ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |31 DECEMBER 2022
ಶಿವಮೊಗ್ಗ : ನಗರದಲ್ಲಿ ಸಂಚರಿಸುವ ಸಿಟಿ ಬಸ್ಸುಗಳು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಆರೋಪದ ಹಿನ್ನೆಲೆಯಲ್ಲಿ ನಗರದಲ್ಲಿ ಬಸ್ ನಿಲ್ದಾಣಗಳನ್ನು (bus stop) ಗುರುತಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಬಸ್ ನಿಲ್ದಾಣಗಳನ್ನು (bus stop) ಗುರುತಿಸಿ ಅಧಿಸೂಚನೆ ಹೊರಡಿಸಿದ್ದಾರೆ. ನಗರದಲ್ಲಿ ಸಂಚರಿಸುತ್ತಿರುವ 61 ಸಿಟಿ ಬಸ್ಸುಗಳು ನಿಗದಿತ ನಿಲ್ದಾಣದಲ್ಲಿಯೆ ಬಸ್ ನಿಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಶಿವಮೊಗ್ಗ ನಗರದಲ್ಲಿ 117 ನಿಲ್ದಾಣಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಬಹತೇಕ ಕಡೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಬಸ್ ಶೆಲ್ಟರ್ ನಿರ್ಮಾಣ ಮಾಡಲಾಗಿದೆ.
ಎಲ್ಲೆಲ್ಲಿ ನಿಲ್ದಾಣ ಇರಲಿದೆ? (bus stop)
ಪೂರ್ವ ಸಂಚಾರಿ ಠಾಣೆ ವ್ಯಾಪ್ತಿ
ಬಿ.ಹೆಚ್.ರಸ್ತೆಯಲ್ಲಿ – ಶಿವಪ್ಪನಾಯಕ ವೃತ್ತ, ಸರ್ಕಾರಿ ಮೇನ್ ಮಿಡ್ಲ್ ಸ್ಕೂಲ್ ಎದುರು, ಕರ್ನಾಟಕ ಸಂಘ ಬಸ್ ನಿಲ್ದಾಣ, ಡಿಡಿಪಿಐ ಕಚೇರಿ ದ್ವಾರದ ಬಳಿ, ಕೃಷ್ಣ ಕೆಫೆ ಹೊಟೇಲ್ ಎದುರು, ಮೀನಾಕ್ಷಿಭವನ, ಕರ್ನಾಟಕ ಪಬ್ಲಿಕ್ ಶಾಲೆ ಎದುರು, ತುಂಗಾ ನದಿ ಹೊಳೆ ಬಸ್ ಸ್ಟಾಪ್, ಹೊಳೆಹೊನ್ನೂರು ಕ್ರಾಸ್ (ಎನ್.ಸಿ.ಸಿ ಕಚೇರಿ ಹತ್ತಿರ), ಮಹಾದೇವಿ ಟಾಕೀಸ್, ವಿದ್ಯಾನಗರ ಗಣೇಶ ಭವನ, ಗಣಪತಿ ದೇವಸ್ಥಾನ ಎಡ ಭಾಗ (ವಿದ್ಯಾನಗರ), ಗಣಪತಿ ದೇವಸ್ಥಾನ ಬಲ ಭಾಗ (ವಿದ್ಯಾನಗರ), ದೂರದರ್ಶನ ಕೇಂದ್ರ ಬಳಿ, ಎಂ.ಆರ್.ಎಸ್ ಸರ್ಕಲ್ ಎಡ ಭಾಗ, ಎಂ.ಆರ್.ಎಸ್ ಸರ್ಕಲ್ ಬಲಭಾಗ, ಹರಿಗೆ, ಹಾಥಿ ನಗರ ಕ್ರಾಸ್, ಶುಗರ್ ಫ್ಯಾಕ್ಟರಿ, ಮಲವಗೊಪ್ಪ ಚನ್ನಬಸವೇಶ್ವರ ದೇವಸ್ಥಾನ ಬಳಿ, ಕಾಡಾ ಕಚೇರಿ ಎದುರು
ಹೊಳೆಹೊನ್ನೂರು ರಸ್ತೆ – ಸಿದ್ದೇಶ್ವರ ನಗರ 2ನೇ ಕ್ರಾಸ್, ಕೆನರಾ ಬ್ಯಾಂಕ್ ಎದುರು, ಗುರುಪುರ, ಪುರಲೆ, ಸುಬ್ಬಯ್ಯ ಮೆಡಿಕಲ್ ಕಾಲೇಜು
ಎನ್.ಆರ್.ಪುರ ರಸ್ತೆ – ಜ್ಯೋತಿ ನಗರ, ಒಡ್ಡಿನಕೊಪ್ಪ,
ಬಾಲರಾಜ ಅರಸ್ ರಸ್ತೆ – ಮುಖ್ಯ ಅಂಚೆ ಕಚೇರಿ ಎದುರು, ತಾನಿಷ್ಕ್ ಜ್ಯೂವೆಲರ್ಸ್ ಎದುರು, ತಾಲೂಕು ಕಚೇರಿ ಎದುರು, ಕೆಇಬಿ ಸರ್ಕಲ್, ಮುಖ್ಯ ರೈಲ್ವೆ ನಿಲ್ದಾಣ
ಹೊನ್ನಾಳಿ ರಸ್ತೆ – ಸಂಗೊಳ್ಳಿ ರಾಯಣ್ಣ ಸರ್ಕಲ್, ಶೃತಿ ಶೋ ರೂಂ ಎದುರು ಹೊನ್ನಾಳಿ ರಸ್ತೆ (ಶಾಂತಿ ನಗರ), ಶ್ರೀ ನಾಗಪ್ಪ ಸರ್ಕಲ್ ಶಾಂತಿನಗರ, ಪೇಸ್ ಕಾಲೇಜ್ ಎದುರು, ತ್ಯಾವರೆ ಚಟ್ನಳ್ಳಿ
ಸವಳಂಗ ರಸ್ತೆ – ಈದ್ಗಾ ಮೈದಾನದ ಎದುರು (ಡಿಸಿ ಕಚೇರಿ ಮುಂಭಾಗ), ಜಯನಗರ ಠಾಣೆ ಬಳಿ, ವಂದನಾ ಬೇಕರಿ ಬಳಿ, ಉಷಾ ನರ್ಸಿಂಗ್ ಹೋಂ ಬಳಿ, ಎಲ್.ಬಿ.ಎಸ್ ನಗರ 2ನೇ ಕ್ರಾಸ್, ನವುಲೆ, ತ್ರಿಮೂರ್ತಿ ನಗರ ಗಣಪತಿ ದೇವಸ್ಥಾನ, ಕುವೆಂಪು ನಗರ ಕ್ರಾಸ್, JNNCE ಕಾಲೇಜು, ಅಕ್ಷರ ಕಾಲೇಜು, ಕೃಷಿ ಕಾಲೇಜು, ಚನ್ನಮುಂಭಾಪುರ ಕ್ರಾಸ್, ಬಸವನಗಂಗೂರು ಕ್ರಾಸ್, ರತ್ನಾಕರ ಬಡಾವಣೆ, ಸರ್ಕಾರಿ ನೌಕರರ ಬಡಾವಣೆ, ರತ್ನಗಿರಿ ಬಡಾವಣೆ, ಕುವೆಂಪು ನಗರ ಎ ಬ್ಲಾಕ್ ವಿದ್ಯಾ ಭಾರತಿ ಕಾಲೇಜು ಬಳಿ, ಎನ್.ಇ.ಎಸ್ ಲೇಔಟ್ ಕುವೆಂಪು ನಗರ
100 ಅಡಿ ರಸ್ತೆ – ನಿರ್ಮಲಾ ಆಸ್ಪತ್ರೆ ಬಳಿ, ರಾಜೇಂದ್ರ ನಗರ ಚಾನಲ್ ಬಳಿ, ಗಾಂಧಿ ನಗರ, ರವೀಂದ್ರ ನಗರ ಗಣಪತಿ ದೇವಸ್ಥಾನ, ಬ್ಲಡ್ ಬ್ಯಾಂಕ್ ಬಳಿ
ಪಶ್ಚಿಮ ಸಂಚಾರಿ ಠಾಣೆ ವ್ಯಾಪ್ತಿ
ಮಿಳಘಟ್ಟ ಕ್ರಾಸ್ ನಿಂದ ಗೋಪಾಲಗೌಡ ಬಡಾವಣೆ – ಮಿಳಘಟ್ಟ, ಲಕ್ಷ್ಮೀ ಕ್ಯಾಂಟೀನ್, ಪದ್ಮಾ ಟಾಕೀಸ್, ಅಣ್ಣಾ ನಗರ ಚಾನಲ್, ಗೋಪಾಳ ವಿನಾಯಕ ಸರ್ಕಲ್, ಗುಡ್ ಲಕ್ ಸರ್ಕಲ್ (ಸ್ವಾಮಿ ವಿವೇಕಾನಂದ ಬಡಾವಣೆ), ವೃದ್ಧಾಶ್ರಮ (ಎಲ್.ಹೆಚ್.ಎಸ್)
ಗೋಪಾಲ ಗೌಡ 100 ಅಡಿ ರಸ್ತೆ – ಮೋರ್ ಶಾಪ್ ಬಳಿ, ಗೋಪಾಲಗೌಡ ಬಡಾವಣೆ ಹೆಚ್.ಬ್ಲಾಕ್ ಪೆಟ್ರೋಲ್ ಬಂಕ್ ಎದುರು
ವಿಜಯ ನಗರ ಮುಖ್ಯ ರಸ್ತೆ – ನೇತಾಜಿ ಸರ್ಕಲ್, ದ್ರೌಪದಮ್ಮ ಸರ್ಕಲ್
ತುಂಗಾ ನಗರ 100 ಅಡಿ ರಸ್ತೆ – ಚಾಲುಕ್ಯ ನಗರ (ಎಡಭಾಗ), ಚಾಲುಕ್ಯ ನಗರ (ಬಲಭಾಗ), ಚಾಲುಕ್ಯ ನಗರ ಓಪನ್ ಗ್ರೌಂಡ್, ತುಂಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹೊರ ವರ್ತುಲ ರಸ್ತೆ
ಸಾಗರ ರಸ್ತೆ – ಮೆಗ್ಗಾನ್ ಆಸ್ಪತ್ರೆ ಹೊರ ಭಾಗ, ಎಸ್.ಪಿ.ಕಚೇರಿ ಎದುರು, ದೊಡ್ಡಪೇಟೆ ಪೊಲೀಸ್ ಠಾಣೆ (ಎಡ ಭಾಗ), ಎಪಿಎಂಸಿ ಹತ್ತಿರ (ಎಡಭಾಗ), ಎಪಿಎಂಸಿ ಹತ್ತಿರ (ಬಲಭಾಗ), ಬಿ.ಕೃಷ್ಣಪ್ಪ ಸರ್ಕಲ್ (ಆಲ್ಕೊಳ ಸರ್ಕಲ್), ಡಿವಿಜಿ ಸರ್ಕಲ್ (ಎಡ ಭಾಗ), ಹೊಟೇಲ್ ಅಶೋಕ ಗ್ರ್ಯಾಂಡ್ (ಕ್ರೈಸ್ತ ಸಮುದಾಯದರ ಸ್ಮಶಾನದ ಬಳಿ), ಹೊಟೇಲ್ ಅಶೋಕ ಗ್ರ್ಯಾಂಡ್ (ಚರ್ಚ್ ಎದುರು), ನಂಜಪ್ಪ ಲೈಫ್ ಕೇರ್, ಗಾಡಿಕೊಪ್ಪ, ಮಹೇಂದ್ರ ಶೋ ರೂಂ ಎದುರು (ಗಾಡಿಕೊಪ್ಪ), ಕಾಸ್ಮೋ ಕ್ಲಬ್, ಪ್ರೊ. ಬಿ.ಕೃಷ್ಣಪ್ಪ ಸರ್ಕಲ್ (FREE LEFT).
ಸೋಮಿನಕೊಪ್ಪ ರಸ್ತೆ – ಕಾಶಿಪುರ ಮುಖ್ಯ ರಸ್ತೆ ಎಸ್.ಆರ್.ಎಸ್ ಶಾಮಿಯಾನ ಎದುರು, ಸೋಮಿನಕೊಪ್ಪ ಮುಖ್ಯ ರಸ್ತೆ, ಆದರ್ಶ ನಗರ.
ವಿನೋಬನಗರ 100 ಅಡಿ ರಸ್ತೆ – ಕರಿಯಣ್ಣ ಬಿಲ್ಡಿಂಗ್, ಪೊಲೀಸ್ ಚೌಕಿ (ಪೊಲೀಸ್ ಠಾಣೆ ಹಿಂಭಾಗ), ಇಂದಿರಾ ಗಾಂಧಿ ಸರ್ಕಲ್ (ಬಲ ಭಾಗ), ಇಂದಿರಾ ಗಾಂಧಿ ಸರ್ಕಲ್ (ಎಡ ಭಾಗ), ವಿನೋಬನಗರದ ಶಿವಾಲಯ, ಹಳೆ ಜೈಲ್ ಹತ್ತಿರ (ಫ್ರೀಡಂ ಪಾರ್ಕ್), ಲಕ್ಷ್ಮೀ ಚಿತ್ರಮಂದಿರ ಬಳಿ, ಮಾಧವ ನೆಲೆ ಬಳಿ (ಕಲ್ಲಹಳ್ಳಿ – ಕಾಶಿಪುರ ರಸ್ತೆ).
ಜೈಲ್ ರಸ್ತೆ – ಹೊಸಮನೆ ಬಡಾವಣೆ
ಬೊಮ್ಮನಕಟ್ಟೆ ರಸ್ತೆ – ಬೊಮ್ಮನಕಟ್ಟೆ (ಬಲ ಭಾಗ), ಬೊಮ್ಮನಕಟ್ಟೆ (ಎಡ ಭಾಗ).
ಎನ್.ಟಿ.ರಸ್ತೆ – ಎನ್.ಟಿ.ರಸ್ತೆ (ಹೆಚ್.ಪಿ.ಪೆಟ್ರೋಲ್ ಬಂಕ್ ಎದುರು), ಮಂಡ್ಲಿ (ಎಡ ಭಾಗ), ಮಂಡ್ಲಿ (ಬಲ ಭಾಗ).
ಇದನ್ನೂ ಓದಿ – ಶಿವಮೊಗ್ಗದ ಈ ಆಟೋ ಈಗ ‘ಪುನೀತ ರಥ’, ಚಾಲಕನ ಮನೆ, ಮನ, ಮೊಬೈಲ್ ತುಂಬಾ ಅಪ್ಪು ಅಮರ
ಬೈಪಾಸ್ ರಸ್ತೆ – ತುಂಗಾ ನದಿ ಹೊಸ ಸೇತುವೆ, ಸೂಳೆಬೈಲು (ಎಡ ಭಾಗ), ಊರುಗಡೂರು (ಬಲ ಭಾಗ), ಬೈಪಾಸ್ ರಸ್ತೆ ನರ್ಸಿಂಗ್ ಕಾಲೇಜು ಹತ್ತಿರ ನಂಜಪ್ಪ ಬಡಾವಣೆ, ಊರು ಗಡೂರು ಸರ್ಕಲ್ (ಎಡ ಭಾಗ), ಸೂಳೆಬೈಲು (ಬಲ ಭಾಗ), ನಿಸರ್ಗ ಲೇಔಟ್, ಪ್ರಿಯಾಂಕಾ ಲೇಔಟ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422