ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಅಕ್ಟೋಬರ್ 2020
ಶಿವಮೊಗ್ಗದಲ್ಲಿ ವಿಜಯದಶಮಿ ಮೆರವಣಿಗೆ ಆರಂಭವಾಗಿದೆ. ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಮುಂಭಾಗ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿಲಾಯಿತು.
ಸಚಿವ ಕೆ.ಎಸ್.ಈಶ‍್ವರಪ್ಪ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಕಮಿಷನರ್ ಚಿದಾನಂದ ವಟಾರೆ, ವಿರೋಧ ಪಕ್ಷದ ನಾಯಕ ಯೋಗೇಶ್ ಸೇರಿದಂತೆ ಹಲವರು ಮೆರವಣಿಗೆಯಲ್ಲಿದ್ದಾರೆ.
ಮಳೆಯಿಂದ ಮೆರವಣಿಗೆಗೆ ಅಡ್ಡಿ
ಮೆರವಣಿಗೆ ಆರಂಭಕ್ಕೂ ಮೊದಲು ಜೋರು ಮಳೆಯಾಯ್ತು. ಇದರಿಂದ ನಂದಿ ಧ್ವಜ ಪೂಜೆ ನಿಧಾನವಾಯ್ತು. ಜನರು ಮಳೆಯಿಂದ ತಪ್ಪಿಸಿಕೊಳ್ಳಲು ಕಟ್ಟಡಗಳ ಕೆಳಗೆ ನಿಂತರು. ಆದರೆ ಮೇಯರ್ ಸೇರಿದಂತೆ ಕಾರ್ಪೊರೇಟರ್‍ಗಳು ಮಳೆಯ ನಡುವೆಯು ರಸ್ತೆಯಲ್ಲೇ ನಿಲ್ಲಬೇಕಾಯ್ತು.
ಒಂದು ಗಂಟೆಗೂ ಹೆಚ್ಚು ಲೇಟ್
ಮೆರವಣಿಗೆ ಉದ್ಘಾಟನೆ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿತ್ತು. ಆದರೆ ಕಾರ್ಯಕ್ರಮ ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು. ಪಾಲಿಕೆ ಮೇಯರ್, ಕಾರ್ಪೊರೇಟರ್‍ಗಳು, ಸಚಿವ ಈಶ್ವರಪ್ಪ ಅವರು ಸಂಜೆ 4 ಗಂಟೆ ಹೊತ್ತಿಗೆ ಆಗಮಿಸಿದರು. ಈ ನಡುವೆ ಮಳೆಯಿಂದಾಗಿ ಮೆರವಣಿಗೆ ತಡವಾಯ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]