ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 28 ಡಿಸೆಂಬರ್ 2019
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶಿವಮೊಗ್ಗದ ಎಲ್ಲ ಪ್ರಾಥಮಿಕ ಕೃಷಿ ಸಂಘಗಳು ಡಿಜಿಟಲಿಕರಣಗೊಳ್ಳುತ್ತಿವೆ. ಇದಕ್ಕಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸಾಫ್ಟ್’ವೇರ್ ಒಂದನ್ನು ಸಿದ್ಧಪಡಿಸುತ್ತಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮಾರ್ಚ್ 30ರ ಒಳಗೆ ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿರುವ 168 ಪ್ರಾಥಮಿಕ ಕೃಷಿ ಸಂಘಗಳನ್ನು ಡಿಜಿಟಲಿಕರಣಗೊಳಿಸಲಾಗುತ್ತದೆ ಎಂದರು.
ಎಲ್ಲಕ್ಕು ಕಾಮನ್ ಸಾಫ್ಟ್’ವೇರ್
ಶಿವಮೊಗ್ಗ ಡಿಸಿಸಿ ಬ್ಯಾಂಕ್’ನಿಂದಲೇ ಎಲ್ಲ ಪ್ರಾಥಮಿಕ ಕೃಷಿ ಸಂಘಗಳಿಗೆ ಸಾಫ್ಟ್’ವೇರ್ ಸಿದ್ಧಪಡಿಸಲಾಗುತ್ತದೆ. ಎಲ್ಲ ಸಂಘಗಳು ಒಂದೇ ಸಾಫ್ಟ್’ವೇರ್ ಬಳಕೆ ಮಾಡಿಕೊಳ್ಳಬೇಕು. ಆ ಸಾಫ್ಟ್’ವೇರ್ ಮೂಲಕ ಪ್ರತಿ ಸಂಘದ ವಹಿವಾಟು ವಿವರವು ಡಿಸಿಸಿ ಬ್ಯಾಂಕ್’ಗೆ ನೇರವಾಗಿ ಲಭ್ಯವಾಗಲಿದೆ. ಸಾಫ್ಟ್’ವೇರ್ ಸಿದ್ಧಪಡಿಸಲು ಈಗಾಗಲೇ ತಂಡವೊಂದನ್ನು ರಚಿಸಲಾಗಿದೆ. ಸದ್ಯದಲ್ಲೇ ಇದಕ್ಕೆ ಟೆಂಡರ್ ಕರೆಯಲಾಗುತ್ತದೆ ಎಂದರು.
ಬೈಕು, ಕಾರು, ಜೀಪು, ಆಟೋಗೆ ಲೋನ್
ರೈತರ ಅನುಕೂಲಕ್ಕೆ ವಾಹನ ಸಾಲ ನೀಡಲು ಡಿಸಿಸಿ ಬ್ಯಾಂಕ್ ನಿರ್ಧರಿಸಿದೆ. ಬೈಕು, ಕಾರು, ಜೀಪ್ ಖರೀದಿಗೆ ಲೋನ್ ಕೊಡಲಾಗುತ್ತದೆ. ಶೇ.80ರಷ್ಟು ಮೊತ್ತವನ್ನು ಸಾಲ ನೀಡಲಾಗುತ್ತದೆ. ರೈತರು ತಮ್ಮ ಜಮೀನಿನ ಪಹಣಿ ಮತ್ತು ಕೊಟೇಷನ್ ನೀಡಿದರೆ ಸಾಲ ಮಂಜೂರಾತಿ ಮಾಡಲಾಗುತ್ತದೆ. ಇನ್ನು ಪರಿಸರ ಸ್ನೇಹಿ ಈ-ಆಟೋ ಖರೀದಿಗೂ ಬ್ಯಾಂಕ್ ಸಾಲ ನಿಡಲಿದೆ ಎಂದು ಮಂಜುನಾಥಗೌಡ ತಿಳಿಸಿದರು.
ಎಟಿಎಂ ಕಾರ್ಡು, ಷೆಡ್ಯೂಲ್ ಬ್ಯಾಂಕಿಂಗ್
ಡಿಸಿಸಿ ಬ್ಯಾಂಕ್’ನಲ್ಲಿ 2.40 ಲಕ್ಷ ಸೇವಿಂಗ್ ಬ್ಯಾಂಕ್ ಅಕೌಂಟ್’ಗಳಿವೆ. ಈ ಪೈಕಿ 1.40 ಲಕ್ಷ ಗ್ರಾಹಕರಿಗೆ ಈಗಾಗಲೇ ಎಟಿಎಂ ಕಾರ್ಡುಗಳನ್ನು ವಿತರಿಸಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಉಳಿದ ಗ್ರಾಹಕರಿಗೂ ಕಾರ್ಡ್ ವಿತರಿಸಲಾಗುತ್ತದೆ. ಇನ್ನು, 12 ಸಾವಿರ ಸ್ವಸಹಾಯ ಗುಂಪುಗಳಿವೆ. 3600 ಗುಂಪುಗಳು ಡಿಸಿಸಿ ಬ್ಯಾಂಕಿಗೆ ಲಿಂಕ್ ಆಗಿವೆ. ಶೇ.50ರಷ್ಟು ಸ್ವಸಾಹಯ ಸಂಘಗಳನ್ನು ಬ್ಯಾಂಕಿನ ವ್ಯಾಪ್ತಿಗೆ ತರಬೇಕು ಎಂಬ ಗುರಿ ಇದೆ. ಮತ್ತೊಂದೆಡೆ ವಾರ್ಷಿಕ ಸಾವಿರ ಕೋಟಿ ವಹಿವಾಟು ನಡೆಸುವ ಬ್ಯಾಂಕುಗಳು ಷೆಡೂಲ್ ಬ್ಯಾಂಕ್ ಎಂದು ಗುರುತಿಸಲಾಗುತ್ತದೆ. ಮಾರ್ಚ್ ಅಂತ್ಯದ ವೇಳೆಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಈ ಗುರಿ ತಲುಪಲಿದೆ. ಈಗಾಗಲೇ ವರ್ಕಿಂಗ್ ಕ್ಯಾಪಿಟಲ್ 1400 ಕೋಟಿ ರೂ. ಇದೆ ಎಂದರು.
ವ್ಯವಸ್ಥಾಪಕ ನಿರ್ದೆಶಕ ರಾಜಣ್ಣ ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಯೋಗೇಶ್, ದುಗ್ಗಪ್ಪಗೌಡ, ಎಸ್.ಪಿ.ದಿನೇಶ್, ಹೆಚ್.ಎಲ್.ಷಡಾಕ್ಷರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಡಿಸಿಸಿ ಬ್ಯಾಂಕ್ ವತಿಯಿಂದ ಹೊಸ ವರ್ಷದ ಕ್ಯಾಲೆಂಡ್ ಮತ್ತು ಡೈರಿ ಬಿಡುಗಡೆ ಮಾಡಲಾಯಿತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Shimoga DCC Bank to prepare new software for the smooth functioning. Bank President RM Manjunatha Gowda said in a press meet. DCC Bank offers 80% Vehicle Loan for Farmers.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422