶಂಕರಮಠ ರಸ್ತೆಯಿಂದ ಬರುವ ವಾಹನಗಳು ಬಿ.ಹೆಚ್.ರಸ್ತೆ ತಲುಪುವ ಕಡೆ ರಸ್ತೆಯಲ್ಲಿ ಗುಂಡಿಯಾಗಿದೆ. ಇಲ್ಲಿ ವಾಹನ ಸವಾರರು ಸ್ವಲ್ಪ ಯಾಮಾರಿದರೆ ಇಹಲೋಕ ಯಾತ್ರೆ ಮುಕ್ತಾಯವಾಗಲಿದೆ.
ಸಿಗ್ನಲ್ 3 : ಕೆಇಬಿ ಸರ್ಕಲ್
ಇನ್ನು, ಕೆಇಬಿ ಸರ್ಕಲ್ ಸಿಗ್ನಲ್‌ನಲ್ಲು ಗುಂಡಿ ಸಮಸ್ಯೆ ಇದೆ. ರಾತ್ರಿ ವೇಳೆ ಇಲ್ಲಿ ಗುಂಡಿ ಇರುವುದೆ ಗೊತ್ತಾಗುವುದಿಲ್ಲ. ರಾತ್ರಿ ಮತ್ತು ಬೆಳಗ್ಗೆ ರೈಲ್ವೆ ನಿಲ್ದಾಣದಕ್ಕೆ ಹೆಚ್ಚಿನ ಜನರು ಈ ರಸ್ತೆಯಲ್ಲಿ ತೆರಳುತ್ತಾರೆ.
ಬಿದ್ದವರು, ಸಮಸ್ಯೆಗೆ ಸಿಕ್ಕಿವರಿದ್ದಾರೆ
ಸಿಗ್ನಲ್‌ನಲ್ಲಿರುವ ಈ ಗುಂಡಿಗಳು ಆಳವಾಗಿದ್ದು ಇಲ್ಲಿ ಬಿದ್ದು ಗಾಯಗೊಂಡವರಿದ್ದಾರೆ. ಹೆಚ್ಚು ಭಾರ ಹೊತ್ತು ಸಾಗುವ ಗೂಡ್ಸ್ ವಾಹನಗಳು ಈ ಗುಂಡಿಗಳಲ್ಲಿ ಸಿಲುಕಿದ ಉದಾಹರಣೆಗಳಿವೆ. ಲೋಡ್ ಸಹಿತ ವಾಹನವನ್ನು ಗುಂಡಿಯಿಂದ ಮೇಲೆತ್ತಲು ಚಾಲಕರು ಪರದಾಡುತ್ತಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಂದೇ ಬೈಕ್‌ಗೆ ಒಂದೂವರೆ ಮೀಟರ್‌ಗಿಂತಲೂ ಹೆಚ್ಚು ಉದ್ದದ ದಂಡದ ಬಿಲ್, ಫೈನ್ ಮೊತ್ತ ಎಷ್ಟು?
ಇನ್ನು, ಕೇಬಲ್ ಅಳವಡಿಸಲು ಗುಂಡಿ ತೆಗೆದ ನಂತರ ಕೇವಲ ಮಣ್ಣು ಮುಚ್ಚಲಾಗಿತ್ತು. ಮುಖ್ಯ ರಸ್ತೆಯಾದ್ದರಿಂದ ವಾಹನ ದಟ್ಟಣೆ ಹೆಚ್ಚು. ವಾಹನಗಳ ಸಂಚಾರದಿಂದ ಮಣ್ಣೆಲ್ಲ ಖಾಲಿಯಾಗಿ ಪದೇ ಪದೆ ಗುಂಡಿಯಾಗುತ್ತಿದೆ. ಆದರೆ ಇವುಗಳನ್ನು ಶಾಶ್ವತವಾಗಿ ಮುಚ್ಚದೆ ವಾಹನ ಸವಾರರ ಜೀವದ ಜೊತೆಗೆ ಚೆಲ್ಲಾಟವಾಡಲಾಗುತ್ತಿದೆ.