SHIVAMOGGA LIVE NEWS | FREEDOM PARK | 06 ಮೇ 2022
ಹಳೇ ಜೈಲು ಆವರಣದಲ್ಲಿರುವ ಫ್ರೀಡಂ ಪಾರ್ಕ್ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆಗೆ ಕಾರಣವೇನು?
ಫ್ರೀಡಂ ಪಾರ್ಕ್ (FREEDOM PARK) ನಿರ್ವಹಣೆ ಅತ್ಯಂತ ಕಳಪೆಯಾಗಿದೆ ಎಂದು ಸಾರ್ವಜನಿಕರು ಮತ್ತು ಜಿಲ್ಲಾ ಬಿಜೆಪಿ ಮುಖಂಡ ಎಸ್.ದತ್ತಾತ್ರಿ ಅವರ ದೂರು ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದರು. ಅದರಂತೆ ಡಿಸಿ ಅವರು ಭೇಟಿ ನೀಡಿದ್ದರು. ಮಹಾನಗರ ಪಾಲಿಕೆ ಅಧಿಕಾರಿಗಳು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ವೇಳೆ ಇದ್ದರು.
ಏನೆಲ್ಲ ಪರಿಶೀಲಿಸಿದರು?
ಫ್ರೀಡಂ ಪಾರ್ಕ್ ಕಟ್ಟಡದಲ್ಲಿ ನಿರ್ಮಾಣವಾಗಿರುವ ಶೌಚಾಲಯ ಶುಚಿ ಇರಲಿಲ್ಲ. ಇದನ್ನು ಗಮನಿಸಿ ಈ ಕಾರ್ಯವನ್ನು ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಗೆ ವರ್ಗಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಕುಡಿಯುವ ನೀರಿನ ಪೂರೈಸುವ ಯಂತ್ರಗಳು ಹಾಳಾಗುತ್ತಿವೆ. ಇದರ ನಿರ್ವಹಣೆ ಮತ್ತು ಶೌಚಾಲಯವನ್ನು ಶುಲ್ಕ ಸಹಿತ ವ್ಯವಸ್ಥೆ ಮಾಡಲು ಟೆಂಡರ್ ಕರೆಯುವಂತೆ ಸೂಚಿಸಿದರು.
ಇದನ್ನೂ ಓದಿ – ಇವತ್ತಿನಿಂದ ಭದ್ರಾ ಜಲಾಶಯದಿಂದ ನೀರು ಹೊರಕ್ಕೆ, ಎಷ್ಟು ದಿನ ನೀರು ಹರಿಸಲಾಗುತ್ತದೆ? ಕಾರಣವೇನು?
ಫ್ರೀಡಂ ಪಾರ್ಕಿನಲ್ಲಿ ನಿತ್ಯ ವಾಕಿಂಗ್ ಮಾಡುವವರ ಅಹವಾಲು ಅಲಿಸಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು, ಮತ್ತೊಂದು ಮಣ್ಣಿನ ವಾಕಿಂಗ್ ಪಾತ್ ನಿರ್ಮಿಸಲು ಸೂಚಿಸಿದರು. ಇಲ್ಲಿರುವ ತೆಂಗಿನ ಮರಗಳನ್ನು ರಕ್ಷಿಸುವ ಜೊತೆಗೆ ಎಲ್ಲಾ ಬಗೆಯ ಆಯುರ್ವೇದ, ಕಾಡುಜಾತಿಯ ಮರಗಳನ್ನು ನೆಡಲಾಗುತ್ತದೆ. ಅವುಗಳ ಹೆಸರನ್ನು ಮಕ್ಕಳಿಗೆ ಪರಿಚಯಿಸುವ ಸಸ್ಯ ಸಂಕುಲವನ್ನು ನಿರ್ಮಿಸುವಂತೆ ಸಲಹೆ ನೀಡಿದರು. ಇದಕ್ಕೆ ಅಗತ್ಯವಾದ ಹಣದ ವ್ಯವಸ್ಥೆಯನ್ನು ಪಾಲಿಕೆ ಹಾಗೂ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ ಎಂದರು.
ಇದನ್ನೂ ಓದಿ – ಭದ್ರಾವತಿ ಗೋಣಿಬೀಡಿನಲ್ಲಿ ಜಿಲ್ಲಾ ಮಟ್ಟದ 3ನೇ ಜಾನಪದ ಸಮ್ಮೇಳನ
ಅಗತ್ಯವಿರುವ ಕಡೆಯಲ್ಲಿ ಗೇಟ್
ಫ್ರೀಡಂ ಪಾರ್ಕ್ ಮುಂದಿನ ಕಾಂಪೌಂಡ್ ಸಂಪೂರ್ಣಗೊಳಿಸುವ ಜೊತೆಗೆ ಅಗತ್ಯವಿರುವೆಡೆ ಗೇಟನ್ನು ಹಾಕುವಂತೆ ಸೂಚಿಸಿದರು. ಇಡೀ ವ್ಯವಸ್ಥೆ ನೋಡಿಕೊಳ್ಳುವ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಒತ್ತಾಸೆಗೆ ಪೂರಕವಾಗಿ ಸೂಚಿಸಿದರು. ಅಲ್ಲದೆ ಇಲ್ಲಿ ಮದ್ಯ ಸೇವನೆ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಅಬಕಾರಿ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿದರು.
ಬಿಜೆಪಿ ಮುಖಂಡ ಎಸ್.ದತ್ತಾತ್ರಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ – ಭದ್ರಾವತಿಯಲ್ಲಿ ಹಳದಮ್ಮ ದೇವಿ ಜಾತ್ರೆ, ಸಿಡಿ ಉತ್ಸವ ಕಣ್ತುಂಬಿಕೊಳ್ಳಲು ಜನವೋ ಜನ